Sabarimala women entry case: ‘ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ?’ ಅರ್ಚಕರಿಗೆ ಸುಪ್ರೀಂ ಪ್ರಶ್ನೆ

Kannadaprabha News   | Kannada Prabha
Published : Apr 22, 2026, 08:42 AM IST
 Does Constitution not protect devotees barred from touching God SC asks Priests

ಸಾರಾಂಶ

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ಪ್ರಧಾನ ಅರ್ಚಕರನ್ನು ಪ್ರಶ್ನಿಸಿದೆ. ಸಂಪೂರ್ಣ ಭಕ್ತಿಯಿದ್ದರೂ ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರಬೇಕಲ್ಲವೇ ಎಂದು ನ್ಯಾಯಾಧೀಶರು ಕೇಳಿದ್ದಾರೆ.

- ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಣೆಯಲ್ಲಿ ಅಭಿಪ್ರಾಯ

ಪಿಟಿಐ ನವದೆಹಲಿ: ‘ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ?’ ಎಂದು ಶಬರಿಮಲೆ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರನ್ನು, ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

9 ನ್ಯಾಯಾಧೀಶರ ಸಂವಿಧಾನ ಪೀಠವು ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಸೇರಿ ವಿವಿಧ ಆಚರಣೆಗಳ ಕುರಿತು ವಿಚಾರಣೆ ನಡೆಸುತ್ತಿದೆ.

ಈ ವೇಳೆ ಶಬರಿಮಲೆ ಅರ್ಚಕರ ಪರ ಹಾಜರಾದ ಹಿರಿಯ ವಕೀಲ ವಿ. ಗಿರಿ, ‘ಭಕ್ತನೊಬ್ಬ ದೇವಸ್ಥಾನಕ್ಕೆ ಪೂಜೆಗೆ ಹೋದಾಗ ಅದು ದೇವತೆಯ ಗುಣಲಕ್ಷಣಗಳಿಗೆ ವಿರುದ್ಧವಾಗಿರಲು ಸಾಧ್ಯವಿಲ್ಲ. ಅವನು/ಅವಳು ದೇವತೆಯ ಅಗತ್ಯ ಗುಣಲಕ್ಷಣಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದೇವಾಲಯಗಳಲ್ಲಿನ ಆಚರಣೆಗಳು ಧರ್ಮದ ಅವಿಭಾಜ್ಯ ಅಂಗವಾಗಿವೆ’ ಎಂದರು.

ಇದಕ್ಕೆ ಆಕ್ಷೇಪಿಸಿದ ನ್ಯಾ। ಅಮಾನುಲ್ಲಾ, ‘ನಾನು ದೇಗುಲಕ್ಕೆ ನೂರು ಪ್ರತಿಶತ ನಂಬಿಕೆಯೊಂದಿಗೆ ಹೋಗುತ್ತೇನೆ. ನಾನು ಸಂಪೂರ್ಣ ಭಕ್ತಿ ಹೊಂದಿದ್ದೇನೆ. ನನ್ನ ಹೃದಯದಲ್ಲಿ ಯಾವುದೇ ಅಶುದ್ಧತೆಯಿಲ್ಲ. ಆದರೆ ಒಂದು ನಿರ್ದಿಷ್ಟ ಸನ್ನಿವೇಶದ ಕಾರಣ ನೀಡಿ ನೀವು ದೇವರನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನನಗೆ ಹೇಳಲಾಗುತ್ತದೆ. ಈಗ, ಸಂವಿಧಾನವು ರಕ್ಷಣೆಗೆ ಬರುವುದಿಲ್ಲವೇ?" ಎಂದು ಪ್ರಶ್ನಿಸಿದರು. ‘ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವೆ ವ್ಯತ್ಯಾಸವಿರುವುದಿಲ್ಲ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: Sabarimala women entry case - ‘ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ?’ ಅರ್ಚಕರಿಗೆ ಸುಪ್ರೀಂ ಪ್ರಶ್ನೆ
ಕೇರಳದಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ: 13 ಸಾವು, ಛಿದ್ರಗೊಂಡ ದೇಹಗಳು; ತ್ರಿಶೂರ್‌ನಲ್ಲಿ ಭೀಕರ ದುರಂತ