ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್, ತಮ್ಮ ಸೋದರಿ ಶರ್ಮಿಳಾ ವಿರುದ್ಧ ಆಸ್ತಿ ಕಬಳಿಕೆ ಕೇಸ್ ದಾಖಲಿಸಿದ್ದಾರೆ. ಒಡಹುಟ್ಟಿದವರ ನಡುವಿನ ಆಸ್ತಿ ವಿವಾದವು ಕಾನೂನು ಹೋರಾಟಕ್ಕೆ ತಿರುಗಿದೆ.
ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್, ತಮ್ಮ ಸೋದರಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ವಿರುದ್ಧ ಆಸ್ತಿ ಕಬಳಿಕೆ ಕೇಸ್ ದಾಖಲಿಸಿದ್ದಾರೆ.
ತಮ್ಮ ಹಾಗೂ ತಮ್ಮ ಪತ್ನಿ ಭಾರತಿ ಹೆಸರಲ್ಲಿದ್ದ, ಸರಸ್ವತಿ ಪವರ್ ಮತ್ತು ಇಂಡಸ್ಟ್ರೀಸ್‌ನ ಶೇರುಗಳನ್ನು ಶರ್ಮಿಳಾ ಅಕ್ರಮವಾಗಿ ತಮ್ಮ ಹಾಗೂ ತಮ್ಮ ತಾಯಿ ವಿಜಯಮ್ಮ ಅವರ ಹೆಸರಿಗೆ ವರ್ಗಾಯಿಸಿದ್ದಾರೆಂದು ಆರೋಪಿಸಿ ಜಗನ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದಾರೆ.
ತಮ್ಮ ಹಾಗೂ ಪತ್ನಿಯ ಪಾಲಿನ ನೂರಾರು ಕೋಟಿ ರು. ಮೌಲ್ಯದ ಆಸ್ತಿಯನ್ನು ಒಡಹುಟ್ಟಿದ ಸಹೋದರಿಗೆ ಉಚಿತವಾಗಿ ವರ್ಗಾಯಿಸುವ ಸಂಬಂಧ 2019ರಲ್ಲಿ ಜಗನ್ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದ್ದರು. ಆದರೆ ಬಳಿಕ ಇಬ್ಬರ ಸಂಬಂಧವೂ ಹದಗೆಟ್ಟು ಸೋದರಿಯಿಂದ ಜಗನ್ ದೂರದೂರವಾಗಿದ್ದರು. ಹೀಗಾಗಿ ಆಸ್ತಿ ಹಸ್ತಾಂತರ ನಿರ್ಧಾರವನ್ನು ಜಗನ್ ಕೈಬಿಟ್ಟಿದ್ದರು. ಈ ನಡುವೆ ಕೆಲ ಸಮಯದ ಹಿಂದೆ ಸರಸ್ವತಿ ಪವರ್‌ನ ಆಡಳಿತ ಮಂಡಳಿ ಸದಸ್ಯೆಯೂ ಆಗಿರುವ ಶರ್ಮಿಳಾ ನನ್ನ ಹಾಗೂ ನನ್ನ ಪತ್ನಿಯ ಹೆಸರಿನಲ್ಲಿದ್ದ ಷೇರು ಪಾಲನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಜಗನ್ ದೂರಿದ್ದಾರೆ.
ವಿಮಾನಗಳಿಗೆ ಹುಸಿ ಬಾಂಬ್ ಕರೆ; ನೀವು ಅಪರಾಧಕ್ಕೆ ಬೆಂಬಲ ನೀಡುತ್ತಿದ್ದೀರಿ; ಎಕ್ಸ್‌ಗೆ ಕೇಂದ್ರ ತೀವ್ರ ತರಾಟೆ