ನರೇಂದ್ರ ಮೋದಿ ವಿದೇಶಾಂಗ ನೀತಿ ಹೊಗಳಿ, ಭವಿಷ್ಯದಲ್ಲಿ ಎಲ್ಲವೂ ಭಾರತ ಎಂದ ಪುಟಿನ್!

Published : Oct 28, 2022, 01:07 PM IST
ನರೇಂದ್ರ ಮೋದಿ ವಿದೇಶಾಂಗ ನೀತಿ ಹೊಗಳಿ, ಭವಿಷ್ಯದಲ್ಲಿ ಎಲ್ಲವೂ ಭಾರತ ಎಂದ ಪುಟಿನ್!

ಸಾರಾಂಶ

ಭಾರತದ ಸ್ವತಂತ್ರ ವಿದೇಶಾಂಗ ನೀತಿ ಕುರಿತು ಈಗಾಗಲೇ ವಿಶ್ವದ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಭವಿಷ್ಯದಲ್ಲಿ ಭಾರತವೇ ಎಲ್ಲಾ ಎಂದಿದ್ದಾರೆ. ವ್ಲಾದಿಮಿರ್ ಪುಟಿನ್ ಭಾಷಣದ ಹೈಲೈಟ್ಸ್ ಇಲ್ಲಿದೆ.

ಮಾಸ್ಕೋ(ಅ.28): ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ವಿದೇಶಾಂಗ ನೀತಿ, ಭಾರತದ ದೂರ ದೃಷ್ಟಿಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೊಗಳಿದ್ದಾರೆ. ಪ್ರಧಾನಿ ದೇಶಭಕ್ತ. ಮೋದಿಯ ಸ್ವತಂತ್ರ ವಿದೇಶಾಂಗ ನೀತಿಯಡಿಯಲ್ಲಿ ಭಾರತದ ಹಲವು ಮಹತ್ವದ ಬದಲಾವಣೆ ಕಂಡಿದೆ. ಮೇಕ್ ಇನ್ ಇಂಡಿಯಾ ಮೂಲಕ ಭಾರತ ಆರ್ಥಿಕತೆ, ಉತ್ಪಾದಕೆ, ರಫ್ತು ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಬಲಿಷ್ಠಗೊಳಿಸಿದ್ದಾರೆ. ಭವಿಷ್ಯ ಭಾರತದ್ದು ಎಂದು ಪುಟಿನ್ ಮಾಸ್ಕೋದ ವಲ್ಡಾಯಿ ಡಿಸ್ಕಷನ್ ಕ್ಲಬ್‌ನಲ್ಲಿನ ಭಾಷಣದಲ್ಲಿ ಹೇಳಿದ್ದಾರೆ.  ಈ ಭಾಷಣದಲ್ಲಿ ರಷ್ಯಾ ಅಧ್ಯಕ್ಷ ರಷ್ಯಾ, ಉಕ್ರೇನ್ ನಡುವಿನ ಯುದ್ಧ ಸೇರಿದಂತೆ ತಮ್ಮ ದೇಶದ ವಿಚಾರಕ್ಕಿಂತ ಹೆಚ್ಚಾಗಿ ಭಾರತ ಹಾಗೂ ಪ್ರಧಾನಿ ಮೋದಿ ಕುರಿತು ಹೇಳಿದ್ದಾರೆ. ಮೋದಿ ನಡೆ, ನಿರ್ಧಾರದಿಂದ ಭಾರತ ಇಂದು ಸ್ವಾವಲಂಬಿಯಾಗಿ ಬೆಳೆದು ನಿಂತಿದೆ. ಇದೇ ಕಾರಣಕ್ಕೆ ಭವಿಷ್ಯದಲ್ಲಿ ಎಲ್ಲಾ ದೇಶಗಳು ಭಾರತವನ್ನೇ ಆಶ್ರಯಿಸಲಿದೆ ಎಂದಿದ್ದಾರೆ.

ಬ್ರಿಟಿಷ್ ಕಾಲೋನಿಯಿಂದ ಹೊರಬಂದು ಸ್ವತಂತ್ರ್ಯ ಭಾರತ ಕಟ್ಟಿಕೊಂಡ ಬಳಿಕ ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿತು. ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಚಿತ್ರಣ ಬದಲಾಗಿದೆ. ವಿದೇಶಾಂಗ ನೀತಿಗಳು ಜನಪರವಾಗಿದೆ. ಭಾರತ ಯಾರ ಮುಂದೆ ತಲೆಬಾಗುವ ಪರಿಸ್ಥಿತಿ ಭಾರತಕ್ಕಿಲ್ಲ ಎಂದು ಪುಟಿನ್ ಹೇಳಿದ್ದಾರೆ.

 

ಉಕ್ರೇನ್ - ರಷ್ಯಾ ಯುದ್ಧಕ್ಕೆ Narendra Modi ವಿರೋಧಿಸಿದ್ದು ಸರಿ: ವಿಶ್ವದ ನಾಯಕರಿಂದ ಶ್ಲಾಘನೆ

ಪ್ರಧಾನಿ ಮೋದಿ ದೇಶಭಕ್ತ. ದೇಶದ ಕುರಿತು ಅತೀವ ಕಾಳಜಿ ಹೊಂದಿರುವ ಕಾರಣ ಭಾರತದ ಎಲ್ಲಾ ದಿಕ್ಕಿನಲ್ಲೂ ಅಭಿವೃದ್ಧಿ ಕಾಣುತ್ತಿದೆ. ಯಾರ ಮುಲಾಜಿಗೂ ಬೀಳದ ತನ್ನ ನಾಗರೀಕರ ಹಿತ ದೃಷ್ಟಿಯಿಂದ ವ್ಯಾಪಾರ ವಹಿವಾಟು ನಡೆಸುತ್ತಿದೆ. ಈ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ಮೋದಿಗೆ ಅಭಿನಂದನೆಗಳು ಎಂದು ಪುಟಿನ್ ಹೇಳಿದ್ದಾರೆ.

ಪ್ರಧಾನಿ ಮೋದಿ ಕೃಷಿ ರಸಗೊಬ್ಬರಗಳುನ್ನು ಹೈಚ್ಚಿನ ಸಂಖ್ಯೆಯಲ್ಲಿ ಪೂರೈಸುವಂತೆ ಕೇಳಿಕೊಂಡಿದ್ದಾರೆ. ಭಾರತದ ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ಮೋದಿ ಮುಂದಾಗಿದ್ದಾರೆ. ಮೋದಿ ಮನವಿಯಂತೆ ನಾವು 7ರಿಂದ 8 ಪಟ್ಟು ಹೆಚ್ಚಿನ ಕೃಷಿ ರಸಗೊಬ್ಬರಗಳನ್ನು ರಫ್ತು ಮಾಡಿದ್ದೇವೆ ಎಂದಿದ್ದಾರೆ. 

 

ಕಾದಿದ್ಯಾ ಅಪಾಯ.. ನ್ಯೂಕ್ಲಿಯರ್‌ ಡ್ರಿಲ್‌ ಆರಂಭಿಸಿದ ರಷ್ಯಾ!

ರಷ್ಯಾ ನ.8ಕ್ಕೆ ಜೈಶಂಕರ್‌: ಯುದ್ಧ ಆರಂಭದ ಬಳಿಕ ಮೊದಲ ಭೇಟಿ
ರಷ್ಯಾದ ವಿದೇಶಾಂಗ ಸಚಿವ ಸೆರ್ಗೈ ಲಾವ್ರೋವ್‌ ಅವರೊಂದಿಗೆ ಮಾತುಕತೆ ನಡೆಸಲು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರು ನ.8ರಂದು ರಷ್ಯಾ ರಾಜಧಾನಿ ಮಾಸ್ಕೋಗೆ ಪ್ರಯಾಣ ಬೆಳೆಸಲಿದ್ದಾರೆ. ಇದು ರಷ್ಯಾ-ಉಕ್ರೇನ್‌ ನಡುವಿನ ಸಮರ ಆರಂಭದ ನಂತರ ರಷ್ಯಾಗೆ ಭಾರತದ ಪ್ರಮುಖರೊಬ್ಬರು ನೀಡುತ್ತಿರುವ ಮೊದಲ ಭೇಟಿಯಾಗಿದೆ. ಹೀಗಾಗಿ ಈ ಭೇಟಿ ಕುತೂಹಲ ಮೂಡಿಸಿದೆ. ಸಭೆಯಲ್ಲಿ ಉಭಯ ಸಚಿವರು ದ್ವಿಪಕ್ಷೀಯ ಸಂಬಂಧಗಳ ಪ್ರಸ್ತುತ ಸ್ಥಿತಿ ಮತ್ತು ಅಂತಾರಾಷ್ಟ್ರೀಯ ಕಾರ‍್ಯಸೂಚಿಯ ಕುರಿತಾಗಿ ಚರ್ಚೆ ನಡೆಸಲಿದ್ದಾರೆ ಎಂದು ರಷ್ಯಾ ವಕ್ತಾರೆ ಮರಿನಾ ಜಖರೋವ ಅವರು ಹೇಳಿದ್ದಾರೆ. ಆದರೆ ಈ ಕುರಿತಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ.

ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಿ: ಭಾರತ
ಉಕ್ರೇನ್‌ನಲ್ಲಿ ಯುದ್ಧ ಮತ್ತಷ್ಟುತೀವ್ರಗೊಳ್ಳುತ್ತಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಸೇನೆಯನ್ನು ಹಿಂಪಡೆದುಕೊಂಡು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ತನ್ನ ನಿಲುವನ್ನು ಪುನರುಚ್ಚರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌