SPB ಚಿಕಿತ್ಸೆಗೆ 3 ಕೋಟಿ, ಹಣ ವೆಂಕಯ್ಯ ನಾಯ್ಡು ಕಡೆಯಿಂದ! ಗೊಂದಲಗಳಿಗೆ ತೆರೆ

By Suvarna NewsFirst Published Sep 28, 2020, 8:00 PM IST
Highlights

ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಆಸ್ಪತ್ರೆ ವೆಚ್ಚದ ಬಗ್ಗೆ ವದಂತಿ/ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ ಎಸ್‌ಪಿ ಚರಣ್/ ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಈ ತರಹ ಮಾಡುತ್ತಾರೆ? 

ಚೆನ್ನೈ(ಸೆ. 28)  ಅಪಾರ ಸಂಗೀತ ಖಜಾನೆಯನ್ನು ಬಿಟ್ಟು ಅಗಲಿದ ಚೇತನ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆಸ್ಪತ್ರೆ ಖರ್ಚು ವೆಚ್ಚದ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ  ಜೋರಾದ ಚರ್ಚೆ ಯಾಗಿತ್ತು. 

 ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸಾವಿನ ನಂತರ ಬಾಕಿ ಉಳಿದಿದ್ದ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮುಂದಾಗಿದ್ದರು ಎಂಬ ವದಂತಿಗಳು ಹಬ್ಬಿದ್ದವು. ಇದೆಲ್ಲದಕ್ಕೆಎಸ್ ಪಿಬಿ ಪುತ್ರ ಎಸ್‌ಪಿ ಚರಣ್ ಸ್ಪಷ್ಟನೆ ನೀಡಿದ್ದು ದಾಖಲೆ ಸಮೇತ ಎಲ್ಲ ವಿವರ ನೀಡಿದ್ದಾರೆ.

ಹಿರಿಯ ಗಾಯಕನಿಗೆ ಭಾರತ ರತ್ನ ಗೌರವ ಸಿಗಲಿ; ಸಿಎಂ ಪತ್ರ

ವದಂತಿಗಳ ನಂತರ ಎಂಜಿಎಂ ಆಸ್ಪತ್ರೆಯ ವೈದ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಚರಣ್ ಅವರು, ನನ್ನ ತಂದೆಯ ಮರಣದ ನಂತರ, ಇನ್ನು ಎಷ್ಟು ಹಣ ಪಾವತಿಸಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿದ್ದೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಬಾಕಿ ಬಿಲ್ ಸ್ವೀಕರಿಸುವುದಿಲ್ಲ ಎಂದು ಹೇಳಿದರು.

"

 ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆ ಗಾಯಕನ ಚಿಕಿತ್ಸೆಗಾಗಿ 3 ಕೋಟಿ ರೂ.ಗಳಿಗಿಂತ ಹೆಚ್ಚಿನ ಬಿಲ್ ಮಾಡಿದೆ. 1.85 ಕೋಟಿ ರೂ. ಬಾಕಿ ಇದೆ ಎಂಬ ಸುದ್ದಿ ಹರಿದಾಡಿತ್ತು.

ನನಗೆ ಗೊತ್ತಾಗುತ್ತಿಲ್ಲ. ಜನರು  ಯಾಕೆ ಈ ರೀತಿ ಎಲ್ಲ ಮಾತನಾಡುತ್ತಾರೆ? ಎಂದು ಪ್ರಶ್ನೆ ಮಾಡಿರುವ ಚರಣ್ ಇದು ನಿಜಕ್ಕೂ ವಿಷಾದದ ಸಂಗತಿ ಎಂದು ಹೇಳಿದ್ದಾರೆ. 

 

 

 

click me!