ಕುನೋದಲ್ಲಿ 20 ಚೀತಾಗಳಿಗೆ ಬೇಕಾದಷ್ಟುಆಹಾರವಿಲ್ಲ!

By Kannadaprabha NewsFirst Published Mar 5, 2023, 8:06 AM IST
Highlights

ಆಫ್ರಿಕಾ ಮತ್ತು ನಮೀಬಿಯಾದಿಂದ 2 ಹಂತದಲ್ಲಿ ತರಲಾದ 20 ಚೀತಾಗಳ ಆವಾಸ ಸ್ಥಾನವಾಗಿರುವ ಮಧ್ಯಪ್ರದೇಶದ ಕುನೋ ಅಭಯಾರಣ್ಯವು, ಇಷ್ಟುಪ್ರಮಾಣದ ಚೀತಾಗಳಿಗೆ ಅಗತ್ಯ ಪ್ರಮಾಣದ ಆಹಾರ ಒದಗಿಸುವ ಸಮೃದ್ಧವಾಗಿಲ್ಲ’ ಎಂದು ಇಡೀ ಯೋಜನೆಯ ರೂವಾರಿ ಯಾದವೇಂದ್ರ ದೇವ್‌ ಝಾಲಾ ಕಳವಳ ವ್ಯಕ್ತಪಡಿಸಿದ್ದಾರೆ

ಇಂದೋರ್‌: ‘ಆಫ್ರಿಕಾ ಮತ್ತು ನಮೀಬಿಯಾದಿಂದ 2 ಹಂತದಲ್ಲಿ ತರಲಾದ 20 ಚೀತಾಗಳ ಆವಾಸ ಸ್ಥಾನವಾಗಿರುವ ಮಧ್ಯಪ್ರದೇಶದ ಕುನೋ ಅಭಯಾರಣ್ಯವು, ಇಷ್ಟುಪ್ರಮಾಣದ ಚೀತಾಗಳಿಗೆ ಅಗತ್ಯ ಪ್ರಮಾಣದ ಆಹಾರ ಒದಗಿಸುವ ಸಮೃದ್ಧವಾಗಿಲ್ಲ’ ಎಂದು ಇಡೀ ಯೋಜನೆಯ ರೂವಾರಿ ಯಾದವೇಂದ್ರ ದೇವ್‌ ಝಾಲಾ ಕಳವಳ ವ್ಯಕ್ತಪಡಿಸಿದ್ದಾರೆ.

ಚೀತಾಗಳಿಗೆ ಜಿಂಕೆ ಜಾತಿಯ ಪ್ರಾಣಿಯಾದ ಸಾರಂಗ ಪ್ರಮುಖ ಆಹಾರ. 2014ರಲ್ಲಿ ಕುನೋ ಅರಣ್ಯದಲ್ಲಿ ಪ್ರತಿ ಚದರ ಕಿ.ಮೀಗೆ 60 ಸಾರಂಗಗಳಿದ್ದವು. ಆದರೆ ಅವುಗಳ ಪ್ರಮಾಣ ಇದೀಗ ಕೇವಲ 20ಕ್ಕೆ ಇಳಿದಿದೆ. ಇದು ಕುನೋ ಅಭಯಾರಣ್ಯವು ಗರಿಷ್ಠ 15 ಚೀತಾಗಳಿಗೆ ಅಗತ್ಯ ಪ್ರಮಾಣದ ಆಹಾರವನ್ನು ಒದಗಿಸಲ್ಲದು ಎಂಬ ಅಂಕಿ ಅಂಶಗಳನ್ನು ನಮ್ಮ ಮುಂದಿಟ್ಟಿದೆ ಎಂದು ಝಲಾ ಹೇಳಿದ್ದಾರೆ.

ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!

‘ಹೀಗಾಗಿ ಈ ಚೀತಾಗಳನ್ನು ಬೇರೆ ಅಭಯಾರಣ್ಯಕ್ಕೆ ಸಾಗಿಸುವ ಅನಿವಾರ್ಯತೆ ಇದೆ. ಮಧ್ಯಪ್ರದೇಶದ್ದೇ (Madhya Pradesh) ಆದ ಗಂಗಾಸಾಗರ್‌ (Ganga Sagar) ಮತ್ತು ನೌರಾದೇಹಿ ಅಭಯಾರಣ್ಯಗಳು ಚೀತಾಗಳಿಗೆ ವಾಸಕ್ಕೆ ಸೂಕ್ತವಾಗುವಂತೆ ಮಾಡಲು ಕನಿಷ್ಠ 750 ಕೋಟಿ ಅನುದಾನ ಮತ್ತು 1 ವರ್ಷ ಸಮಯ ಬೇಕು. ಹೀಗಾಗಿ ಇದನ್ನು ರಾಜಸ್ಥಾನದ ಮುಕುಂದರಾ ಅಭಯಾರಣ್ಯಕ್ಕೆ ಸಾಗಿಸುವುದು ಸೂಕ್ತ. ಮೊದಲಿಗೆ ಚೀತಾಗಳನ್ನು ಇರಿಸಿಕೊಳ್ಳಲು ರಾಜಸ್ಥಾನ ಸರ್ಕಾರ ಹಿಂದೇಟು ಹಾಕಿತ್ತು. ಆದರೆ ಬಳಿಕ ರಾಜ್ಯ ಸರ್ಕಾರ ಒಪ್ಪಿಕೊಂಡರೂ ಅವುಗಳನ್ನು ಅಲ್ಲಿಗೆ ಕಳುಹಿಸಲು ಕೇಂದ್ರ ಸರ್ಕಾರ (central Govt) ಮನಸ್ಸು ಮಾಡುತ್ತಿಲ್ಲ’ ಎಂದು ಝಾಲಾ ಹೇಳಿದ್ದಾರೆ.

ಮೋದಿ ಭಾರತಕ್ಕೆ ಚೀತಾ ತಂದಿದ್ದು ಯಾಕೆ? ಕಾಂಗ್ರೆಸ್ ನಾಯಕನ ಉತ್ತರಕ್ಕೆ ಬೆಚ್ಚಿ ಬೆರಗಾದ ಭಾರತ!

ಭಾರತ ಸರ್ಕಾರ (Indian Govt) ಪ್ರತಿ ವರ್ಷ ಕನಿಷ್ಠ 12ರಂತೆ ಮುಂದಿನ 10 ವರ್ಷಗಳ ಕಾಲ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಚೀತಾಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಇವುಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಸಾಗಿಸುವ ಸಾಧ್ಯತೆ ಇದೆ. ಹೀಗೆ ಸಾಗಿಸುವ ಸಾಧ್ಯತೆ ಇರುವ ಸಂಭವನೀಯ ರಾಜ್ಯಗಳ ಪೈಕಿ ಕರ್ನಾಟಕ ಕೂಡಾ ಒಂದಾಗಿದೆ ಎಂಬುದು ವಿಶೇಷ.

click me!