
ಸತ್ನಾ (ಮ.ಪ್ರ.): 'ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತ ಎಂಬ ಮನೆಯೊಳಗಿನ ಕೋಣೆ ಇದ್ದಂತೆ, ಆದರೆ ಅಪರಿಚಿತರು ಒಳಗೆ ಬಂದಿದ್ದಾರೆ. ಆ ಕೊಠಡಿ ಮರುವಶ ಮಾಡಿಕೊಳ್ಳಬೇಕು' ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಭಾನುವಾರ ಕರೆ ನೀಡಿದ್ದಾರೆ. ಮಧ್ಯ ಪ್ರದೇಶದ ಸತ್ಪಾದಲ್ಲಿ ಸಿಂಧಿ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, 'ಇಡೀ ಭಾರತ ಒಂದೇ ಮನೆ, ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ಮನೆಯಿಂದ ಬೇರ್ಪಡಿಸಿದ್ದಾರೆ. ಅಲ್ಲಿ ನನ್ನ ಮೇಜು, ಕುರ್ಚಿ ಮತ್ತು ಬಟ್ಟೆಗಳನ್ನು ಇಡಲಾಗುತ್ತಿತ್ತು. ಅವರು (ಪಾಕ್) ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ, ನಾನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು' ಎಂದು ಕರತಾಡನದ ಮಧ್ಯೆ ಹೇಳಿದರು.
'ಸಭೆಯಲ್ಲಿ ಅನೇಕ ಸಿಂಧಿ ಸಹೋದರರು ಕುಳಿತಿದ್ದಾರೆ. ನನಗೆ ತುಂಬಾ ಸಂತಸವಾಗಿದೆ. ಅವರು ಪಾಕ್ ಗೆ ಹೋಗಲಿಲ್ಲ. ಅವಿಭಜಿತ ಭಾರತಕ್ಕೆ ಬಂದರು. ಪರಿಸ್ಥಿತಿ ವೈಪರಿತ್ಯದ ಕಾರಣ ಅವರು ಈ ಮನೆಗೆ ಆಗಮಿಸಿದರು. ಏಕೆಂದರೆ ಇದೂ ಅವರದ್ದೇ ಮನೆ' ಎಂದು ನುಡಿದರು.
ಶ್ರೀನಗರ: 'ಪಹಲ್ದಾಂ ಭಯೋತ್ಪಾದಕರಿಗೆ ಸಹಾಯ ಮಾಡಿದ್ದಕ್ಕಾಗಿ 2 ತಿಂಗಳ ಹಿಂದೆ ಬಂಧಿತನಾಗಿದ್ದ ವ್ಯಕ್ತಿ ಮೊಹಮ್ಮದ್ ಯೂಸುಫ್ ಕಟಾರಿ, ಉಗ್ರರನ್ನು 4 ಬಾರಿ ಭೇಟಿಯಾಗಿ ಅವರಿಗೆ ಫೋನ್ ಚಾರ್ಜರ್ ನೀಡಿದ್ದ. ಇದೇ ಕಾರಣಕ್ಕೆ ಆತನನ್ನು ಬಂಧಿಸಲಾಗಿತ್ತು' ಎಂದು ಕಾಶ್ಮೀರ ಪೊಲೀಸರು ಭಾನುವಾರ ಹೇಳಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನವು ಅಲ್ಲಾಹುನ ಹೆಸರಲ್ಲಿ ನಿರ್ಮಾಣವಾದ ದೇಶ. ನಮ್ಮ ರಕ್ಷಕರು ಅಲ್ಲಾಹುನ ಯೋಧರು. ದೇವರು ಬಯಸಿದರೆ ಈ ಬಾರಿ ಭಾರತ ವನ್ನು ಅದರ ಯುದ್ಧವಿಮಾನಗಳ ಅವಶೇಷಗಳಡಿ ಹೂತು ಹಾಕಲಾಗುವುದು' ಎಂದು ಭಾರತದ ವಿರುದ್ಧ ಪಾಕಿಸ್ತಾನದ ರಕ್ಷಣಾ ಸಚಿವ ಸ್ವಾಜಾ ಆಸಿಫ್ ಮತ್ತೆ ವಿಷಕಾರಿದ್ದಾರೆ.
ಮುಂದೇನಾದರೂ ದುಸ್ಸಾಹಸ ಮೆರೆದರೆ ಪಾಕಿಸ್ತಾನವನ್ನು ಭೂಪಟದಿಂದಲೇ ಅಳಿಸಿ ಹಾಕಲಾಗುವುದು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನೆಯ ಎಚ್ಚರಿಕೆಗೆ ಖ್ವಾಜಾ ಈ ರೀತಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಮೇ ತಿಂಗಳ ಸಂಘರ್ಷದಲ್ಲಿ ಪಾಕ್ ವಿರುದ್ಧ ಸೋತ ಬಳಿಕ ಭಾರತದ ಕೆಲ ರಾಜಕೀಯ ಮತ್ತು ಸೇನಾ
ನಾಯಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರು ತಾವು ಕಳೆದುಕೊಂಡ ವಿಶ್ವಾಸಾರ್ಹತೆ ಮರುಗಳಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದೊಳಗೆ ಆಗುತ್ತಿರುವ ಹಿನ್ನಡೆಯಿಂದ ಜನರ ಗಮನ ಬೇರೆಡೆಸೆಳೆಯಲು ಉದ್ವಿಗ್ನತೆ ಹೆಚ್ಚಳಕ್ಕೆ ಪ್ರಚೋದನೆ ನೀಡುತ್ತಿದ್ದಾರೆ' ಎಂದು ಆಸಿಫ್ ಆರೋಪಿಸಿದ್ದಾರೆ.
'ಈ ಹಿಂದಿನ 0-6 ಅಂಕಗಳ ಸೋಲಿನ ಬಳಿಕ ಅವರು ಮತ್ತೊಮ್ಮೆ ಯುದ್ಧಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ.ದೇವರು ಬಯಸಿದರೆ ಈ ಬಾರಿ ನಮ್ಮ ಅಂಕ ಹಿಂದಿಗಿಂತಲೂ ಸುಧಾರಣೆಯಾಗಲಿದೆ' ಎಂದು ಆಸಿಫ್ ಹೇಳಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನವು ಭಾರತದ 6 ಯುದ್ಧವಿಮಾನ ಉರುಳಿಸಿತ್ತು ಎಂಬ ಹಳೇ ಹೇಳಿಕೆಯನ್ನು ಜ್ಞಾಪಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ