ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್‌ಗೆ ಈಗಾಗಲೇ ನೀಡಲಾಗಿರುವ ಝಡ್ ಶ್ರೇಣಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಡ್ವಾನ್ಸ್ ಸೆಕ್ಯೂರಿಟಿ ಲೈಸನ್ (ಎಎಸ್‌ಎಲ್) ಭದ್ರತೆಯನ್ನು ಒದಗಿಸಲಾಗಿದೆ.
ನವದೆಹಲಿ (ಆ.29_: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್‌ಗೆ ಈಗಾಗಲೇ ನೀಡಲಾಗಿರುವ ಝಡ್ ಶ್ರೇಣಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಡ್ವಾನ್ಸ್ ಸೆಕ್ಯೂರಿಟಿ ಲೈಸನ್ (ಎಎಸ್‌ಎಲ್) ಭದ್ರತೆಯನ್ನು ಒದಗಿಸಲಾಗಿದೆ.
ಎಎಸ್‌ಎಲ್ ಭದ್ರತೆಯನ್ನು ಈಗಾಗಲೇ ಹೊಂದಿರುವ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಪಟ್ಟಿಗೆ ಭಾಗವತ್ ಸೇರ್ಪಡೆಯಾಗಿದ್ದಾರೆ.ಝಡ್ ಶ್ರೇಣಿ ಭದ್ರತೆಯನ್ನು ಹೊಂದಿರುವ ಎಲ್ಲರಿಗೂ ಎಎಸ್‌ಎಲ್ ಭದ್ರತೆಯನ್ನು ನೀಡುವುದಿಲ್ಲ, ಈ ಭದ್ರತೆಯನ್ನು ಸುರಕ್ಷತೆ ಪರಿಶೀಲನೆ ಕಾರಣಕ್ಕೆ ನೀಡಲಾಗುತ್ತದೆ. ಇದರ ಪ್ರಕಾರ ನಾಯಕರು ಭೇಟಿ ನೀಡುವ ಸ್ಥಳದ ಪೂರ್ವಭಾವಿ ಪರಿಶೀಲನೆ, ಸ್ಥಳೀಯ ಪೊಲೀಸರ ಜೊತೆ ಸಮಾಲೋಚನೆ, ಸಂಭವನೀಯ ಅಪಾಯು ಎದುರಿಸಲು ಬೇಕಾದ ಕಾರ್ಯತಂತ್ರ ರಚನೆ ಸೇರಿದಂತೆ ಸುರಕ್ಷತೆ ಪರಿಶೀಲನೆಯ ಹಲವು ಕಾರ್ಯಗಳನ್ನು ಒಳಗೊಂಡಿರುತ್ತದೆ.
undefined
ಇಂಡೋನೇಷ್ಯಾದಲ್ಲಿ ಗಲಭೆ ಆಗಲ್ಲ, ಏಕಂದ್ರೆ ಅಲ್ಲಿ RSS ಇಲ್ಲ ಅಂತ ಹೇಳಿದ್ರಾ ಪ್ರಕಾಶ್ ರಾಜ್ : ಏನಿದು ವಿವಾದ?
ಎರಡು ವಾರಗಳ ಹಿಂದೆ ಅಂತಿಮಗೊಳಿಸಲಾದ ಭಾಗವತ್ ಅವರ ಭದ್ರತೆಯನ್ನು ಹೆಚ್ಚಿಸುವ ನಿರ್ಧಾರವು, ಬಿಜೆಪಿಯೇತರ ಪಕ್ಷಗಳ ನೇತೃತ್ವದ ರಾಜ್ಯಗಳಿಗೆ ಭೇಟಿ ನೀಡಿದಾಗ ಅವರ ಭದ್ರತೆಯನ್ನು ಬಗ್ಗೆ ವೈಫಲ್ಯ ಆಗಿರುವ ಬಗ್ಗೆ ಬಹಿರಂಗಗೊಂಡ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಈ ಹಿಂದೆ, ಭಾಗವತ್ ಅವರ ಝಡ್ ಪ್ಲಸ್ ಭದ್ರತೆಯಲ್ಲಿ ಸಿಐಎಸ್‌ಎಫ್‌ನ ಅಧಿಕಾರಿಗಳು ಮತ್ತು ಗಾರ್ಡ್‌ಗಳು ಭಾಗಿಯಾಗಿದ್ದರು. ಆದಾಗ್ಯೂ, ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಬೆದರಿಕೆ ಹಿನ್ನೆಲೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ವರದಿಯಾಗಿದೆ.