ಇಂಡೋನೇಷ್ಯಾದಲ್ಲಿ ಗಲಭೆ ಆಗಲ್ಲ, ಏಕಂದ್ರೆ ಅಲ್ಲಿ RSS ಇಲ್ಲ ಅಂತ ಹೇಳಿದ್ರಾ ಪ್ರಕಾಶ್ ರಾಜ್ : ಏನಿದು ವಿವಾದ?
ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ಪ್ರಕಾಶ್ ರೈಯವರು ತಮ್ಮ ಹೆಸರನ್ನು ಬಳಸಿಕೊಂಡು ತಾನು ಹೇಳಿದ್ದೇನೆ ಎಂದು ಏನೇನೋ ವಿವಾದಿತ ಹೇಳಿಕೆ ಪೋಸ್ಟ್ ಮಾಡ್ತಿರುವ ಟ್ವಿಟ್ಟರ್ ಖಾತೆಯೊಂದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಬೆಂಗಳೂರು: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ಪ್ರಕಾಶ್ ರೈಯವರು ತಮ್ಮ ಹೆಸರನ್ನು ಬಳಸಿಕೊಂಡು ತಾನು ಹೇಳಿದ್ದೇನೆ ಎಂದು ಏನೇನೋ ವಿವಾದಿತ ಹೇಳಿಕೆ ಪೋಸ್ಟ್ ಮಾಡ್ತಿರುವ ಟ್ವಿಟ್ಟರ್ ಖಾತೆಯೊಂದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಇಂಡೋನೇಷ್ಯಾದಲ್ಲಿ ಯಾವುದೇ ಗಲಭೆ ಆಗುವುದಿಲ್ಲ ಏಕೆಂದರೆ ಅಲ್ಲಿ ಬಿಜೆಪಿಯ ಸೈದಾಂತಿಕ ಮಾತೃ ಸಂಘಟನೆ ಆರ್‌ಎಸ್‌ಎಸ್ (Rashtriya Swayamsevak Sangh) ಇಲ್ಲ, ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ ಎಂಬಂತೆ ಟ್ವಿಟ್ಟರ್‌ನಲ್ಲಿ @MeghUpdates ಎಂಬ ಪೇಜ್ ಪೋಸ್ಟ್ ಮಾಡಿದ್ದಾರೆ.
ಮೆಗಾ ಅಪ್‌ಡೇಟ್ಸ್ ಪೋಸ್ಟ್‌ನಲ್ಲೇನಿದೆ.
ಇಂಡೋನೇಷ್ಯಾದಲ್ಲಿ 90 ಶೇಕಡಾ ಮುಸಲ್ಮಾನರಿದ್ದಾರೆ. ಹಿಂದೂಗಳು ಶೇಕಡಾ 20 ರಷ್ಟಿದ್ದಾರೆ. ಅಲ್ಲಿ 11 ಸಾವಿರ ಹಿಂದೂ ದೇವಾಲಯಗಳಿವೆ ಅಲ್ಲಿ ಯಾವುದೇ ಗಲಭೆ ಆಗಿದ್ದನ್ನು ನಾನು ಇದುವರೆಗೆ ಕೇಳಿಲ್ಲ. ಏಕೆಂದರೆ ಅಲ್ಲಿ ಆರ್‌ಎಸ್ಎಸ್ ಇಲ್ಲ ಎಂದು ಪ್ರಕಾಶ್ ರಾಜ್ ಫೋಟೋದ ಮೇಲೆ ಬರೆದಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಮೆಗಾ ಅಪ್‌ಡೇಟ್ಸ್, ಈತನ ಬಗ್ಗೆ ಕೆಲ ಪದಗಳು ಎಂದು ಪೋಸ್ಟ್ ಹಾಕಿದೆ. ನಿನ್ನೆ ಈ ಪೋಸ್ಟ್ ಮಾಡಲಾಗಿದ್ದು, 2.3 ಮಿಲಿಯನ್‌ಗೂ ಅಧಿಕ ಜನ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೇ ಪ್ರಕಾಶ್ ರೈ ಹೇಳಿಕೆ ಇದೆಂದೂ ಭಾವಿಸಿ ಅವರನ್ನು ಟೀಕಿಸಲು ಶುರು ಮಾಡಿದ್ದಾರೆ.
ಈ ವಿಚಾರ ಈಗ ಪ್ರಕಾಶ್ ರೈಯವರ ಗಮನಕ್ಕೆ ಬಂದಿದ್ದು, ಈ ಪೇಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ಪೋಸ್ಟನ್ನು ಶೇರ್ ಮಾಡಿಕೊಂಡಿರುವ ಪ್ರಕಾಶ್ ರೈಯವರು, ಇದು ನನ್ನ ಹೇಳಿಕೆ ಅಲ್ಲ, ಇದು ನೀವೇ (ಮೆಗಾ ಅಪ್‌ಡೇಟ್ಸ್) ಆಗಿದ್ದಾರೆ ನಿಮ್ಮ ಸ್ವಂತ ಹೇಳಿಕೆ ಎಂದು ಹಾಕಿಕೊಳ್ಳಿ. ಅಥವಾ ಯಾರು ಈ ರೀತಿ ಹೇಳಿಕೆ ನೀಡಿದ್ದಾರೋ ಅವರ ಹೆಸರು ಹಾಕಿಕೊಳ್ಳಿ ಇದು ನನ್ನ ಹೇಳಿಕೆ ಅಲ್ಲ, ನಿಮ್ಮ ಹೇಳಿಕೆಯನ್ನು ನಮ್ಮ ಹೆಸರಿನಲ್ಲಿ ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ನಟ ಪ್ರಕಾಶ್ ರೈ.
ಮೋದಿ ಟೀಕಿಸಿದ ನಟ ಪ್ರಕಾಶ್ ರಾಜ್ ಅಜ್ಞಾನಿ, ಕೆಟ್ಟ ಹೋರಾಟಗಾರ; ಅಹಿಂಸಾ ಚೇತನ್
ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಗ್ಲ ಮಾಧ್ಯಮವೊಂದರ ಜೊತೆ ಮಾತನಾಡಿದ ಪ್ರಕಾಶ್ ರೈ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಟ್ವಿಟ್ಟರ್ ಪೇಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ತನ್ನ ವಿರುದ್ಧ ಈ ರೀತಿಯ ಅಪಪ್ರಚಾರದ ಬಗ್ಗೆ ಟ್ವಿಟ್ಟರ್‌ಗೂ ಈ ಪೇಜ್ ವಿರುದ್ಧ ದೂರು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನ ವಕೀಲರನ್ನು ಸಂಪರ್ಕಿಸುತ್ತಿದ್ದೇನೆ ಮತ್ತು ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ. ಇದು ಸಾಮಾನ್ಯ ತಂತ್ರವಾಗಿದೆ. ಬಲಪಂಥೀಯರು ಇಂತಹ ಹೇಳಿಕೆಗಳನ್ನು ನಿರ್ಮಿಸುತ್ತಾರೆ ಮತ್ತು ತಮ್ಮ ಸುಳ್ಳುಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ.
ನಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಬಿಂಬಿಸುವುದಕ್ಕೆ ಈ ಪೋಸ್ಟ್ ಮೂಲಕ ಪ್ರಯತ್ನಿಸಲಾಗಿದೆ. ನಾನು ಬಿಜೆಪಿ ವಿರೋಧಿ ಹಿಂದೂಗಳ ವಿರೋಧಿ ಮೋದಿ ವಿರೋಧಿ ಅಮಿತ್ ಶಾ ವಿರೋಧಿ ಎಂದು ಬಿಂಬಿಸಲು ಯಾರೋ ಮುಂದಾಗಿದ್ದಾರೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿಯ ಕಟು ಟೀಕಾಕಾರರಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರಾಜಕೀಯ ಚಿಂತನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮೋದಿ ಟೀಕಿಸೋ ಕಿಶೋರ್ ಸೇರಿ ಈ ನಟರು ಕೃಷಿಯಲ್ಲೂ ಎತ್ತಿದ ಕೈ, ಉಳುವಾ ನಟರ ನೋಡಿಲ್ಲಿ!