ನೂತನ ಸಂಸತ್ ಭವನ ಉದ್ಘಾಟನೆ, 75 ರೂ ವಿಷೇಷ ನಾಣ್ಯ ಬಿಡುಗಡೆ ಮಾಡಲಿದೆ ಕೇಂದ್ರ ಸರ್ಕಾರ!

Published : May 26, 2023, 10:36 AM ISTUpdated : May 26, 2023, 11:28 AM IST
ನೂತನ ಸಂಸತ್ ಭವನ ಉದ್ಘಾಟನೆ, 75 ರೂ ವಿಷೇಷ ನಾಣ್ಯ ಬಿಡುಗಡೆ ಮಾಡಲಿದೆ ಕೇಂದ್ರ ಸರ್ಕಾರ!

ಸಾರಾಂಶ

ನೂತನ ಸಂಸತ್ ಭವನ ಉದ್ಘಾಟನೆಗೆ ಸಜ್ಜಾಗಿದೆ. ಬಾರಿ ವಿವಾದ, ಹಲವು ಪಕ್ಷಗಳ ಬಹಿಷ್ಕಾರ ನಡುವೆ ಮೇ.28ಕ್ಕೆ ಪ್ರಧಾನಿ ಮೋದಿ ನೂತನ ಸಂಸತ್ ಭವನ ಉದ್ಘಾಟನೆ ಮಾಡಲಿದ್ದಾರೆ. ಇದರ ಸವಿನೆನಪಿಗೆ ಕೇಂದ್ರ ಸರ್ಕಾರ 75 ರೂಪಾಯಿ ನಾಣ್ಯ ಬಿಡುಗಡೆ ಮಾಡಲಿದೆ. 

ನವದೆಹಲಿ(ಮೇ.26): ಅಜಾದಿಕಾ ಅಮೃತ ಕಾಲದಲ್ಲಿ ಉದ್ಘಾಟನೆಗೊಳ್ಳುತ್ತಿರುವ ನೂತನ ಸಂಸತ್ ಭವನದ ಸವಿ ನೆನಪಿಗಾಗಿ ಕೇಂದ್ರ ಸರ್ಕಾರ 75 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡುತ್ತಿದೆ. ಸ್ವತಂತ್ರ ಭಾರತಕ್ಕೆ 75 ವರ್ಷದ ಸಂಭ್ರಮ. ಹೀಗಾಗಿ ಅಮೃತ ಕಾಲವಾಗಿ ಭಾರತ ಆಚರಿಸುತ್ತಿದೆ. ಇದೇ ಅಮೃತಕಾಲದಲ್ಲಿ ಭಾರತದ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಿಸಿಕೊಂಡಿರುವ ಸಂಸತ್ ಭವನದ ಹೊಸ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ. ಈ ವಿಶೇಷ ಸಂದರ್ಭ ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ 75 ರೂಪಾಯಿ ನಾಣ್ಯ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕೇಂದ್ರ ಹಣಕಾಸು ಇಲಾಖೆ ಈ ಕುರಿತು ಮಹತ್ವದ ಘೋಷಣೆ ಮಾಡಿದೆ. 

75 ರೂಪಾಯಿ ವಿಷೇಷ ನಾಣ್ಯ ಸಿಂಹಗಳನ್ನು ಹೊಂದಿರುವ ಆಶೋಕಸ್ಧಂಬ, ಅದರ ಕೆಳಗೆ ಸತ್ಯಮೇವ ಜಯತೆ ಅನ್ನೋ ವಾಕ್ಯವೂ ಇರಲಿದೆ. ಇನ್ನು ನಾಣ್ಯದ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಭಾರತ ಎಂದು ಬರೆದಿದ್ದರೆ, ನಾಣ್ಯದ ಬಲಭಾಗದಲ್ಲಿ ಇಂಗ್ಲೀಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ಇನ್ನು ರೂಪಾಯಿ 75 ಎಂದು ಬರೆಯಲಾಗಿದೆ. ಇನ್ನು ನಾಣ್ಯದ ಹಿಂಭಾಗದಲ್ಲಿ ಸಂಸತ್ ಭವನ ಹಾಗೂ ದೇವನಾಗರಿ ಲಿಪಿಯಲ್ಲಿ ಸಂಸದ್ ಸಂಕುಲ್ ಎಂದು ಬರೆಯಲಾಗಿದೆ.ನಾಣ್ಯದ ಕೆಳಭಾಗದಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂದು ಬರೆಯಲಾಗಿದೆ.

ಕೇಂದ್ರ ಸರ್ಕಾರದಿಂದ 100 ರೂಪಾಯಿ ನಾಣ್ಯ, ಇಲ್ಲಿದೆ ವಿಶೇಷತೆ,ಬಿಡುಗಡೆ ದಿನಾಂಕ!

ನಾಣ್ಯದ ಆಕಾರ ವೃತ್ತಾಕಾರವಾಗಿಲಿದೆ. 44 ಮಿಲಿಮೀಟರ್ ಗಾತ್ರಹೊಂದಿರಲಿದೆ. 35 ಗ್ರಾಂ ತೂಕ ಹೊಂದಿರಲಿದೆ. ಇನ್ನು ಶೇಕಡಾ 50 ರಷ್ಟು ಬೆಳ್ಳಿ, ಶೇಕಡಾ 40 ರಷ್ಟು ತಾಮ್ರ, ಶೇಕಡಾ 5 ರಷ್ಟು ನಿಕೆಲ್ ಹಾಗೂ ಶೇಕಡಾ 5ರಷ್ಟು ಸತು ಮಿಶ್ರಣದಿಂದ ನಾಣ್ಯ ತಯಾರಿಸಲಾಗಿದೆ.

ಭಾರಿ ವಿವಾದ ನಡುವೆ ಪ್ರಧಾನಿ ನರೇಂದ್ರ ಮೋದಿ ಮೇ.28 ರಂದು ನೂತನ ಸಂಸತ್ ಭವನ ಉದ್ಘಾಟನೆ ಮಾಡಲಿದ್ದಾರೆ. ಹಲವು ವಿಪಕ್ಷಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದೆ. ಇದರ ನಡುವೆ 25 ರಾಜಕೀಯ ಪಕ್ಷಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. 

ನೂತನ ಸಂಸತ್‌ ಕಟ್ಟಡದ ಉದ್ಘಾಟನಾ ಸಮಾರಂಭವನ್ನು 21 ವಿಪಕ್ಷಗಳು ಬಹಿಷ್ಕರಿಸಿರುವ ನಡುವೆಯೇ ಜಾತ್ಯತೀತ ಜನತಾದಳ, ತೆಲುಗು ದೇಶಂ ಪಕ್ಷ ಹಾಗೂ ಬಿಎಸ್‌ಪಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ. ಈ ಮೂಲಕ ಹಾಜರಾಗುವುದಾಗಿ ಘೋಷಿಸಿದ್ದ ಬಿಜೆಡಿ, ಅಕಾಲಿದಳ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ಗಳ ಸಾಲಿಗೆ ಇವೂ ಸೇರ್ಪಡೆಯಾಗಿದೆ. ಬೆಂಗಳೂರಿನಲ್ಲಿ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಮಾರಂಭದಲ್ಲಿ ಪಾಲ್ಗೊಳ್ಳುವ ಘೋಷಣೆ ಮಾಡಿದ್ದಾರೆ.

ಆರ್ ಬಿಐ ಹಳೆಯ 5ರೂ. ನಾಣ್ಯ ಸ್ಥಗಿತಗೊಳಿಸಿದ್ದು ಏಕೆ? ಇದರ ಹಿಂದಿದೆ ಬಾಂಗ್ಲಾದೇಶೀಯರ ಕೈವಾಡ!

ಇನ್ನು ಪಕ್ಷದ ಪರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ಭಾಗಿಯಾಗುವಂತೆ ರಾಜ್ಯಸಭಾ ಸಂಸದ ಕನಕಮೇದಾಳ ರವೀಂದ್ರ ಕುಮಾರ್‌ ಅವರಿಗೆ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ. ಇನ್ನೊಂದೆಡೆ, ಸಂಸತ್‌ ಭವನದ ಉದ್ಘಾಟನಾ ಸಮಾರಂಭವನ್ನು ವಿಪಕ್ಷಗಳು ಬಹಿಷ್ಕರಿಸುವುದು ಸರಿಯಾದ ನಡೆಯಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಸರ್ಕಾರವಿರಲಿ ದೇಶದ ವಿಷಯಕ್ಕೆ ಬಂದರೆ ಬಿಎಸ್‌ಪಿ ಅವರನ್ನು ಬೆಂಬಲಿಸುತ್ತದೆ ಎಂದು ಬಿಎಸ್‌ಪಿ ನಾಯಕಿಮಾಯಾವತಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್