ಮುಂದಿನ ವರ್ಷದಿಂದ 3 ಮಾದರಿಯ ‘ವಂದೇಭಾರತ್‌’: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

By Kannadaprabha NewsFirst Published May 26, 2023, 7:38 AM IST
Highlights

ಮುಂದಿನ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ ವೇಳೆಗೆ ವಂದೇ ಚೇರ್‌ಕಾರ್‌, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪ​ರ್‍ಸ್ ಎಂಬ 3 ಮಾದರಿಯ ವಂದೇಭಾರತ್‌ ರೈಲುಗಳು ಸಂಚಾರ ನಡೆಸಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. 

ಡೆಹ್ರಾಡೂನ್‌ (ಮೇ.26): ಮುಂದಿನ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ ವೇಳೆಗೆ ವಂದೇ ಚೇರ್‌ಕಾರ್‌, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪ​ರ್‍ಸ್ ಎಂಬ 3 ಮಾದರಿಯ ವಂದೇ ಭಾರತ್‌ ರೈಲುಗಳು ಸಂಚಾರ ನಡೆಸಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಪಿಟಿಐಗೆ ಸಂದರ್ಶನ ನೀಡಿದ ಅವರು, ‘ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿರುವ ಎಲ್ಲಾ ರೈಲು ಹಳಿಗಳನ್ನು 160 ಕಿ.ಮೀ. ವೇಗ ತಾಳಿಕೊಳ್ಳುವಂತೆ ಅಪ್‌ಗ್ರೇಡ್‌ ಮಾಡಲಾಗುತ್ತದೆ. ಅಲ್ಲದೇ 3 ಮಾದರಿಗಳಲ್ಲಿ ವಂದೇ ಭಾರತ್‌ ರೈಲುಗಳು ಚಲಿಸಲಿದೆ.

100 ಕಿ.ಮೀ. ವ್ಯಾಪ್ತಿಯಲ್ಲಿ ವಂದೇ ಮೆಟ್ರೋ, 100ರಿಂದ 550 ಕಿ.ಮೀ. ವ್ಯಾಪ್ತಿಯಲ್ಲಿ ವಂದೇ ಚೇರ್‌ಕಾರ್‌ ಮತ್ತು 550 ಕಿ.ಮೀ. ದೂರಕ್ಕೆ ವಂದೇ ಸ್ಲೀಪರ್‌ ರೈಲುಗಳು ಸಂಚಾರ ನಡೆಸಲಿವೆ. ಈ ಮಾದರಿಗಳು ಮುಂದಿನ ವರ್ಷ ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ಜಾರಿಗೆ ಬರಲಿವೆ’ ಎಂದು ಅವರು ಹೇಳಿದರು. ಈ ವರ್ಷದ ಜೂನ್‌ ಮಧ್ಯದ ವೇಳೆಗೆ ಎಲ್ಲಾ ರಾಜ್ಯಗಳು ವಂದೇ ಭಾರತ್‌ ಸೇವೆಯನ್ನು ಪಡೆದುಕೊಳ್ಳಲಿವೆ. 8ರಿಂದ 9 ದಿನದಲ್ಲಿ ಒಂದು ರೈಲನ್ನು ತಯಾರು ಮಾಡಲಾಗುತ್ತಿದೆ ಎಂದರು.

ಜಗತ್ತಿನ ನಂ.4 ಆರ್ಥಿಕ ರಾಷ್ಟ್ರ ಜರ್ಮನಿಗೂ ಹಣ ಸಂಕಷ್ಟ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ: ಹಲಿಯಿಂದ ಉತ್ತರಾಖಂಡ್‌ನ ಡೆಹ್ರಾಡೂನ್‌ಗೆ ಚಲಿಸಲಿರುವ ದೇಶದ 18ನೇ ಹಾಗೂ ಉತ್ತರಾಖಂಡ ರಾಜ್ಯದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್‌ ಆಗಿ ಚಾಲನೆ ನೀಡಿದರು. ದೆಹಲಿಯಿಂದ ಬೇರೊಂದು ನಗರಕ್ಕೆ ಸಂಪರ್ಕಿಸುತ್ತಿರುವ 6ನೇ ವಂದೇ ಭಾರತ್‌ ರೈಲು ಇದಾಗಿದ್ದು ಕೇವಲ 4 ತಾಸು 30 ನಿಮಿಷಗಳಲ್ಲಿ ಡೆಹ್ರಾಡೂನ್‌ ತಲುಪಲಿದೆ. ಸದ್ಯ ಶತಾಬ್ದಿ ಎಕ್ಸ್‌ಪ್ರೆಸ್‌ 6 ತಾಸು 10 ನಿಮಿಷ ತೆಗದುಕೊಳ್ಳುತ್ತಿದ್ದು ವಂದೇ ಭಾರತ್‌, ಪ್ರಯಾಣದ ಅವಧಿಯನ್ನು 1 ತಾಸು 40 ನಿಮಿಷ ಕಡಿಮೆ ಮಾಡಲಿದೆ.

ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಜಾಗತಿಕ ಪ್ರವಾಸಿಗರು ಭಾರತವನ್ನು ನೋಡಿ ಅರ್ಥೈಸಿಕೊಳ್ಳಲು ಬರುತ್ತಾರೆ. ಇದು ಉತ್ತರಾಖಂಡಕ್ಕೆ ಅತ್ಯುತ್ತಮ ಅವಕಾಶ. ಹಿಂದಿನ ಸರ್ಕಾರಗಳು ಹೈಸ್ಪೀಡ್‌ ರೈಲು ತರುವ ಮಾತು ಆಡಿದವು. ಆದರೆ ಅವು ವಂಶಪಾರಂಪರ‍್ಯ ರಾಜಕೀಯದಿಂದ ಹೊರಬರಲೇ ಇಲ್ಲ. ಈಗ ನಮ್ಮ ನೀತಿ, ನಿಯತ್ತು ಹಾಗೂ ನಿಷ್ಠೆಯಿಂದ ಎಲ್ಲ ಸಾಕಾರಗೊಳ್ಳುತ್ತಿವೆ’ ಎಂದರು.

ನೂತನ ಸಂಸತ್‌ ಉದ್ಘಾಟನೆ ಬಹಿಷ್ಕಾರಕ್ಕೆ ಮೋದಿ ಕೆಂಗಣ್ಣು: ವಿಪಕ್ಷಗಳ ಹೆಸರೆತ್ತದೆ ಪ್ರಧಾನಿ ತರಾಟೆ

ಮುಂಬೈ ಸಬರ್ಬನ್‌ ಮಾರ್ಗದಲ್ಲಿ ಶೀಘ್ರ ವಂದೇ ಮೆಟ್ರೋ ರೈಲು: ಇಲ್ಲಿನ ಸಬ್‌ಅರ್ಬನ್‌ ರೈಲುಗಳಿಗೆ ಬದಲಿಯಾಗಿ ವಂದೇ ಭಾರತ್‌ ಮೆಟ್ರೋ ರೈಲುಗಳು ಬರುವ ಕಾಲ ಸನ್ನಿತಹಿತವಾಗಿದೆ. ಇದರ ಭಾಗವಾಗಿ ಭಾರತೀಯ ರೈಲ್ವೆಯು ಮುಂಬೈ ನಗರ ಸಾರಿಗೆ ಯೋಜನೆ ಅಡಿ ಈಗಾಗಲೇ 238 ವಂದೇ ಭಾರತ್‌ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಮುಂಬೈ ರೈಲ್ವೆ ವಿಕಾಸ ನಿಗಮ (ಎಂಆರ್‌ವಿಸಿ)ಯ ಹಿರಿಯ ಅಧಿಕಾರಿಯೊಬ್ಬರು,‘ಈ ಯೋಜನೆಯನ್ನು ಮುಂಬೈ ನಗರ ಸಾರಿಗೆ ಯೋಜನೆ 3-3ಎ ಅಡಿಯಲ್ಲಿ ಜಾರಿಗೆ ತರಲಾಗುತ್ತಿದೆ. 238 ವಂದೇ ಭಾರತ್‌ ರೈಲುಗಳ ನಿರ್ಮಾಣಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ’ ಎಂದಿದ್ದಾರೆ. ಈ ಮೂಲಕ ದೇಶದ ಮೊದಲ ವಂದೇ ಮೆಟ್ರೋ ಪಡೆವ ಮೊದಲ ನಗರವಾಗಿ ಮುಂಬೈ ಹೊರಹೊಮ್ಮಲಿದೆ.

click me!