ವಲಸೆ ಕಾರ್ಮಿಕರು, ಬಡವರಿಗೆ ಪ್ರತಿ ತಿಂಗಳು 7 ಸಾವಿರ ರೂ ನೀಡಿ; ಕೇಂದ್ರಕ್ಕೆ ಅಜೀಂ ಪ್ರೇಮ್‌ಜಿ ಮನವಿ!

Suvarna News   | Asianet News
Published : May 16, 2020, 02:57 PM ISTUpdated : May 16, 2020, 03:16 PM IST
ವಲಸೆ ಕಾರ್ಮಿಕರು, ಬಡವರಿಗೆ ಪ್ರತಿ ತಿಂಗಳು 7 ಸಾವಿರ ರೂ ನೀಡಿ; ಕೇಂದ್ರಕ್ಕೆ ಅಜೀಂ ಪ್ರೇಮ್‌ಜಿ ಮನವಿ!

ಸಾರಾಂಶ

 ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಿಗೆ ಹಂಚುತ್ತಿದ್ದಾರೆ. ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ತುರ್ತು ಪರಿಹಾರವಾಗಿ ಹಣ ನೀಡಲು ಆಗ್ರಹಿಸಿದ್ದಾರೆ.

ನವದೆಹಲಿ(ಮೇ.16): ಕೊರೋನಾ ವೈರಸ್‌ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಇದರೊಂದಿಗೆ ಹೊಸ ಯೊಜನೆ, ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದೀಗ ಕೊರೋನಾ ತುರ್ತು ಪರಿಹಾರ ನಿಧಿಗೆ ಅತೀ ಹೆಚ್ಚು ದೇಣಿಗೆ ನೀಡಿದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಕೆಲ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ಮನ್ರೇಗಾ ಯೋಜನೆ ವಿಸ್ತರಣೆ ಈ ಸಂದರ್ಭಕ್ಕೆ ಅಗತ್ಯವಾಗಿದೆ ಎಂದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಗೊಂದಲಗಳಿಗೆ ತೆರೆ...!.

ಪಡಿತರ ಅಕ್ಕಿ ಉಚಿತ ರೇಶನ್ ಕಾರ್ಯಕ್ರಮವನ್ನು 3 ರಿಂದ 6 ತಿಂಗಳಿಗೆ ವಿಸ್ತರಿಸಬೇಕು. ಇದನ್ನು ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವಾಗ ಕೆಲಸ ಮಾಡಬೇಕು ಎಂದು ಅಜೀಂ ಪ್ರೇಮ್‌ಜಿ ಹೇಳಿದ್ದಾರೆ. ಅದರಲ್ಲೂ ಪ್ರಮುಖವಾಗಿ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪ್ರತಿ ತಿಂಗಳು 7,000 ರೂಪಾಯಿ ತುರ್ತು ಪರಿಹಾರ ನೀಡಬೇಕು. ಕನಿಷ್ಠ 3 ತಿಂಗಳು ಈ ರೀತಿ ಹಣ ನೀಡಬೇಕು ಎಂದು ಪ್ರೇಮ್‌ಜಿ ಹೇಳಿದ್ದಾರೆ.

ಭಾರತಕ್ಕೆ ವೆಂಟಿಲೇಟರ್‌ ಕೊಡ್ತೀವಿ, ಜತೆಗೂಡಿ ಲಸಿಕೆ ತಯಾರಿಸ್ತೀವಿ: ಟ್ರಂಪ್

ವಲೆ ಕಾರ್ಮಿಕರ ಹಿತ ಕಾಯಬೇಕು. ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳಲು ಇಚ್ಚಿಸಿದರೆ ಅವರನ್ನು ಉಚಿತವಾಗಿ ಬಸ್ ಅಥವಾ ಟ್ರೈನ್ ಮೂಲಕ ಕಳಹಿಸಿಕೊಡಬೇಕು.  ಹಲವು ರಾಜ್ಯಗಳು ಕಾರ್ಮಿಕರ ನಿಯಮ ಉಲ್ಲಂಘನೆ ಮಾಡುತ್ತಿದೆ. ಇದು ಸರಿಯಲ್ಲ. ಕಾರ್ಮಿಕರನ್ನು ಅಷ್ಟೌ ಗೌರವಯುತವಾಗಿ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಬೇಕು ಎಂದು ಪ್ರೇಮ್‌ಡಿ ಮನವಿ ಮಾಡಿದ್ದಾರೆ.

ಅಜೀಂ ಪ್ರೇಮ್‌ಜಿಯ  ವಿಪ್ರೋ ಕೊರೋನಾ ಪರಿಹಾರಕ್ಕೆ 1,000 ಕೋಟಿ ರೂಪಾಯಿ ದೇಣಿಕೆ ನೀಡಿದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್, ವಿಪ್ರೋ ಹಾಗೂ ವಿಪ್ರೋ ಎಂಟರ್‌ಪ್ರೈಸಸ್ ಜೊತೆಯಾಗಿ 1125 ಕೋಟಿ ರೂಪಾಯಿ ದೇಣಿಗೆ ನೀಡಿದೆ. ವೈಯುಕ್ತಿ ದೇಣಿಗೆಗಳ ಪೈಕಿ ಅತೀ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದೆ. ಟಾಟಾ ಗ್ರೂಪ್ ಆಫ್ ಕಂಪನಿ ಒಟ್ಟು 1,500 ಕೋಟಿ ರೂಪಾಯಿ ದೇಣಿಗೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?