
ನವದೆಹಲಿ (ಅಕ್ಟೋಬರ್ 8): ಗ್ವಾಲಿಯರ್ ಸಿಂಧಿಯಾ ರಾಜಮನೆತನದ 40 ಸಾವಿರ ಕೋಟಿ ಆಸ್ತಿ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೀರ್ಘಕಾಲ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಹೊಸ ತಿರುವು ಸಿಗುವ ಲಕ್ಷಣ ಕಾಣ್ತಿದೆ. ಅದೇ ಕಾರಣ ಈ ವಿವಾದ ಮತ್ತೆ ಸುದ್ದಿಯಲ್ಲಿದೆ.
ಸಿಂಧಿಯಾ ಕುಟುಂಬದ ಸದಸ್ಯೆ ಪ್ರತಿಮಾ ದೇವಿ ನ್ಯಾಯಾಲಯಕ್ಕೆ ಹೆಚ್ಚುರಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ಆಸ್ತಿ ವಿಭಾಗದ ದಾಖಲೆಗಳಲ್ಲಿನ ಸಹಿಯ ಬಗ್ಗೆ ಗಂಭೀರ ಪ್ರಶ್ನೆಯನ್ನ ಹುಟ್ಟಿಹಾಕಿದೆ. ಆಸ್ತಿ ದಾಖಲೆಗೆ ಸಂಬಂಧಿ ಮಾಡಲಾಗಿರುವ ಸಿಗ್ನೇಚರ್‍ಗಳಲ್ಲಿ ಕೆಲವೊಂದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ಒಪ್ಪಿಗೆ ಇಲ್ಲದೇ ಮೋಸದಿಂದ ಸಹಿ ಪಡೆಯಲಾಗಿದೆ ಎಂದು ಕೋರ್ಟ್‌ಗೆ ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿಮಾ ದೇವಿ ಆರೋಪಕ್ಕೆ ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಕುಟುಂಬದ ಹಲವು ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರತಿಮಾ ದೇವಿ ಮಾಡಿರುವ ಆರೋಪಗಳನ್ನ ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಅವರ ಕುಟುಂಬದ ಕೆಲವು ಸದಸ್ಯರು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ. ಸಿಂದಿಯಾ, ಉಷಾ ರಾಜೆ, ವಸುಂಧರಾ ರಾಜೆ, ಯಶೋಧರಾ ರಾಜೆ ಅವರು ಪ್ರತಿಮಾ ದೇವಿ ಆರೋಪವನ್ನು ಪ್ರಶ್ನಿಸಿದ್ದಾರೆ. ಆಸ್ತಿ ವಿಭಜನೆಗೆ ಸಂಬಂಧಿಸಿದ ದಾಖಲೆಗಳಿಗೆ ಅವರ ಒಪ್ಪಿಗೆ ಪಡೆದೇ ಸಹಿ ಮಾಡಿಸಿಕೊಳ್ಳಲಾಗಿದೆ. ಅವರ ಒಪ್ಪಿಗೆ ಮೇರೆಗೆ ನಾವು ಕೂಡ ಸಹಿ ಮಾಡಿದ್ದೇವೆ ಎಂದು ವಾದಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ವಿಚಾರಣೆ ವೇಳೆ ವಕೀಲರು ಪ್ರಮುಖ ಮಾಹಿತಿಯನ್ನ ಬಹಿರಂಗ ಪಡಿಸಿದ್ದಾರೆ. ಆಸ್ತಿ ವಿಭಜನೆ ಬಳಿಕ ಇಡೀ ಕುಟುಂಬ ಮನೆಯ ಎಲ್ಲಾ ಸದಸ್ಯರಿಗೂ ಭೋಜನ ಕೂಟ ಆಯೋಜಿಸಿತ್ತು. ಅದರಲ್ಲಿ ಎಲ್ಲರೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ರಾಜಮನೆತನದ ಕುಟುಂಬದ ಸದಸ್ಯರು ಗ್ರೂಪ್ ಫೋಟೋ ಕೂಡ ತೆಗೆಯಲಾಗಿದೆ ಎಂದು ಕೋರ್ಟ್‌ಗೆ ಪ್ರದರ್ಶಿಸಿದ್ದಾರೆ. ಹೀಗಿರುವಾಗ ಅದಕ್ಕೆ (ಸಹಿಗೆ) ಒಪ್ಪಿಗೆ ಎಲ್ಲ ಎಂದರೆ ಹೇಗೆ ಅಂತಾ ಪ್ರಶ್ನೆ ಮಾಡಿದ್ದಾರೆ. ಸದ್ಯ ವಾದ-ಪ್ರತಿವಾದ ಆಲಿಸಿರುವ ಕೋರ್ಟ್, ಅಕ್ಟೋಬರ್ 14ಕ್ಕೆ ಮಹತ್ವದ ತೀರ್ಪು ನೀಡಲಿದೆ. ರಾಜಮನೆತನದ 40 ಸಾವಿರ ಕೋಟಿ ಮೌಲ್ಯದ ಆಸ್ತಿ ವಿವಾದ ಏನಾಗಲಿದೆ ಎಂಬ ಕುತೂಹಲ ದೇಶದ ಜನರಲ್ಲಿ ಹೆಚ್ಚಾಗಿದೆ.
ಇನ್ನು ಸಿಂಧಿಯಾ ರಾಜಮನೆತದ ಆಸ್ತಿ ವಿವಾದ ಇಲ್ಲಿಗೆ ಸೀಮಿತವಾಗಿಲ್ಲ. ಜೈ ವಿಲಾಸ್ ಅರಮನೆ ಸೇರಿದಂತೆ ಕುಟುಂಬದ ಆಸ್ತಿಗಳ ಮೌಲ್ಯಮಾಪನದ ಬಗ್ಗೆಯೂ ಕಾನೂನು ಹೋರಾಟ ನಡೆಯುತ್ತಿದೆ. ಸದ್ಯ ಎರಡು ಕಡೆ ವಾದ-ಪ್ರತಿವಾದವನ್ನು ಕೋರ್ಟ್ ಆಲಿಸಿದ್ದು, ತೀರ್ಪು ಬರೋದೊಂದೇ ಬಾಕಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ