
ನವದೆಹಲಿ (ಅಕ್ಟೋಬರ್ 8): ವಾಹನ ಸವಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸುದ್ದಿ ಒಂದನ್ನ ನೀಡಿದೆ. ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ಗಳಿಗೆ (FASTag pass) ಸಂಬಂಧಿಸಿ ಪ್ರಮುಖ ಮಾರ್ಗಸೂಚಿಗಳನ್ನು ರಿಲೀಸ್ ಮಾಡಿದೆ. ಕೇವಲ 3 ಸಾವಿರಕ್ಕೆ ಇಡೀ ವರ್ಷ ಟೋಲ್ ಫ್ರೀ ಎಂದು ಘೋಷಣೆ ಮಾಡಿದೆ. ಇದಕ್ಕೆ ಷರತ್ತುಗಳು ಅನ್ವಯ ಆಗಲಿದೆ.
ಸ್ಥಳೀಯ ವಾಹನ ಸವಾರರಿಗೆ ದೊಡ್ಡ ಪರಿಹಾರ ನೀಡುವ ನಿಟ್ಟಿಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಯಾರೆಲ್ಲ ಟೋಲ್ ಪ್ಲಾಜಾಗಳ ಬಳಿ ವಾಸಿಸುತ್ತಿದ್ದಾರೋ (ಸ್ಥಳೀಯರಿಗೆ) ಅಂತವರಿಗೆಲ್ಲ ಇದರ ಅನುಕೂಲ ಆಗಲಿದೆ. ಅಂದರೆ ಸ್ಥಳೀಯವಾಗಿ ಓಡಾಡುವ ವಾಣಿಜ್ಯೇತರ ಮಾಲೀಕರಿಗೆ ಸ್ಥಳೀಯ ಪಾಸ್ ನೀಡಿ ನೇರವಾಗಿ ಫಾಸ್ಟ್‌ಟ್ಯಾಗ್ ಜೊತೆ ಲಿಂಕ್ ಮಾಡಲಾಗುತ್ತದೆ.
ಟೋಲ್ ಪ್ಲಾಜಾದಿಂದ 20 ಕಿಲೋ ಮೀಟರ್ ವ್ಯಾಪ್ತಿಯೊಳಗೆ ವಾಸವಿರುವ ವಾಣಿಜ್ಯೇತರ ಮಾಲೀಕರಿಗೆ ವಾರ್ಷಿಕ ಸ್ಥಳೀಯ ಫಾಸ್ಟ್‌ಟ್ಯಾಗ್ ಪಾಸ್ ಶುಲ್ಕದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹಿಂದಿನ ನಿಯಮಗಳ ಪ್ರಕಾರ.. 3,075 ರೂಪಾಯಿಗೆ ವಾರ್ಷಿಕ ಪಾಸ್ ನೀಡಲಾಗಿತ್ತು. ಅದರ ಮೂಲಕ ವರ್ಷದಲ್ಲಿ 200 ಟ್ರಿಪ್‌ಗಳಿಗೆ ಮಾತ್ರ ಅನುಮತಿ ಇತ್ತು. ಪ್ರತಿ ತಿಂಗಳು ನಿರ್ದಿಷ್ಟ ಶುಲ್ಕವನ್ನು ಪಾವತಿಸುವ ಮೂಲಕ ಮಾಸಿಕ ಪಾಸ್ ನವೀಕರಿಸಬೇಕಾಗಿತ್ತು.
ಆದರೆ ಹೊಸ ನಿಯಮವು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ. 3,000 ಶುಲ್ಕದಲ್ಲಿ ವರ್ಷವಿಡೀ ನೀವು ಎಷ್ಟು ಟ್ರಿಪ್ ಬೇಕಾದರೂ ಟೋಪ್ ಪ್ಲಾಜಾ ಮೂಲ ಪ್ರಯಾಣಿಸಬಹುದು. ಹಳೆಯ ನಿಯಮದಂತೆ ಪ್ರತಿ ತಿಂಗಳು ಪಾಸ್ ಅವಧಿ ಮುಗಿಯವ ಚಿಂತೆ ಮಾಡುವ ಬದಲಿಗೆ ವರ್ಷಕ್ಕೊಮ್ಮೆ ರಿಚಾರ್ಜ್ ಮಾಡಿ ನಿಶ್ಚಂತೆಯಿಂದ ಇರಬಹುದು.
ಕೇಂದ್ರದ ಈ ನಿಯಮವು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಕ್ಕೆ ಮಾತ್ರ ಸೀಮಿತ. ಪ್ಲಾಜಾದ ಕೇಂದ್ರ ಬಿಂದುವಿನಿಂದ 20 ಕಿ.ಮೀ ಒಳಗೆ ಶಾಶ್ವತವಾಗಿ ವಾಸಿಸುವ ನಿವಾಸಿಗಳಿಗೆ ನಿಯಮ ಅನ್ವಯ ಆಗಲಿದೆ. ಕಾರುಗಳು, ಜೀಪ್‌ಗಳು ಸೇರಿದಂತೆ ವೈಟ್‌ಬೋರ್ಡ್ ಹೊಂದಿರುವ ಖಾಸಗಿ ವಾಹನಗಳಿಗೆ ಮಾತ್ರ ಕಟ್ಟುನಿಟ್ಟಾದ ರಿಯಾಯತಿ ನೀಡಲಾಗಿದೆ. ಟ್ಯಾಕ್ಸಿಗಳು ಅಥವಾ ಇತರ ವಾಣಿಜ್ಯ ವಾಹನಗಳಿಗೆ ಈ ನಿಯಮ ಅನ್ವಯ ಆಗೋದಿಲ್ಲ. ಫಾಸ್ಟ್‌ಟ್ಯಾಗ್ ಅನ್ನು ಸ್ಥಳೀಯ ಪಾಸ್ ಆಗಿ ಪರಿವರ್ತಿಸಲು ನಿಮ್ಮ ಬಳಿ ದಾಖಲೆಗಳು ಬೇಕಾಗುತ್ತದೆ. ಆಧಾರ್ ಕಾರ್, ಮತದಾರರ ಗುರುತಿನ ಚೀಟಿಯಂತಹ ಸ್ಥಳೀಯ ವಿಳಾಸ ಪುರಾವೆ ಬೇಕೇಬೇಕು. ಹಾಗೆಯೇ ವಾಹನಗಳ ದಾಖಲೆಗಳು ಕೂಡ ಪ್ರಮುಖವಾಗಿದೆ. ಇನ್ನು, ಈ ಎಲ್ಲಾ ಪ್ರಕ್ರಿಯೆಗಳು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ.
ಪ್ಲಾಜಾ ಸಮೀಪ ಇರುವ ನಿವಾಸಿಗಳಿಗೆ ನಿತ್ಯವೂ ಹೆದ್ದಾರಿಯನ್ನು ಅವಲಂಬಿಸಿ ಇರುತ್ತಾರೆ. ದಿನಗೆಲಸ, ಸ್ಕೂಲ್, ವ್ಯವಹಾರ, ಕೃಷಿ ಕೆಲಸ ಸೇರಿಂದತೆ ನಿಯಮಿತವಾಗಿ ಎರಡು ಮೂರು ಓಡಾಡುವಂತಹ ಅನಿವಾರ್ಯತೆ ಇದೆ. ಇಂಥವರಿಗೆ ಸಾವಿರಾರು ರೂಪಾಯಿ ಹಣ ಉಳಿತಾಯ ಆಗಲಿದೆ. ಇನ್ನು ಸ್ಥಳೀಯ ಪಾಸ್ ಅನ್ನು ಫಾಸ್ಟ್‌ಟ್ಯಾಗ್‌ಗೆ ನೇರವಾಗಿ ಲಿಂಕ್ ಮಾಡಲಾಗಿರುತ್ತದೆ. ಇದರಿಂದ ಟೋಲ್‌ಗೇಟ್‌ನಲ್ಲಿ ನಿಲ್ಲುವ ಅಗತ್ಯ ಬರೋದಿಲ್ಲ. ಗೇಟ್‌ಗಳು ಸ್ವಯಂ ಚಾಲಿತವಾಗಿ ತೆರೆದುಕೊಳ್ಳಲಿವೆ. ಜೊತೆಗೆ ಸ್ಥಳೀಯರ ಐಡಿ ಪರಿಶೀಲನೆಯ ಹೆಸರಿನಲ್ಲಿ ಸಂಭವಿಸುವ ವಾದಗಳು ಮತ್ತು ಟ್ರಾಫಿಕ್ ಜಾಮ್‌ಗಳಿಗೆ ಮುಕ್ತಿ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ