ಮುಸ್ಲಿಂ ಮಕ್ಕಳಿಗೆ ಅಜಾನ್ ಪಠಣ ಸ್ಪರ್ಧೆ; ಶಿವಸೇನೆ ನಾಯಕನ  ಸದ್ಬಳಕೆ ಆಲೋಚನೆ

By Suvarna NewsFirst Published Dec 1, 2020, 7:11 PM IST
Highlights

ಮಹಾರಾಷ್ಟ್ರದಲ್ಲಿ ಮುಸ್ಲಿಂ ಮಕ್ಕಳಿಗಾಗಿ ಆನ್ ಲೈನ್ ಅಜಾನ್ ಪಠಣ ಸ್ಪರ್ಧೆ/ ಸ್ಪರ್ಧೆ ಆಯೋಜಿಸಲು ಮುಂದಾದ ಶಿವಸೇನೆ ನಾಯಕ/ ಅಧಿಕಾರ ಉಳಿಸಿಕೊಳ್ಳುವ ತಂತ್ರ ಎಂದು ಜರಿದ ಬಿಜೆಪಿ

ಮುಂಬೈ (ಡಿ.  01)  ಶಿವಸೇನೆ ನಾಯಕರೊಬ್ಬರು ದೊಡ್ಡ ಸುದ್ದಿ ಮಾಡಿದ್ದಾರೆ.  ಮುಸ್ಲಿಂ ಮಕ್ಕಳಿಗಾಗಿ ಆನ್ ಲೈನ್ 'ಅಜಾನ್' ಪಠಣ ಸ್ಪರ್ಧೆ ಏರ್ಪಡಿಸಲಿ ಮುಂದಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಮುಂಬೈ ದಕ್ಷಿಣದ ವಿಭಾಗದ ಶಿವಸೇನೆ ಮುಖ್ಯಸ್ಥರೂ ಆಗಿರುವ  ಪಾಂಡುರಂಗ್ ಸಕ್ಪಾಲ್ ಅವರು 'ಅಜಾನ್' ನ್ನು ಹಿಂದೂ ಆಚರಣೆ ಆರತಿಗೆ ಹೋಲಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಇಂಥ ಕೆಲಸ ಮಾಡುತ್ತಿದೆ. ತನ್ನ ನಿಲುವು ಮತ್ತು ಸಿದ್ಧಾಂತವನ್ನು ಬದಲಾಯಿಸುತ್ತಿದೆ ಎಂದು  ಬಿಜೆಪಿ ಇನ್ನೊಂದು ಕಡೆ ಆರೋಪಿಸಿದೆ.

ಉರ್ದು ಸುದ್ದಿ ಮಾಧ್ಯಮದ ಜತೆ ಮಾತನಾಡಿದ ಪಾಂಡುರಂಗ್ ‘ಅಜಾನ್’ ಕೇಳವುದು ನನಗೆ ಇಷ್ಟ. ಪ್ರತಿದಿನ ನಾನು ಕೇಳುತ್ತಿದ್ದೆ ಎಂದಿದ್ದಾರೆ. ಹಾಗಾಗಿ ಈ ಹೊಸ ಆಲೋಚನೆ ಬಂದಿತು ಎಂದಿದ್ದಾರೆ.

ಲಾಕ್ ಡೌನ್ ಕಾರಣ ಅಜಾನ್ ಬ್ಯಾನ್.. ವೈರಲ್ ವಿಡಿಯೋ ಅಸಲಿಯತ್ತು

"ಭಗವದ್ಗೀತೆಯ ಪಠಣಕ್ಕಾಗಿ ಸ್ಪರ್ಧೆಗಳು ನಡೆಯುತ್ತವೆ. ಮಕ್ಕಳಿಗಾಗಿ 'ಅಜಾನ್' ಸ್ಪರ್ಧೆಯನ್ನು ನಡೆಸಲು ನಾನು ನನ್ನ ಸಹೋದ್ಯೋಗಿ ಶಕೀಲ್ ಅಹ್ಮದ್ ಅವರನ್ನು ಕೇಳಿದೆ. ಇದು ಹಿಂದುಗಳ  'ಆರತಿ' ಯಂತಿದೆ ಎಂದು ನಾನು ಭಾವಿಸುತ್ತೇನೆ. ಶಿವಸೇನೆ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಯಾವುದೇ ಧರ್ಮಕ್ಕೆ ವಿರುದ್ಧವಾಗಿರಲಿಲ್ಲ. ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಸಹ ಎಲ್ಲಾ ಸಮುದಾಯಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಮುಖಂಡ ಹೇಳಿದ್ದಾರೆ.

ಮಕ್ಕಳು ಲಾಕ್ ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭೇಟಿಯಾದ ಎನ್ ಜಿಒ ಒಂದರ ಜತೆಯೂ ಮಾತನಾಡಿದ್ದು ಆನ್ ಲೈನ್ ಆಜಾನ್ ಪಠಣ ಸ್ಪರ್ಧೆ ಏರಪಡಿಸುವ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.

ಆದರೆ ಶಿವಸೇನೆಯ ವಕ್ತಾರ , ರಾಜ್ಯ ಸಾರಿಗೆ ಸಚಿವ ಅನಿಲ್ ಪ್ರತಾಪ್ ಸಕ್ಪಾಲ್ ಹೇಳಿಕೆಗೆ ಮಹತ್ವ ನೀಡಬಾರದು ಎಂದು ಪಕ್ಷದ ನಾಯಕನ ವಿರುದ್ಧವೇ ಮಾತನಾಡಿದ್ದಾರೆ.

click me!