ಹಿಂದು ಯುವತಿ ಮತಾಂತರ ಮಾಡಿ ಮದುವೆ ಮಾಡಿಕೊಂಡ ಜೋಡಿಗೆ ಪೊಲೀಸ್ ರಕ್ಷಣೆ

By Suvarna NewsFirst Published Dec 1, 2020, 5:45 PM IST
Highlights

ಲವ್ ಜಿಹಾದ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ/  ಹಿಂದೂ ಸಂಪ್ರದಾಯದಂತೆ ಮದುವೆಯಾದ ಯುವಕ/ ಮದುವೆಗೆ ಮುನ್ನ ಮತಾಂತರ/ ಆದರೆ ಮದುವೆಯಾಗಿದ್ದು ಹಿಂದು ಸಂಪ್ರದಾಯದ ಪ್ರಕಾರ

ಯಮುನಾನಗರ್, ಹರಿಯಾಣ:(ಡಿ.  01)    ಲವ್ ಜಿಹಾದ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವಾಗಲೆ ಈ ಸುದ್ದಿಯನ್ನು ನೋಡಲೇಬೇಕಾಗಿದೆ.  ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿಸಿಕೊಂಡು ಮದುವೆಯಾಗಿದ್ದಾನೆ.  ಇದೀಗ ಮಹಿಳೆಗೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶದಂತೆ ಪೊಲೀಸ್ ಭದ್ರತೆ ನೀಡಲಾಗಿದೆ.

"ಲವ್ ಜಿಹಾದ್" ವಿರುದ್ಧ ಕಾನೂನು ರೂಪಿಸಲು ರಾಜ್ಯ ಸರ್ಕಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಕಳೆದ ವಾರ ಹೇಳಿದ್ದರು.  ಬಿಜೆಪಿ ನಾಯಕರು  ಇದನ್ನು ವಿವಾಹದ ಸೋಗಿನಲ್ಲಿ ನಡೆಯುವ ಧಾರ್ಮಿಕ ಮತಾಂತರ ಎಂದು ಹೇಳಿಕೊಂಡೆ ಬಂದಿದ್ದಾರೆ.

ಲವ್ ಜಿಹಾದ್ ವಿರುದ್ಧ ಯೋಗಿ ಸರ್ಕಾರ ತಂದ ಕಠಿಣ ಕಾನೂನು.. ಕಂಪ್ಲೀಟ್ ಡಿಟೇಲ್ಸ್

21 ವರ್ಷದ ಯುವಕ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, 19 ವರ್ಷದ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ.  ನವೆಂಬರ್ 9 ರಂದು ವಿವಾಹ ನೆರವೇರಿತ್ತು ಎಂದು ಯಮುನಾನಗರ ಪೊಲೀಸ್ ವರಿಷ್ಠಾಧಿಕಾರಿ ಕಮಲ್ದೀಪ್ ಗೋಯಲ್  ಮಾಹಿತಿ ನೀಡಿದ್ದಾರೆ.

ಇದಾದ ಮೇಲೆ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದು ತಮಗೆ ಪ್ರಾಣ ಬೆದರಿಕೆ ಇದೆ.  ಯುವತಿಯ ಕುಟುಂಬದಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು.

ನ್ಯಾಯಾಲಯದ ಆದೇಶದ ಅನುಸಾರ ದಂಪತಿಗೆ ಭದ್ರತೆ ನೀಡಲಾಗಿದೆ. ಪೊಲೀಸರು ಯುವತಿಯ ಕುಟುಂಬವನ್ನು ಸಂಪರ್ಕ ಮಾಡಿ ತಿಳಿಹೇಳುವ ಕೆಲಸ ಮಾಡಿದ್ದಾರೆ.  ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ. 

click me!