
ನವದೆಹಲಿ (ಅ.23): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಮಂಗಳವಾರ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ನಾಮಪತ್ರ ಸಲ್ಲಿಕೆ ಮಾಡುವ ಕೋಣೆಯ ಒಳಗೆ ಪ್ರವೇಶ ನೀಡದೇ ಅವಮಾನ ಮಾಡಿರಯವ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರು ಇದು ಕಾಂಗ್ರೆಸ್ ದಲಿತ ನಾಯಕರಿಗೆ ಹಾಗೂ ಎಐಸಿಸಿ ಅಧ್ಯಕ್ಷರಿಗೆ ಮಾಡಿರುವ ಅವಮಾನ ಎಂದು ಹೇಳಿದೆ. ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬಕ್ಕೆ ಮಾತ್ರವೇ ಬೆಲೆ, ಮತ್ಯಾರಿಗೂ ಅಲ್ಲಿ ಎಣೆ ಮಾತ್ರದ ಗೌರವ ಕೂಡ ಸಿಗೋದಿಲ್ಲ ಎಂದು ಟೀಕೆ ಮಾಡಿದೆ. ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಿಯಾಂಕಾ ವಾದ್ರಾ ಅವರ ನಾಮಿನೇಷನ್ ಪ್ರಕ್ರಿಯೆಯಲ್ಲಿ ತಾವು ಇರುವ ಫೋಟೋವನ್ನು ಹಾಕಿಕೊಂಡಿದ್ದಾರೆ.
ಪ್ರಿಯಾಂಕಾ ವಾದ್ರಾ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಇದ್ದಿರುವುದು ನಿಜ. ವೈರಲ್ ಆಗಿರುವ ವಿಡಿಯೋ ಕೂಡ ನಿಜ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಅಭ್ಯರ್ಥಿಗಳು ಒಂದು ಕ್ಷೇತ್ರಕ್ಕೆ ಒಂದೇ ನಾಮಿನೇಷನ್‌ಅನ್ನು ಹಾಕೋದಿಲ್ಲ. ಎರಡು ಮೂರು ಸೆಟ್‌ಗಳನ್ನು ಸಲ್ಲಿಕೆ ಮಾಡುತ್ತಾರೆ. ಒಂದು ಸೆಟ್ ಸಲ್ಲಿಕೆ ಮಾಡುವ ವೇಳೆ ಮಲ್ಲಿಕಾರ್ಜುನ ಖರ್ಗೆ ಒಳಗಿದ್ದರು. ಮತ್ತೊಂದು ಸೆಟ್ ಸಲ್ಲಿಕೆ ಮಾಡುವಾಗ ಅವರನ್ನು ಹೊರಗಿಡಲಾಗಿತ್ತು.ಈ ವೇಳೆ ಅವರು ಬಾಗಿಲಿನ ಸಂದಿಯಿಂದ ಒಳಗಿನ ನಾಮಿನೇಷನ್ ಪ್ರಕ್ರಿಯೆಯನ್ನು ನೋಡುತ್ತಿರುವ ಒಂದು ಸೆಕೆಂಡ್‌ನ ವಿಡಿಯೋ ವೈರಲ್ ಆಗಿದೆ. ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಖಚಿತಪಡಿಸಿಲ್ಲ.
ಅಷ್ಟಕ್ಕೂ ಆಗಿದ್ದೇನು: ಪ್ರಿಯಾಂಕಾ ನಾಮಿನೇಷನ್ ವೇಳೆ ಖರ್ಗೆಗೆ ಅವಮಾನ ಆಯ್ತು ಅಂತಾ ಮೇಲ್ನೋಟಕ್ಕೆ ಕಾಣಿಸಿದೆ. ನಾಮಿನೇಷನ್ ವೇಳೆ ಖರ್ಗೆ ಅವರನ್ನು ಪ್ರಿಯಾಂಕಾ ವಾದ್ರಾ ಹೊರಕಳಿಸಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಮಗ, ಗಂಡ ಬಂದಿದ್ದಕ್ಕೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಹೊರಕಳಿಸಲಾಗಿದೆ ಎಂದು ಬಿಜೆಪಿ ಆರೋಪಮಾಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎದ್ದು ಹೊರ ಹೋದಾಗ ಮಲ್ಲಿಕಾರ್ಜುನ ಖರ್ಗೆ ಒಳಗೆ ಬಂದಿದ್ದರು. ಆ ಬಳಿಕ ಮಗ, ಗಂಡನೊಂದಿಗೆ ಡಿಸಿ ಕಚೇರಿಗೆ ಪ್ರಿಯಾಂಕಾ ಎಂಟ್ರಿಯಾಗಿದ್ದರು. ಈ ವೇಳೆ 5 ಜನಕ್ಕಿಂತ ಹೆಚ್ಚು ಇರಬಾರದು ಎಂದು ವಯನಾಡು ಡಿಸಿ ಸೂಚನೆ ನೀಡಿದ್ದಾರೆ. ಆಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೊರಗೆ ಹೋಗಿರಬಹುದು ಎನ್ನಲಾಗಿದೆ.
ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕಾ ಎಂಟ್ರಿ; ವಯನಾಡಿನಿಂದ ನಾಮಪತ್ರ ಸಲ್ಲಿಕೆ
ಈ ಹಂತದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಬಾಗಿಲಿನ ಸಂದಿಯಿದ ಒಳಗಿನ ಪ್ರಕ್ರಿಯೆ ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಲ್ಲಿಕಾರ್ಜುನ್ ಖರ್ಗೆಗೆ ಹಾಗೂ ದಲಿತರಿಗೆ ಇದು ಅವಮಾನ ಎಂದು ಬಿಜೆಪಿ ನಾಯಕರ ಆರೋಪ ಮಾಡಿದ್ದಾರೆ. ನಾಮಿನೇಷನ್ ಸಲ್ಲಿಕೆ ವೇಳೆ ಮತದಾರ ಸೇರಿ ಐವರ ಹಾಜರಿ ಕಡ್ಡಾಯವಾಗಿದೆ. ಮೊದಲ ಸೆಟ್ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ್ ಖರ್ಗೆ ಇದ್ದಿರುವ ಸಾಧ್ಯತೆ ಇದೆ. ಎರಡನೇ ಸೆಟ್ಅನ್ನು ಮಗ, ಗಂಡನೊಂದಿಗೆ ಪ್ರಿಯಾಂಕಾ ಸಲ್ಲಿಕೆ ಮಾಡಿರಬಹುದು. ಈ ವೇಳೆ ಹೊರ ನಿಂತು ಬಾಗಿಲಿನ ಸಂದಿನಿಂದ ಮಲ್ಲಿಕಾರ್ಜುನ ಖರ್ಗೆ ಒಳಗಿನ ಘಟನೆಯನ್ನು ನೋಡಿದ್ದಾರೆ. ಇದೇ ವಿಡಿಯೋ ಟ್ವೀಟ್ ಮಾಡಿ ಅವಮಾನ ಎಂದು ಬಿಜೆಪಿ ಆರೋಪ ಮಾಡಿದೆ.
ಆರೋಪ ಬಂದಾಗ ಖರ್ಗೆ, ಸಿಎಂ ಸೈಟ್ ವಾಪಸ್ ಕೊಟ್ರು, ನಮ್ಮ ಮಾದರಿ ಬಿಜೆಪಿ ಅನುಸರಿಸಲಿ: ಐವನ್ ಡಿಸೋಜಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ