ಕಾರ್ ಅಪಘಾತದ ನಂತರ ಮ್ಯಾನೇಜರ್‌ಗೆ ಫೋಟೋ ಕಳುಹಿಸಿದ ಉದ್ಯೋಗಿಗೆ, ಕುಟುಂಬದ ಸಾವಿನ ಹೊರತಾಗಿ ಯಾವುದೇ ಕಾರಣಕ್ಕೂ ತಡವಾಗುವುದು ಸ್ವೀಕಾರಾರ್ಹವಲ್ಲ ಎಂದು ಮ್ಯಾನೇಜರ್ ತಿಳಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ ಅಪಘಾತದ ನಂತರ ತಮ್ಮ ಮ್ಯಾನೇಜರ್ ಗೆ ವ್ಯಕ್ತಿಯೊಬ್ಬರು ಘಟನೆಯ ಬಗ್ಗೆ ತಿಳಿಸಲು ತನ್ನ ನುಜ್ಜುಗುಜ್ಜಾದ ಗಾಡಿಯ ಫೋಟೋವನ್ನು ಕಳುಹಿಸಿದರು. ಆದರೆ ಆ ಮ್ಯಾನೇಜರ್ ಮಾತ್ರ ನೀವು ಅಪ್ಡೇಟ್ ಮಾಡುತ್ತಿರಿ. ಯಾವ ಸಮಯದಲ್ಲಿ ನೀವು ಆಫೀಸ್ ನಲ್ಲಿ ಇರುತ್ತೀರಿ ಎಂದು ನಾವು ಊಹಿಸಬಹುದು ಎಂದು ಮೆಸೇಜ್ ಹಾಕಿದ್ದಾರೆ.
ಮುಂದುವರೆದು ಮೆಸೇಜ್ ಹಾಕಿ ನೀವು ಏಕೆ ತಡವಾಗಿ ಬರುತ್ತೀರಿ ಎಂಬುದು ಅರ್ಥವಾಗುವಂತಹದ್ದಾಗಿದೆ. ಆದರೆ ಕುಟುಂಬದ ಮರಣವನ್ನು ಹೊರತುಪಡಿಸಿ ಕೆಲಸದ ಸ್ಥಳದಲ್ಲಿ ನಿಮ್ಮನ್ನು ತಡೆಯುವ ಯಾವ ಘಟನೆಯೂ ಯಾವುದೇ ಕಂಪನಿಯಲ್ಲಿ ಕ್ಷಮಿಸಲ್ಲ. ಕುಟುಂಬದಲ್ಲಿ ಸಾವು ಸಂಭವಿಸಿದರೆ ಮಾತ್ರ ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತದೆ ಎಂದು ಬರೆದಿದ್ದಾನೆ.
ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಲ ಹೆಸರು, ವಿಳಾಸ, ಲಿಂಗ ಬದಲಾಯಿಸಬಹುದು?
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ನಿಮ್ಮ ಮ್ಯಾನೇಜರ್ ಇದನ್ನು ಹೇಳಿದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?" ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ (ಹಿಂದಿನ ಟ್ವಿಟರ್ ) ಬಳಕೆದಾರ "ಕಿರಾ" ಎಂಬವರು ಬರೆದುಕೊಂಡಿದ್ದಾರೆ.
ಇಂತಹ ನಿರ್ವಾಹಕರು ನನ್ನನ್ನು ಹೆದರಿಸುತ್ತಾರೆ, ನಿಮ್ಮ ಜೀವನವು ಶೋಚನೀಯವಾಗಿದೆಯೇ?!" ಒಬ್ಬ ಬಾಸ್ ಮತ್ತು ಉದ್ಯೋಗಿಯ ನಡುವಿನ ಸಂಭಾಷಣೆಯನ್ನು ನೋಡಿ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.
ಭವಿಷ್ಯದಲ್ಲಿ ಯಾವುದೇ ಕಂಪನಿಯು ನೀವು ಏಕೆ ಕೆಲಸ ತೊರೆದಿದ್ದೀರಿ ಎಂದು ಕೇಳಿದರೆ ನೀವು ಈ ಸ್ಕ್ರೀನ್‌ಶಾಟ್ ಅನ್ನು ತೋರಿಸಬಹುದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಬಿಗ್ ಬಿ ಕುಟುಂಬದಲ್ಲಿ ಶೋಕ, ಜಯಾ ಬಚ್ಚನ್ ತಾಯಿ ಇಂದಿರಾ ವಿಧಿವಶ
ಮತ್ತೊಬ್ಬರು ನನಗೂ ಈ ಅನುಭವ ಆಗಿದೆ. ಎಂದು ಬರೆದುಕೊಂಡಿದ್ದಾರೆ. ನಾನಾಗಿದ್ದರೆ ಅವರಿಗೆ ಅರ್ಥ ಮಾಡಿಸಿ ಕೆಲಸ ಬಿಟ್ಟು ಹೋಗುತ್ತಿದ್ದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.