ಸ್ಟಕ್ ಆದ ರೋಲರ್‌ ಕೋಸ್ಟರ್‌: ಮಧ್ಯ ಆಗಸದಲ್ಲೇ ತಲೆಕೆಳಗಾಗಿ ಸಿಲುಕಿಕೊಂಡ ಮಕ್ಕಳು: ವೀಡಿಯೋ ವೈರಲ್

Published : Jul 05, 2023, 11:07 AM IST
ಸ್ಟಕ್ ಆದ ರೋಲರ್‌ ಕೋಸ್ಟರ್‌: ಮಧ್ಯ ಆಗಸದಲ್ಲೇ ತಲೆಕೆಳಗಾಗಿ ಸಿಲುಕಿಕೊಂಡ ಮಕ್ಕಳು: ವೀಡಿಯೋ ವೈರಲ್

ಸಾರಾಂಶ

7 ಮಕ್ಕಳು ಸೇರಿದಂತೆ ದೊಡ್ಡವರು ಮಧ್ಯ ಆಗಸದಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಘಟನೆ ಅಮೆರಿಕಾದ ಕ್ರ್ಯಾಂಡನ್ ಮನೋರಂಜನಾ ಪಾರ್ಕ್‌ನಲ್ಲಿ ನಡೆದಿದೆ. 

ನ್ಯೂಯಾರ್ಕ್‌: ಪ್ರವಾಸಿಗರಿಗೆ ಚಿಲ್ ನೀಡುವ ಜೊತೆ ಜೊತೆಗೆ ಹೊಟ್ಟೆ ತೊಳೆಸಿದಂತೆ ಮಾಡುವ ರೋಲರ್ ಕೋಸ್ಟರ್ ಬಗ್ಗೆ ಯಾರಿಗೆ ಗೊತ್ತಿಲ್ಲ, ಹೇಳಿ ಅಮ್ಯೂಸ್‌ಮೆಂಟ್ ಪಾರ್ಕ್ ಅಥವಾ ಮನೋರಂಜನಾ ಪಾರ್ಕ್‌ನಲ್ಲಿರುವ ಈ ರೋಲರ್‌ ಕೋಸ್ಟರ್‌ಗಳು ನೋಡುಗರಿಗೂ ಅದರಲ್ಲಿ ಸಾಗುವ ಪ್ರವಾಸಿಗರಿಗೂ ಸಖತ್ ಮನೋರಂಜನೆ ನೀಡುತ್ತದೆ. ಇಂತಹ ರೋಲರ್ ಕೋಸ್ಟರ್ ಒಂದು ಮಧ್ಯ ಆಗಸದಲ್ಲಿ ಸ್ಥಗಿತಗೊಂಡ ಪರಿಣಾಮ  7 ಮಕ್ಕಳು ಸೇರಿದಂತೆ ದೊಡ್ಡವರು ಮಧ್ಯ ಆಗಸದಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಘಟನೆ ಅಮೆರಿಕಾದ ಕ್ರ್ಯಾಂಡನ್ ಮನೋರಂಜನಾ ಪಾರ್ಕ್‌ನಲ್ಲಿ ನಡೆದಿದೆ. 

ಮಧ್ಯ ಆಗಸದಲ್ಲಿ ಸ್ಟಕ್ ಆದ ಈ ರೋಲರ್‌ ಕೋಸ್ಟರ್‌ನ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿವೆ. ಮೂರು ಗಂಟೆಗೂ ಹೆಚ್ಚು ಕಾಲ 7 ಮಕ್ಕಳೂ ಸೇರಿದಂತೆ ಅನೇಕರು ಈ ರೋಲರ್ ಕೋಸ್ಟರ್‌ನಲ್ಲಿ ತಲೆಕೆಳಗಾಗಿ ನೇತಾಡಿದರು.  ಅಮೇರಿಕನ್ ವಿಸ್ಕಾನ್ಸಿನ್‌ನಲ್ಲಿ ನಡೆದ ಹಬ್ಬವೊಂದರಲ್ಲಿ ಈ  ಘಟನೆ ನಡೆದಿದೆ. ಪ್ರಸ್ತುತ ಸಿಲುಕಿದ್ದ ಎಲ್ಲಾ ಮಕ್ಕಳನ್ನು ರೋಲರ್ ಕೋಸ್ಟರ್‌ನಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಪೋರೆಸ್ಟ್ ಕಂಟ್ರಿ ಹಬ್ಬದ ಭಾಗವಾಗಿ ಕ್ರಂಡನ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ಈ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ಈ ಅನಾಹುತ ನಡೆದಿದೆ. 

ರೋಲರ್ ಕೋಸ್ಟರ್ ಏರಿದ್ರೆ ಕಿಡ್ನಿ ಕಲ್ಲು ಮಾಯ! (ಲ್ಯಾಬ್ ರಿಪೋರ್ಟ್)

ರೈಡ್‌ನ ಮಧ್ಯದಲ್ಲೇ ರೋಲರ್ ಕೋಸ್ಟರ್ ಸ್ಟಕ್ ಆಗಿದ್ದರಿಂದ ಸುಮಾರು ಮೂರು ಗಂಟೆಗಳ ಕಾಲ ಪ್ರವಾಸಿಗರು ತಲೆಕೆಳಗಾಗಿ ಸಿಲುಕಿಕೊಂಡಿದ್ದರು. ವೈರಲ್ ಆಗಿರುವ ವೀಡಿಯೋದಲ್ಲಿ ಪ್ರವಾಸಿಗರು ನೇತಾಡುತ್ತಿರುವುದು ಹಾಗೂ ರಕ್ಷಣಾ ತಂಡದ ಸಿಬ್ಬಂದಿ ಸಿಲುಕಿಕೊಂಡ ರೋಲರ್ ಕೋಸ್ಟರ್‌ಗೆ ಏರಿ ಅಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಸಶಾವೈಟ್ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಕ್ಯಾನಿಕಲ್ ದೋಷದ ಕಾರಣದಿಂದಾಗಿ ರೋಲರ್ ಕೋಸ್ಟರ್ ಮಧ್ಯ ಆಗಸದಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗಷ್ಟೇ ಈ ರೋಲರ್ ಕೋಸ್ಟರ್ ರೈಡ್‌ನ್ನು ಪರಿಶೀಲನೆ ಮಾಡಲಾಗಿತ್ತು. ಪ್ರಸ್ತುತ ಈ ಬಗ್ಗೆ ನಮಗೆ ಬೇರಾವ ಮಾಹಿತಿ ಇಲ್ಲ ಎಂದು ಕ್ರಂಡನ್ ಅಗ್ನಿ ಶಾಮಕ ಇಲಾಖೆಯ ಕ್ಯಾಪ್ಟನ್ ಬ್ರೆನ್ನನ್ ಕುಕ್ ಹೇಳಿದ್ದಾರೆ. ಇನ್ನು ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಅಲ್ಲದೇ ರಕ್ಷಿಸಲ್ಪಟ್ಟ ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿ ಬಿಡುಗಡೆ ಮಾಡಲಾಗಿದೆ. 

ಮನೋರಂಜನಾ ಪಾರ್ಕ್‌ನಲ್ಲಿ ಬಾಲಕನ ಒಂಟಿ ರೈಡ್: ವಿಡಿಯೋ ವೈರಲ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

90's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!
India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!