ಗೃಹ ಸಚಿವರ ಮೇಲೆ 100 ಕೋಟಿ ಡೀಲ್ ಆರೋಪ; ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಬಿರುಕು?

By Suvarna NewsFirst Published Mar 21, 2021, 10:27 PM IST
Highlights

ಅಂಬಾನಿ ಮನೆ ಮುಂದಿನ ಬಾಂಬ್ ಪ್ರಕರಣ ಹಲವು ತಿರುಗಳನ್ನು ಪಡೆದುಕೊಂಡು ಇದೀಗ ಮಹರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಬುಡಕ್ಕೆ ಬಂದು ನಿಂತಿದೆ. 100 ಕೋಟಿ ರೂಪಾಯಿ ಡೀಲ್ ಆರೋಪ ಸುತ್ತಿಕೊಂಡಿದೆ. ಇತ್ತ ಮೈತ್ರಿ ಪಕ್ಷದ ಹಿರಿಯ ನಾಯಕ ಶರದ್ ಪವಾರ್ ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ ಇದೀಗ ಮಾಹಾರಾಷ್ಟ್ರ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮುಂಬೈ(ಮಾ.21):  ಮುಂಬೈ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ವರ್ಗಾವಣೆ ಮಾಡಿದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಮೈತ್ರಿ ಸರ್ಕಾರದ ಒಂದೊಂದೆ ಭ್ರಷ್ಟಾರಗಳು ಹೊರಬರುತ್ತಿದೆ. ವರ್ಗಾವಣೆ ಬಳಿಕ ಪರಂ ಬೀರ್ ಸಿಂಗ್, ತಿಂಗಳಿಗೆ 100 ಕೋಟಿ ಸಂಗ್ರಹ ಮಾಡಬೇಕೆಂದು ಗೃಹಸಚಿವರೇ ಹೇಳಿದ್ದರು ಎಂದು ಪರಂ ಬೀರ್ ಸಿಂಗ್ ಗಂಭೀರ ಆರೋಪ ಮಾಡಿದ್ದರು. ಇದೀಗ ಇದೇ ಆರೋಪ ಮೈತ್ರಿ ಸರ್ಕಾರದ ಬುಡ ಅಲುಗಾಡುತ್ತಿದೆ.

100 ಕೋಟಿ ಹಫ್ತಾ: ಮಹಾರಾಷ್ಟ್ರ ಸಚಿವನ ಡೀಲ್!

ಅಂಬಾನಿ ಮನೆ ಮುಂದಿನ ಬಾಂಬ್ ಪ್ರಕರಣವನ್ನು ಸರಿಯಾಗಿ ನಿಭಿಯಾಸಿಲ್ಲ ಎಂದು ಪರಂ ಬೀರ್ ಸಿಂಗ್ ಅವರನ್ನು ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ಅನಿಲ್ ದೇಶ್‌ಮುಖ್ ಈ ನಿರ್ಧಾರಕ್ಕೆ ವಿರೋಧಗಳು ವ್ಯಕ್ತವಾಗಿತ್ತು. ಆದರೆ ವರ್ಗಾವಣೆಗೊಂಡ ಪರಂ ಬೀರ್ ಸಿಂಗ್ ಮೈತ್ರಿ ಸರ್ಕಾರದ ಒಂದೊಂದೆ ಹಗರಣಗಳನ್ನು ಬಯಲಿಗೆಳೆಯುತ್ತಿದ್ದಾರೆ.

ಆರೋಪದ ಬೆನ್ನಲ್ಲೇ, ಮೈತ್ರಿ ಸರ್ಕಾರದ ಹಿರಿಯ ನಾಯಕ, ಎನ್‌ಸಿಪಿ ಮುಖಂಡ ಶರದ್ ಪವಾರ್ ತನಿಖೆಗೆ ಆಗ್ರಹಿಸಿದ್ದಾರೆ. ಪವಾರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆನ್ನಲ್ಲೇ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. 

ಬಿಜೆಪಿ ಅನಿಲ್ ದೇಶ್‌ಮುಖ್ ರಾಜೀನಾಮೆ ಆಗ್ರಹಿಸಿದೆ. ಇತ್ತ ಆರೋಪ, ಟೀಕೆಗಳ ಸುರಿಮಳೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೈತ್ರಿ ಸರ್ಕಾರ ಮುಜುಗರಕ್ಕೀಡಾಗಿದೆ ಎಂದು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

click me!