ಕೋಲ್ಕತಾ ಆರ್ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಬಲಾತ್ಕಾರ ಹಾಗೂ ಕೊಲೆ ಪ್ರಕರಣದ ಸಂಬಂಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪ್ರಮುಖ ಆರೋಪಿ ಸಂಜಯ್ ರೊಯ್ ಕೃತ್ಯದ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.
ಕೋಲ್ಕತಾ(ಅ.07) ದೇಶನ್ನೇ ನಡುಗಿಸಿದ ಪ್ರಕರಣದಲ್ಲಿ ಆರ್‌ಜಿ ಕರ್ ಆಸ್ಪತ್ರೆಯ ಕಿರಿಯ ವೈದ್ಯೆ ಮೇಲೆ ನಡೆದ ಬಲಾತ್ಕಾರ ಹಾಗೂ ಕೊಲೆ ಪ್ರಕರಣ. ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಕಾಮುಕ ದಿನಬೆಳಗಾಗುವ ಮೊದಲೇ ಅಂತ್ಯಗೊಳಸಿದ್ದರು. ಬಳಿಕ ಪ್ರಕರಣ ಮುಚ್ಚಿ ಹಾಕಲು ಎಲ್ಲಾ ಪ್ರಯತ್ನ ಮಾಡಲಾಗಿತ್ತು. ಆದರೆ ಪ್ರತಿಭಟನೆ, ಹೋರಾಟಗಳಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡು ಕೋರ್ಟ್ ಮಧ್ಯಪ್ರವೇಶಿಸಿತ್ತು. ಹೀಗಾಗಿ ಸಿಬಿಐ ತನಿಖೆ ನಡೆಯುತ್ತಿದೆ. ಇದೀಗ ಸಿಬಿಐ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರೊಯ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಚಾರ್ಚ್‌ಶೀಟ್‌ನಲ್ಲಿ ಘಟನೆಯ ಸ್ಫೋಟಕ ಮಾಹಿತಿ ತೆರೆದಿಟ್ಟಿದೆ.
ಕೋಲ್ಕತಾ ಕೋರ್ಟ್‌ಗೆ ಸಿಬಿಐ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಸಾಮೂಹಿಕ ಬಲತ್ಕಾರದ ಕುರಿತು ಉಲ್ಲೇಖವಿಲ್ಲ. ಆರೋಪಿ ಸಂಜಯ್ ರೊಯ್ ಎಸಗಿದ ಕೃತ್ಯ ಎಂದು ಉಲ್ಲೇಖಿಸಿದ್ದಾರೆ. ಆಗಸ್ಟ್ 9 ರ ರಾತ್ರಿಯಲ್ಲಿ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ವೈದ್ಯ ಬೆಳಗಿನ ಜಾವ ವಿಶ್ರಾಂತಿಗಾಗಿ ಸೆಮಿನಾರ್ ರೂಂಗೆ ತೆರಳಿ ಮಲಗಿದ್ದಾರೆ. ಕೆಲ ಹೊತ್ತಲ್ಲೇ ಹೊಂಚು ಹಾಕಿದ್ದ ಸಂಜಯ್ ರಾವ್ ಈ ಕೃತ್ಯ ಎಸಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಅತ್ಯಾಚಾರಿಗಳಿಗೆ 10 ದಿನದಲ್ಲಿ ಗಲ್ಲು ಶಿಕ್ಷೆ, ಆ್ಯಂಟಿ ರೇಪ್ ಬಿಲ್ ಪಾಸ್ ಮಾಡಿದ ಬಂಗಾಳ ಸರ್ಕಾರ!
ಸಂಜಯ್ ರೊಯ್ ಪೊಲೀಸರ ಜೊತೆ ಸ್ವಯಂ ಸೇವಕನಾಗಿಯೂ ಕೆಲಸ ಮಾಡುತ್ತಿದ್ದ. ಹೀಗಾಗಿ ಪೊಲೀಸ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದ. ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸಂಜಯ್ ರಾಯ್ ಬಲತ್ಕಾರ ಮಾಡಿ ಏಕಾಂಗಿಯಾಗಿ ಹತ್ಯೆ ಮಾಡಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಕಿರಿಯ ವೈದ್ಯ ಮೇಲೆ ಬಲಾತ್ಕಾರ ನಡೆದಿರುವುದು ಸ್ಪಷ್ಟವಾಗಿದೆ. ಜೊತೆಗೆ ವೈದ್ಯೆ ದೇಹದಲ್ಲಿ ಒಟ್ಟು 25 ಗಾಯಗಳಾಗಿರುವುದು ಬಯಲಾಗಿದೆ. ಕಿರಿಯ ವೈದ್ಯ ಮಲಗಿದ್ದ ಸೆಮಿನಾರ್ ರೂಂಗೆ ಸಂಜಯ್ ರಾವ್ ಬೆಳಗಿನ ಜಾವ 4.03 ಗಂಟೆಗೆ ತೆರಳುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ಅರ್ಧ ಗಂಟೆ ಬಳಿಕ ಸಂಜಯ್ ರಾವ್ ರೂಂ ನಿಂದ ಹೊರಬಂದಿದ್ದಾನೆ. ಇಷ್ಟೇ ಅಲ್ಲ ಸಂಜಯ್ ರಾವ್ ಬ್ಲೂಟೂತ್ ಹೆಡ್‌ಸೆಟ್ ಕೂಡ ಘಟನಾ ಸ್ಥಳದಿಂದ ಪತ್ತೆಯಾಗಿರುವುದನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
ಆರ್‌ಜಿ ಕರ್ ವೈದ್ಯೆ ಪ್ರಕರಣದ ವಿರುದ್ದ ದೇಶಾದ್ಯಂತ ಹೋರಾಟ, ಪ್ರತಿಭಟನೆಗಳು ನಡೆದಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಈ ಘಟನೆಯಿಂದ ತೀವ್ರ ಹಿನ್ನಡೆ ಅನುಭವಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಪಶ್ಚಿಮ ಬಂಗಾಳ ಪೊಲೀಸರಿಗೆ ಛೀಮಾರಿ ಹಾಕಿತ್ತು.
ಕೋಲ್ಕತಾ ಆರ್ಜಿ ಕರ್ ಆಸ್ಪತ್ರೆ ನಿವೃತ್ತ ಪ್ರಿನ್ಸಿಪಾಲ್ ಅರೆಸ್ಟ್, ಸಿಎಂ ಮಮತಾಗೆ ಹೆಚ್ಚಾದ ಸಂಕಷ್ಟ!