4000 ಮನೆ ಧ್ವಂಸ ವಿರುದ್ಧ ನಿವಾಸಿಗಳು ಸುಪ್ರೀಂಕೋರ್ಟ್‌ಗೆ

By Kannadaprabha NewsFirst Published Jan 5, 2023, 10:42 AM IST
Highlights

ಉತ್ತರಾಖಂಡದ ಹಲ್ದಾವನಿಯಲ್ಲಿ 29 ಎಕರೆ ರೈಲ್ವೆ ಭೂಮಿಯ ಒತ್ತುವರಿ ತೆರವು ಮಾಡುವಂತೆ ಅಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಅಲ್ಲಿನ ನಿವಾಸಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಹಲ್ದಾವನಿ/ನವದೆಹಲಿ: ಉತ್ತರಾಖಂಡದ ಹಲ್ದಾವನಿಯಲ್ಲಿ 29 ಎಕರೆ ರೈಲ್ವೆ ಭೂಮಿಯ ಒತ್ತುವರಿ ತೆರವು ಮಾಡುವಂತೆ ಅಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಅಲ್ಲಿನ ನಿವಾಸಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ಇಂದು ಕೋರ್ಟ್ ವಿಚಾರಣೆ ನಡೆಸಲಿದೆ.  ಹಲ್ದಾವನಿಯಲ್ಲಿನ 29 ಎಕರೆ ಜಮೀನು ತನ್ನದಾಗಿದ್ದು ಇಲ್ಲಿರುವ 4000 ಮನೆಗಳ ತೆರವಿಗೆ ರೈಲ್ವೆ ಮುಂದಾಗಿತ್ತು. ಇದಕ್ಕೆ ಹೈಕೋರ್ಟ್ ಕೂಡ ಅಸ್ತು ಎಂದಿತ್ತು. ಜ.9ರ ಒಳಗೆ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನಿವಾಸಿಗಳಿಗೆ ಸೂಚಿಸಿತ್ತು.

ಆದರೆ, 4000 ಮನೆಗಳ ನಿವಾಸಿಗಳು ಮನೆಗಳ ಧ್ವಂಸದ (House demolition) ವಿರುದ್ಧ ತೀವ್ರ ಪ್ರತಿಭಟನೆ (Protest) ನಡೆಸುತ್ತಿದ್ದಾರೆ.  ತಾವು ಮನೆ ಮಾತ್ರವಲ್ಲದೆ ಗುತ್ತಿಗೆ ಜಮೀನನ್ನೂ ಹೊಂದಿದ್ದು ಅಲ್ಲಿ ಒಟ್ಟು 4 ಸರ್ಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, 1 ಬ್ಯಾಂಕ್‌, 2 ಬೃಹತ್‌ ನೀರಿನ ಟ್ಯಾಂಕ್‌ಗಳು, 10 ಮಸೀದಿಗಳು, 4 ದೇವಾಲಯಗಳು ಹಾಗೂ ಹಲವಾರು ಅಂಗಡಿಗಳನ್ನು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ,  ಈ ಜಾಗ ರೈಲ್ವೆಗೆ ಸೇರಿದ್ದು ಹಾಗೂ ಈ ಒತ್ತುವರಿ ಮಾಡಿರುವುದು ಎಂದು ಜಿಲ್ಲಾಡಳಿತ ಹೈಕೋರ್ಟ್‌ಗೆ ಹೇಳಿತ್ತು.


ಹಿಜ್ಬುಲ್‌ ಉಗ್ರ ಅಮೀರ್‌ನ ಮನೆ ಧ್ವಂಸಗೊಳಿಸಿದ ಜಮ್ಮು ಕಾಶ್ಮೀರ ಸರ್ಕಾರ

ಮದುವೆಗೆ ನಿರಾಕರಿಸಿದ ಯುವತಿಯ ಥಳಿಸಿದವನ ಮನೆ ಧ್ವಂಸ

click me!