ದೇಶದ 65% ಸೋಂಕಿತರಲ್ಲಿ ಕೊರೋನಾ ಲಕ್ಷಣವೇ ಇರಲಿಲ್ಲ: ಆತಂಕ ಹುಟ್ಟಿಸಿದ ವರದಿ!

By Kannadaprabha News  |  First Published Apr 21, 2020, 8:55 AM IST

ರೋಗ ಲಕ್ಷಣವಿಲ್ಲದ ಸೋಂಕಿತರಿಂದ ಆತಂಕ ಹೆಚ್ಚಳ| ದೇಶಾದ್ಯಂತ 65% ಸೋಂಕಿತರಲ್ಲಿ ಕೊರೋನಾ ಲಕ್ಷಣಗಳೇ ಇರಲಿಲ್ಲ| ಸೋಂಕು ಪತ್ತೆಗೂ ಮುನ್ನ ಬೇರೆಯವರಿಗೆ ಹರಡುವ ಭೀತಿ ಏರಿಕೆ


ನವದೆಹಲಿ(ಏ.21): ದೇಶಾದ್ಯಂತ ಕೊರೋನಾ ವೈರಸ್‌ ಸೋಂಕಿತರ ಪೈಕಿ ಸುಮಾರು ಮೂರನೇ ಎರಡರಷ್ಟುಜನರಿಗೆ ಪರೀಕ್ಷೆಯ ವೇಳೆ ಸೋಂಕಿನ ಲಕ್ಷಣಗಳೇ ಇರಲಿಲ್ಲ ಎಂಬ ಸಂಗತಿ ಆತಂಕ ಮೂಡಿಸಿದೆ. ಇವರಲ್ಲಿ ಸೋಂಕಿನ ಲಕ್ಷಣಗಳು ಇಲ್ಲದ ಕಾರಣ ಇಂತಹವರನ್ನು ಸಾಮಾನ್ಯವಾಗಿ ಐಸೋಲೇಶನ್‌ ಅಥವಾ ಕ್ವಾರಂಟೈನ್‌ ಮಾಡಿರುವುದಿಲ್ಲ. ಹೀಗಾಗಿ ಇವರು ತಮಗೆ ಗೊತ್ತಿಲ್ಲದೆಯೇ ಬೇರೆಯವರಿಗೆ ಸೋಂಕು ಹರಡಿರುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಪರೀಕ್ಷೆಯ ವೇಳೆ ಮಹಾರಾಷ್ಟ್ರದಲ್ಲಿ ಕೊರೋನಾ ಪಾಸಿಟಿವ್‌ ಬಂದ ರೋಗಿಗಳಲ್ಲಿ ಶೇ.65ರಷ್ಟುಜನರಲ್ಲಿ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ ಅಥವಾ ಉಸಿರಾಟದ ತೊಂದರೆ ಇರಲಿಲ್ಲ. ಉತ್ತರ ಪ್ರದೇಶದಲ್ಲಿ ಶೇ.75, ಅಸ್ಸಾಂನಲ್ಲಿ ಶೇ.82 ರೋಗಿಗಳಲ್ಲಿ ಹಾಗೂ ಹರ್ಯಾಣದ ಬಹುತೇಕ ಸೋಂಕಿತರಲ್ಲಿ ಸೋಂಕಿನ ಲಕ್ಷಣಗಳು ಇರಲಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.

Latest Videos

undefined

ದೇಶವ್ಯಾಪಿ ನಿರ್ಬಂಧ ಸಡಿಲಕ್ಕೆ ನೀರಸ ಪ್ರತಿಕ್ರಿಯೆ!

‘ಸೋಂಕಿತರಲ್ಲಿ ಕೊರೋನಾ ಲಕ್ಷಣಗಳು ಗೋಚರಿಸುವುದು ಅವರ ವಯಸ್ಸು, ರೋಗನಿರೋಧಕ ಶಕ್ತಿ ಹಾಗೂ ಅವರ ದೇಹದಲ್ಲಿರುವ ವೈರಸ್‌ನ ಪ್ರಮಾಣವನ್ನು ಅವಲಂಬಿಸಿರುತ್ತದೆ. ವೈರಸ್‌ ಲೋಡ್‌ ಜಾಸ್ತಿ ಇಲ್ಲದಿದ್ದರೆ ಅಥವಾ ವೈರಸ್‌ನ ತೀಕ್ಷ$್ಣತೆ ಜಾಸ್ತಿ ಇಲ್ಲದಿದ್ದರೆ ಕೆಲವೊಮ್ಮೆ ಲಕ್ಷಣಗಳು ಕಾಣಿಸುವುದಿಲ್ಲ. ಸಾಮಾನ್ಯವಾಗಿ 20-45 ವರ್ಷದ ಕೊರೋನಾ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸುವುದು ಕಡಿಮೆ. ಬೇರೆ ಬೇರೆ ಔಷಧ ತೆಗೆದುಕೊಳ್ಳುವ ವಯಸ್ಸಾದವರಲ್ಲೂ ಲಕ್ಷಣಗಳು ಕಾಣಿಸದೆ ಹೋಗಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬೇಗ ಲಕ್ಷಣಗಳು ಕಾಣಿಸುತ್ತವೆ. ಸೋಂಕಿತರು ವೈರಸ್‌ನ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಬೇರೆಯವರಿಗೆ ಸೋಂಕು ಹರಡುವ ಪ್ರಮಾಣ ಬಹಳ ಹೆಚ್ಚಿರುತ್ತದೆ’ ಎಂದು ವೈದ್ಯರು ಹೇಳಿದ್ದಾರೆ.

ಪಾದರಾಯನಪುರ ಗಲಭೆಯ ಗುಟ್ಟು ಬಿಚ್ಚಿಟ್ಟ ಕೊರೋನ ವಾರಿಯರ್ಸ್!

ರಾಜ್ಯ| ಸೋಂಕಿನ ಲಕ್ಷಣವಿಲ್ಲದ ಪ್ರಕರಣ| ಒಟ್ಟು ಪ್ರಕರಣ

ಮಹಾರಾಷ್ಟ್ರ- 65%- 3648

ಉತ್ತರ ಪ್ರದೇಶ- 75%- 974

ಕರ್ನಾಟಕ- 50%- 384

ಹರ್ಯಾಣ- 65%- 232

ಪಂಜಾಬ್-‌ 75%- 182

ಒಡಿಶಾ- 78%- 61

ಉತ್ತರಾಖಂಡ- 50%- 42

ಛತ್ತೀಸ್‌ಗಢ- 63%- 36

ಜಾರ್ಖಂಡ- 98%- 36

ಅಸ್ಸಾಂ- 82%- 34

click me!