
ಭೋಪಾಲ್ (ಮೇ.2): ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಸಹಾಯಕ ಇಂಜಿನಿಯರ್ (ಗುತ್ತಿಗೆ) ಆಗಿರುವ ಹೇಮಾ ಮೀನಾ ಅವರ ಮನೆಯ ಮೇಲೆ ಶುಕ್ರವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ಅವರು ಮಾಡಿಟ್ಟುಕೊಂಡ ಅಕ್ರಮ ಆಸ್ತಿ ಕಂಡು ಅಚ್ಚರಿ ಪಟ್ಟಿದ್ದಾರೆ. ಪ್ರತಿ ತಿಂಗಳು ಕೇವಲ 30 ಸಾವಿರ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದ ಇವರು ತಮ್ಮ ಆದಾಯಕ್ಕಿಂತ 332 ಪರ್ಸೆಂಟ್ ಮೌಲ್ಯದ ಆಸ್ತಿ ಗಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಗುರುವಾರ, ಲೋಕಾಯುಕ್ತರು ಅವರ ನಿವಾಸ, ತೋಟದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದು, ಇದರ ಪರಿಣಾಮವಾಗಿ ಅಂದಾಜು ₹ 7 ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ, ಲೋಕಾಯುಕ್ತ ತಂಡವು ಸಬ್ ಇಂಜಿನಿಯರ್ ಮನೆಯಲ್ಲಿ ₹ 30 ಲಕ್ಷ ಮೌಲ್ಯದ ಟಿವಿಯನ್ನು ಪತ್ತೆ ಮಾಡಿದೆ ಎಂದು ವರದಿಗಳು ಸೂಚಿಸುತ್ತವೆ. ಅದರೊಂದಿಗೆ ಆಕೆಯ ಬಂಗಲೆಯಲ್ಲಿ ಐಷಾರಾಮಿ ಕಾರುಗಳು ಸೇರಿದಂತೆ ಒಟ್ಟು 20 ಕಾರುಗಳು ಪತ್ತೆಯಾಗಿದೆ.
ಇಷ್ಟು ಮಾತ್ರವಲ್ಲದೆ ಮೀನಾ ಅವರ 13 ವರ್ಷಗಳ ಸೇವಾವಧಿಯಲ್ಲಿ 70ರಿಂದ 80 ಹಸುಗಳಿರುವ ಐಷಾರಾಮಿ ಫಾರ್ಮ್ ಹೌಸ್ ಇರುವುದು ಪತ್ತೆಯಾಗಿದೆ. ಮೀನಾ ಅವರನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತ ತಂಡ ಭೋಪಾಲ್, ವಿದಿಶಾ ಮತ್ತು ರೈಸನ್‌ನಲ್ಲಿ ದಾಳಿ ನಡೆಸಿತು. 2020 ರಲ್ಲಿ ಆಕೆಯ ವಿರುದ್ಧ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಿದ ನಂತರ ಈ ದಾಳಿ ನಡೆದಿದೆ.
ಇದಲ್ಲದೆ, ಅವರು ತಮ್ಮ ನಿವಾಸದಲ್ಲಿ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ವಾಕಿ-ಟಾಕಿಯನ್ನು ಬಳಸುತ್ತಿದ್ದರು ಯಾರ ಕರೆಗಳು ಕೂಡ ಬರದೇ ಇರುವಂತೆ ಮನೆಯಲ್ಲಿ ಜಾಮರ್‌ಅನ್ನು ಇರಿಸಿಕೊಂಡಿದ್ದರು ಎನ್ನಲಾಗಿದೆ. ಆಕೆಯ ತಂದೆ ರಾಮಸ್ವರೂಪ್ ಮೀನಾ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡ ಆಕೆಯ ಮನೆ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಐಪಿಎಲ್ ಬೆಟ್ಟಿಂಗ್ ಲಂಚ ಸ್ವೀಕಾರ: ಲೋಕಾಯುಕ್ತರ ಬಲೆಗೆ ಬಿದ್ದ ಗಜೇಂದ್ರಗಡ ಪಿಎಸ್‌ಐ
ಬಿಲ್ಖಿರಿಯಾ ಗ್ರಾಮದಲ್ಲಿ ಮೀನಾ 20,000 ಚದರ ಅಡಿ ಭೂಮಿಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ ಮೀನಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಗುರುವಾರ ಲೋಕಾಯುಕ್ತ ವಿಶೇಷ ಪೊಲೀಸ್ ಸಂಸ್ಥೆಯ (ಎಸ್‌ಪಿಇ) ತಂಡವೊಂದು ಸೋಲಾರ್ ಪ್ಯಾನೆಲ್‌ಗಳನ್ನು ರಿಪೇರಿ ಮಾಡುವ ನೆಪದಲ್ಲಿ ಮೀನಾ ಅವರ ಬಂಗಲೆಗೆ ಪ್ರವೇಶಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರೀ ಅಕ್ರಮ ಸಂಪತ್ತು ಪತ್ತೆ: ಲೋಕಾ ಬಲೆಗೆ ಬಿದ್ದ ಇಬ್ಬರ ಬಳಿ 15 ಸೈಟ್, 14 ಫ್ಲಾಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ