ಭಾರತದ ಮೊದಲ ಹೃದಯ ಬೈಪಾಸ್‌ ಸರ್ಜರಿ ಮಾಡಿದ್ದ ಡಾಕ್ಟರ್‌ ಚೆರಿಯನ್‌ ನಿಧನ

Published : Jan 27, 2025, 08:40 AM IST
ಭಾರತದ ಮೊದಲ ಹೃದಯ ಬೈಪಾಸ್‌ ಸರ್ಜರಿ ಮಾಡಿದ್ದ ಡಾಕ್ಟರ್‌ ಚೆರಿಯನ್‌ ನಿಧನ

ಸಾರಾಂಶ

50 ವರ್ಷಗಳ ಹಿಂದೆ ದೇಶದಲ್ಲಿ ಮೊದಲ ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದ ಮತ್ತು ದೇಶದಲ್ಲೇ ಮೊದಲ ಶ್ವಾಸಕೋಶ ಕಸಿ ನಡೆಸಿದ್ದ ಖ್ಯಾತ ಹೃದಯ ತಜ್ಞ ಡಾ. ಕೆ.ಎಂ. ಚೆರಿಯನ್ ಭಾನುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 

ಚೆನ್ನೈ (ಜ.27): 50 ವರ್ಷಗಳ ಹಿಂದೆ ದೇಶದಲ್ಲಿ ಮೊದಲ ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದ ಮತ್ತು ದೇಶದಲ್ಲೇ ಮೊದಲ ಶ್ವಾಸಕೋಶ ಕಸಿ ನಡೆಸಿದ್ದ ಖ್ಯಾತ ಹೃದಯ ತಜ್ಞ ಡಾ. ಕೆ.ಎಂ. ಚೆರಿಯನ್ ಭಾನುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಹೃದಯರೋಗ ಚಿಕಿತ್ಸೆಯಲ್ಲಿ ಅವರನ್ನು ಭಾರತದಲ್ಲೇ ಅವರನ್ನು ಪಿತಾಮಹ ಎಂದು ಬಣ್ಣಿಸಲಾಗುತ್ತಿತ್ತು. ಡಾ. ಚೆರಿಯನ್ ಮಣಿಪಾಲದಲ್ಲಿ ಶಿಕ್ಷಣ ಪೂರೈಸಿದ್ದು, ಚೆನ್ನೈನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಅವರಿಗೆ 1991ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಚೆರಿಯನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

2 ತಿಂಗಳಲ್ಲಿ 3 ಕುಟುಂಬದ 17 ಜನರ ನಿಗೂಢ ಸಾವು: ಇಲ್ಲಿನ ಕೋಟರಂಕಾದ ಬದಹಾಲ್‌ ಗ್ರಾಮದಲ್ಲಿ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡಿದ್ದು, ಕಳೆದ ಒಂದೂವರೆ ತಿಂಗಳಲ್ಲಿ 3 ಪರಿವಾರಗಳ 17 ಜನರನ್ನು ಬಲಿಪಡೆದಿದೆ. ಡಿ.8ರಂದು ಗ್ರಾಮದಲ್ಲಿ ಮೊದಲ ಸಾವು ಸಂಭವಿಸಿದ್ದು ಬಳಿಕ ಒಟ್ಟು 16 ಜನರು ಸಾವನ್ನಪ್ಪಿದ್ದು ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಕಾಯಿಲೆಗೆ ತುತ್ತಾದವರ ಪರಿವಾರದ 200 ನಿಕಟ ಸಂಬಂಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಜೊತೆಗೆ ಬದಹಾಲ್‌ ಗ್ರಾಮ ಪ್ರವೇಶದ ಹಾಗೂ ಗುಂಪುಗೂಡುವ ಮೇಲೆ ನಿರ್ಬಂಧ ಹೇರಲಾಗಿದೆ.3 ಪರಿವಾರಗಳ 4 ವಯಸ್ಕರು ಹಾಗೂ 13 ಮಕ್ಕಳ ಸಾಮೂಹಿಕ ಸಾವಿಗೆ ಕಾರಣವಾದ ವಿಷಕಾರಿ ಅಂಶದ ಪತ್ತೆಗೆ ಕಾರ್ಯ ಶುರುವಾಗಿದ್ದು, ಮೃತರ ದೇಹದಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಲ್ಲ ವಿಷಕಾರಿ ಅಂಶ ಕಂಡುಬಂದಿದೆ. ಇದರ ಹಿಂದೆ ಕ್ರಿಮಿನಲ್‌ ಉದ್ದೇಶ ಇರುವ ಬಗ್ಗೆಯೂ ತನಿಖೆ ನಡೆಸಲು 11 ಜನರ ವಿಶೇಷ ತಂಡ ರಚಿಸಲಾಗಿದ್ದು, ಈವರೆಗೆ 50 ಜನರ ವಿಚಾರಣೆ ನಡೆಸಲಾಗಿದೆ.

ನರಸಂಬಂಧಿ ಜಿಬಿಎಸ್‌ ರೋಗಕ್ಕೆ ಮಹಾರಾಷ್ಟ್ರದಲ್ಲಿ ಮೊದಲ ಬಲಿ: ರಾಜ್ಯದಲ್ಲಿ ಆರ್ಭಟಿಸುತ್ತಿರುವ ನರ ಸಂಬಂಧಿ ಕಾಯಿಲೆಯಾದ ಗುಯಿಲಿನ್‌ ಬಾರ್ರೆ ಸಿಂಡ್ರೋಮ್‌ಗೆ ಪುಣೆ ಮೂಲದ ಚಾರ್ಟೆಡ್‌ ಅಕೌಂಟೆಂಟ್‌ ಒಬ್ಬರು ಸಾವನ್ನಪ್ಪಿದ್ದಾರೆ. ಇದು ಈ ರೋಗದಿಂದ ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೊದಲ ಸಾವಾಗಿದೆ. ಮೃತರು ಹಲವು ದಿನಗಳಿಂದ ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದು, ಸೋಲಾಪುರ ಜಿಲ್ಲೆಯ ತಮ್ಮ ಹಳ್ಳಿಗೆ ತೆರಳಿದ್ದರು. ನಿಶ್ಶಕ್ತಿ ಉಂಟಾದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಜಿಬಿಎಸ್‌ ಪತ್ತೆಯಾಗಿದೆ. ಕೂಡಲೇ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಕೆಲ ಕಾಲ ಅವರಿಗೆ ಕೈಕಾಲು ಆಡಿಸುವುದು ಅಸಾಧ್ಯವಾಗಿತ್ತು. 

ಆರ್ಥಿಕ ಸಂಕಷ್ಟ: ಮಂತ್ರಿಮಾಲ್‌ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಆರೋಗ್ಯ ಸ್ಥಿತಿ ಸ್ಥಿರವಾದ ಬಳಿಕ ಅವರನ್ನು ಮತ್ತೆ ಐಸಿಯುಗೆ ವರ್ಗಾಯಿಸಲಾಯಿತು. ಆದರೆ ಬಳಿಕ ಉಸಿರಾಟ ಸಮಸ್ಯೆಯಿಂದಾಗಿ ಅವರು ಸಾವನ್ನಪ್ಪಿದ್ದಾರೆ. ಈವರೆಗೆ ಪುಣೆಯಲ್ಲಿ ಜಿಬಿಎಸ್‌ನ 73 ಪ್ರಕರಣಗಳು ಪತ್ತೆಯಾಗಿದ್ದು, 14 ಜನರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ದೇಹದ ರೋಗನಿರೋಧಕ ಶಕ್ತಿಯು ನರಮಂಡಲದ ಮೇಲೆ ದಾಳಿ ಮಾಡಿದ ಪರಿಣಾಮವಾಗಿ ಮಾಂಸಖಂಡಗಳು ನಿಶ್ಶಕ್ತವಾಗಿ ಕೈಕಾಲು ಮರಗಟ್ಟುತ್ತವೆ. ಅತಿಸಾರ, ಹೊಟ್ಟೆನೋವು, ಜ್ವರ, ವಾಕರಿಕೆ ಅಥವಾ ವಾಂತಿ ಇದರ ಲಕ್ಷಣಗಳು. ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಜಿಬಿಎಸ್‌ ಉಂಟಾಗುತ್ತದೆ ಎನ್ನಲಾಗಿದೆ. ಇದನ್ನು 1ರಿಂದ 3 ವಾರಗಳಲ್ಲಿ ಪತ್ತೆ ಮಾಡಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್