ಮೊದಲ ಲಾಕ್‌ಡೌನ್ ವೇಳೆ ಜನಸಾಮಾನ್ಯರ ಮಾತನಾಡಿಸಿದ್ದ ಮಾಧ್ಯಮ
ಮಾಧ್ಯಮದ ಮುಂದೆ ಲಾಕ್‌ಡೌನ್ ಬಗ್ಗೆ ಬೈದ ವ್ಯಕ್ತಿ
ಈತನ ಬೈಗುಳನ್ನೇ ರೀಮಿಕ್ಸ್ ಆಗಿಸಿದ್ದ ಯೂಟ್ಯೂಬರ್
ಇದು ಸಾಮಾಜಿಕ ಜಾಲತಾಣದ ಯುಗ ಏನೇ ಮಾಡಿದರು ಇದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತೆ. ಅದೇ ರೀತಿ ಇಲ್ಲೊಬ್ಬ ಯೂಟ್ಯೂಬರ್ (YouTuber) ವ್ಯಕ್ತಿಯೊರ್ವನ ಬೈಗುಳವನ್ನೇ ಹಾಡಾಗಿಸಿದ್ದು, ಅದೀಗ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2020ರಲ್ಲಿ ಮೊದಲ ಬಾರಿಗೆ ಲಾಕ್‌ಡೌನ್ ಆದಾಗ ಬಿಹಾರದ(Bihar) ಪೂರ್ನಿಯಾ (Purnia) ಜಿಲ್ಲೆಯ ವ್ಯಕ್ತಿಯೊಬ್ಬರು ಲಾಕ್‌ಡೌನ್‌ನಿಂದಾಗಿ ಏನೆಲ್ಲಾ ತೊಂದರೆಗಳಾಗುತ್ತಿದೆ ಎಂಬುದನ್ನು ಹೇಳುತ್ತಾ ಬೈಯುತ್ತಿದ್ದರು. ವ್ಯಕ್ತಿಯ ಬೈಗುಳದ ವಿಡಿಯೋ ಆ ಸಮಯದಲ್ಲೇ ಸಾಕಷ್ಟು ವೈರಲ್ ಆಗಿತ್ತು. ಆದರೆ ಈಗ ಯೂಟ್ಯೂಬರ್ ಒಬ್ಬರು ಅದಕ್ಕೆ ಸಂಗೀತಾ ಹಾಗೂ ರಿಮಿಕ್ಸ್ ಮಾಡಿ ಯೂಟ್ಯೂಬ್‌ನಲ್ಲಿ ಹರಿ ಬಿಟ್ಟಿದ್ದು, ಅಪ್‌ಲೋಡ್ ಆದ ಕೆಲವೇ ದಿನಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 6.7 ಮಿಲಿಯನ್ ಜನ ಈಗಾಗಲೇ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಮೂಲ ವಿಡಿಯೋದಲ್ಲಿ ಬಿಹಾರದ ಪೂರ್ನಿಯಾ ಜಿಲ್ಲೆಯ ವ್ಯಕ್ತಿಯೊಬ್ಬರು ದೇಶದಲ್ಲಿ ಮೊದಲ ಬಾರಿ ಲಾಕ್‌ಡೌನ್ ಘೋಷಣೆಯಾದಾಗ ಈ ಬಗ್ಗೆ ಜನರ ಅಭಿಪ್ರಾಯವನ್ನು ಕೇಳುತ್ತಿದ್ದ ಸ್ಥಳೀಯ ಸುದ್ದಿಸಂಸ್ಥೆಯೊಂದು ವ್ಯಕ್ತಿಯ ಬಳಿಯೂ ಮೈಕ್ ಹಿಡಿದಿತ್ತು. ಈ ವೇಳೆ ಮಾತನಾಡಿದ ಈ ಜನ ಸಾಮಾನ್ಯ ಲಾಕ್‌ಡೌನ್‌ನಿಂದಾಗಿ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕಾಲೇಜುಗಳನ್ನು ಮುಚ್ಚಿರುವುದರಿಂದ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ. ಮಾಡಲು ಕೆಲಸವಿಲ್ಲದ ವಿದ್ಯಾರ್ಥಿಗಳು ಹೆಣ್ಣು ಮಕ್ಕಳ ಹಿಂದೆ ಬೀಳುತ್ತಿದ್ದಾರೆ ಎಂದು ದೂರಿದ್ದರು.
ಕಚ್ಚಾ ಬಾದಮ್ ಬಳಿಕ ಮತ್ತೊಂದು ಹಾಡಿನೊಂದಿಗೆ ಬಂದ ಬಡ್ಯಾಕರ್... ನೀವೂ ಕೇಳಿ
ಈ ವೇಳೆ ವರದಿಗಾರ ಇದಕ್ಕೇನು ಪರಿಹಾರ ಮಾಡಬಹುದು ಎಂದು ಕೇಳಿದಾಗ ಆತ ಮುಚ್ಚಿರುವ ಶಾಲೆಗಳನ್ನು ಬೇಗ ತೆರೆಯಬೇಕು. ಎಲ್ಲರಿಗೂ ಓದಲು ಬರೆಯಲು ಇರಬೇಕು. ಇಲ್ಲದಿದ್ದರೆ ಎಲ್ಲರೂ ಹೆಣ್ಣು ಮಕ್ಕಳ ಹಿಂದೆ ಬೀಳುತ್ತಾರೆ ಎಂದಿದ್ದರು. ಆತ ಹೇಳಿದ ಕೊನೆಯ 'ಸಬ್ ಸ್ಟುಡೆಂಟ್... ಖಲೀ ಛೋರಿ ಪಟತಾ ಹೈ' ಎಂಬ ಪದವನ್ನು ತೆಗೆದುಕೊಂಡು ಈ ರಿಮಿಕ್ಸ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ರಿಮಿಕ್ಸ್ ಬಳಿಕ ಮೂಲ ವಿಡಿಯೋ ಕೂಡ ಮತ್ತೆ ವೈರಲ್ ಆಗಿದೆ. ಈ ಖಾಲಿ ಚೋರಿ ಪಟಾಟಾ ಹೈ ಎಂಬ ಡೈಲಾಗ್‌ಗೆ ಮಯೂರ್ ಜುಮಾನಿ ಅವರು ಕೆಲವು ಹಾಸ್ಯದ ಬೀಟ್‌ಗಳನ್ನು ಸೇರಿಸಿ ಅದನ್ನು ಇನ್ನಷ್ಟು ಮನೋರಂಜಕವಾಗಿ ಮಾಡಿದ್ದಾರೆ.
ಇತ್ತೀಚೆಗೆ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹಾಡಿದ್ದ ಹಾಡು ಕಚ್ಚಾ ಬಾದಮ್ ಹೇಗೆ ಫೇಮಸ್ ಆಯ್ತು ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಇದರ ಗಾಯಕ ಭುವನ್ ಬಡ್ಯಾಕರ್ ಬೀದಿಯಲ್ಲಿ ಕಡಲೆಕಾಯಿ ಮಾಡುತ್ತಿದ್ದು, ತನ್ನ ಗ್ರಾಹಕರನ್ನು ಸೆಳೆಯಲು ಬಾದಮ್ ಬಾದಮ್ ಕಚ್ಚಾ ಬಾದಮ್ ಎಂದು ಹಾಡುತ್ತಿದ್ದ. ಈ ಹಾಡನೇ ಯಾರೋ ಗ್ರಾಹಕನೋರ್ವ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಇದಾದ ಬಳಿಕ ಆ ಹಾಡು ಎಷ್ಟು ಫೇಮಸ್ ಆಯ್ತು ಎಂದರೆ ಯಾವ ಸೋಶಿಯಲ್ ಸೈಟ್ ನೋಡಲ್ಲಿ ಅಲ್ಲೆಲ್ಲಾ ಕಚ್ಚಾ ಬಾದಮ್ ಹಾಡಿನದ್ದೇ ರಿಂಗಣ.
8 ವರ್ಷದ ಈ ಬಾಲಕನ ಆದಾಯ 185 ಕೋಟಿ ರೂ..!
ಆದರೆ ಇದರಿಂದ ಭುವನ್ ಬಡ್ಯಾಕರ್ ಅವರಿಗೆ ಯಾವುದೇ ಲಾಭವಾಗಿರಲಿಲ್ಲ. ಆದಾಗ್ಯೂ ಕೆಲದಿನಗಳ ಹಿಂದೆ ಗಾಯಕ ಭುವನ್ ಬಡ್ಯಾಕರ್ (Bhuban Badyakar) ಅವರನ್ನು ಸಂಗೀತಾ ಸಂಸ್ಥೆಯೊಂದು ಗುರುತಿಸಿ ಮೂರು ಲಕ್ಷ ನಗದು ಹಣವನ್ನು ನೀಡಿದೆ. ಕಚ್ಚಾ ಬಾದಾಮ್ ಹಾಡು ಬಳಸಿಕೊಂಡು ಸಂಗೀತಾ ಕಂಪನಿಗಳು ಅದಕ್ಕೆ ಹಲವು ರಿಮಿಕ್ಸ್ ಮಾಡಿ ಕೋಟ್ಯಾಂತರ ದುಡ್ಡು ಮಾಡಿದ್ದರು. ಆದರೆ ಮೂಲ ಗಾಯಕ ಭುವನ್ ಬಡ್ಯಾಕರ್ ಅವರಿಗೆ ಮಾತ್ರ ಇದರಿಂದ ನಯಾಪೈಸೆಯೂ ಸಿಕ್ಕಿರಲಿಲ್ಲ. ಅವರು ಕಡಲೆಕಾಯಿ ಮಾರುತ್ತಲೇ ಇರಬೇಕಾಯಿತು. ಆದರೆ ಈಗ ಗೋಧೂಳಿಬೆಲೆ ಎಂಬ ಸಂಗೀತಾ ಸಂಸ್ಥೆಯೊಂದು ಕಚ್ಚಾ ಬಾದಾಮ್‌ನ ಮೂಲ ಹಾಡುಗಾರನನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿದೆ.