ಬಿಹಾರಿ ಬಾಬು ಕೈಹಿಡಿದ ಜರ್ಮನ್‌ ಬಾಲೆ...

Suvarna News   | Asianet News
Published : Mar 08, 2022, 01:06 PM IST
ಬಿಹಾರಿ ಬಾಬು ಕೈಹಿಡಿದ ಜರ್ಮನ್‌ ಬಾಲೆ...

ಸಾರಾಂಶ

ಬಿಹಾರದ ಹುಡುಗನ ಮದುವೆಯಾದ ಜರ್ಮನ್‌ ಯುವತಿ ಸ್ವೀಡನ್‌ನಲ್ಲಿ ಸಂಶೋಧನ ವಿದ್ಯಾರ್ಥಿಗಳಾಗಿರುವ ವಧು-ವರ  2019ರಲ್ಲಿ ಮೊದಲ ಬಾರಿ ಪರಸ್ಪರ ಭೇಟಿಯಾಗಿದ್ದ ಜೋಡಿ

ಬಿಹಾರ(ಮಾ.8): ಮದುವೆಯೆಂಬುದು ಸ್ವರ್ಗದಲ್ಲಿ ನಿಶ್ಚಯವಾಗುವುದು ಭೂಮಿ ಮೇಲೆ ನಡೆಯುವುದು ಎಂಬ ಮಾತಿದೆ. ಅದರಂತೆ ಜರ್ಮನ್‌ ಯುವತಿಯೊಬ್ಬರು ಬಿಹಾರದ ಯುವಕನೊರ್ವನನ್ನು ಸಂಪೂರ್ಣ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಎಲ್ಲಿಯ ಜರ್ಮನ್‌, ಎಲ್ಲಿಯ ಬಿಹಾರ (Bihar) ಆದರೂ ಪ್ರೀತಿಯ ಬಂದವೊಂದು ಈ ಜೋಡಿಯನ್ನು ಒಂದು ಮಾಡಿದೆ. ಈ ಜೋಡಿಯ ಪ್ರೀತಿ ಗಡಿ, ದೇಶ, ಭಾಷೆ, ಜಾತಿ ಧರ್ಮಗಳನ್ನು ಮೀರಿ ಮದುವೆಯಲ್ಲಿ ಒಂದಾಗಿದೆ. ಲಾರಿಸಾ ಬೆಲ್ಚ್(Larrisa Belch) ಎಂಬ ಮಹಿಳೆ ಹುಟ್ಟಿ ಬೆಳೆದಿದೆಲ್ಲಾ ಜರ್ಮನ್‌ನಲ್ಲಿ(German) ಆದರೆ ಮದುವೆಯಾಗಿದ್ದು ಬಿಹಾರದ ನವಾಡ (Nawada) ನಿವಾಸಿಯಾಗಿರುವ ಸತ್ಯೇಂದ್ರ ಕುಮಾರ್ (Satyendra Kumar) ಎಂಬುವವರನ್ನು. 


ಪ್ರೀತಿಗೆ ಜಾತಿ ಭಾಷೆಯ ಹಂಗಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ಬಿಹಾರದ ಈ ಜೋಡಿಯೂ ಕೂಡ ಇದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಬಿಹಾರದ ಸತ್ಯೇಂದ್ರ ಕುಮಾರ್ ಹಾಗೂ ಜರ್ಮನ್‌ನ ಲಾರಿಸಾ ಬೆಲ್ಚ್ ಇಬ್ಬರು ಸ್ವೀಡನ್‌ನಲ್ಲಿ (Sweden) ಸಂಶೋಧನಾ ವಿದ್ಯಾರ್ಥಿಗಳಾಗಿದ್ದಾರೆ. ಸತ್ಯೇಂದ್ರ ಅವರು ಚರ್ಮ ಕ್ಯಾನ್ಸರ್‌ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದರೆ, ಲಾರಿಸಾ ಬೆಲ್ಚ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ (prostate cancer) ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. 

Rhiannon Harries : ಭಾರತೀಯ ಹುಡುಗನ ವಿವಾಹವಾದ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿ!
 

ಇಬ್ಬರು 2019ರಲ್ಲಿ ಮೊದಲ ಬಾರಿ ಒಬ್ಬರನೊಬ್ಬರು ಭೇಟಿ ಮಾಡಿದ್ದು, ನಂತರ ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡ ಮೇಲೆ ಮೂರು ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸಿದರು. ಇನ್ನು ತಮ್ಮ ಮದುವೆಯಲ್ಲಿ ಸಂಪೂರ್ಣ ಭಾರತೀಯ ನಾರಿಯಂತೆ ಶೃಂಗಾರಗೊಂಡಿದ್ದ ವಧು ಲಾರಿಸಾ ಬೆಲ್ಚ್ ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು. ನೀಲಿ ಹಾಗೂ ಕೆಂಪು ಮಿಶ್ರಿತ ಲೆಹೆಂಗಾ ಧರಿಸಿದ್ದ ಅವರು ಅದಕ್ಕೆ ತಕ್ಕನಾದ ಜ್ಯುವೆಲ್ಲರಿ ಧರಿಸಿದ್ದರು, ಇತ್ತ ವರ ಸತ್ಯೇಂದ್ರ ಕುಮಾರ್ ಬಂಗಾರ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸುತ್ತಿದ್ದರು.

ಇಬ್ಬರು ಭಾರತದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಅಲ್ಲದೇ ವಧು ಲಾರಿಸಾ ಬೆಲ್ಚ್ ಭಾರತೀಯ ಸಂಸ್ಕೃತಿ ಬಗ್ಗೆ  ತಿಳಿದುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದರು. ನಾನು ನನ್ನ ಬದುಕನ್ನು ಇಲ್ಲಿ ಖುಷಿಯಾಗಿ ಕಳೆಯಲು ಬಂದಿದ್ದೇನೆ. ಇಲ್ಲಿನ ಜನ ತುಂಬಾ ಒಳ್ಳೆಯವರು. ನಮ್ಮಿಬ್ಬರ ಸಂಪ್ರದಾಯ ಸಂಸ್ಕೃತಿಯಲ್ಲಿ ಬಹಳ ವ್ಯತ್ಯಾಸವಿದೆ. ನನಗೆ ಹಿಂದೆ ಹೆಚ್ಚೇನು ಬರುವುದಿಲ್ಲ. ಆದರೆ ಸತ್ಯೇಂದ್ರ ಅದನ್ನು ಭಾಷಾಂತರಿಸಲು ನನಗೆ ಸಹಾಯ ಮಾಡುತ್ತಾರೆ ಎಂದು  ಲಾರಿಸಾ ಬೆಲ್ಚ್ ಹೇಳಿದರು.

ಮದುವೆಯಾದ ಮರು ದಿನವೇ ಯುದ್ಧಕ್ಕೆ ಹೊರಟ ಉಕ್ರೇನ್‌ ದಂಪತಿ

ಇತ್ತೀಚೆಗೆ ಭಾರತೀಯ ಪುರುಷರಿಗೆ ಮನಸೋತು ಬರುತ್ತಿರುವ ವಿದೇಶಿ ಬೆಡಗಿಯರ ಸಂಖ್ಯೆ ಹೆಚ್ಚುತ್ತಿದೆ.ಕೆಲ ದಿನಗಳ ಹಿಂದೆ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭಾರತೀಯ ಯುವಕನನ್ನು ಮದುವೆಯಾಗಿದ್ದರು. ಇದಲ್ಲದೇ ಯುದ್ಧ ಪೀಡಿತ ಉಕ್ರೇನ್‌ ಮೂಲದ ಯುವತಿಯೊಬ್ಬರು ಆಂಧ್ರಪ್ರದೇಶದ ಯುವಕನೋರ್ವನ್ನು ಕೈ ಹಿಡಿದಿದ್ದರು. ತೆಲಂಗಾಣದ ಚಿಲ್ಕೂರು ಬಾಲಾಜಿ ದೇಗುಲದಲ್ಲಿ ಈ ವಿಶೇಷ ಮದುವೆ ನೆರವೇರಿತು. ಇವರ ಮದುವೆಯಲ್ಲಿ ಮದುವೆಯ ವಿಧಿವಿಧಾನಗಳನ್ನು ನಡೆಸಿಕೊಟ್ಟ ಅರ್ಚಕರು ಬೇಗನೆ ಉಕ್ರೇನ್‌  ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಶಮನಗೊಂಡು ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸಿದ್ದರು. 

ವಧು ವರರಾದ ಪ್ರತೀಕ್‌ (Prateek) ಹಾಗೂ ಲಿಬೊ (Lyubov), ಉಕ್ರೇನ್‌ನಲ್ಲಿ ಫೆಬ್ರವರಿ 23 ರಂದು ಒಮ್ಮೆ ಈಗಾಗಲೇ ಮದುವೆಯಾಗಿದ್ದು ನಂತರ ಭಾರತಕ್ಕೆ ಬಂದು ಇಲ್ಲಿ ಅರತಕ್ಷತೆ ಹಾಗೂ ಇಲ್ಲಿನ ಸಂಪ್ರದಾಯದಂತೆ ಮದುವೆ ಆಯೋಜಿಸಿದ್ದರು. ಇವರು ಹೈದರಾಬಾದ್‌ (Hyderabad) ತಲುಪಿದ ಮರುದಿನವೇ ಅಲ್ಲಿ ಯುದ್ಧ ಆರಂಭವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್