
ಅಲಹಾಬಾದ್(ಅ.31): ಮದುವೆಗಾಗಿ ಮತಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇತ್ತೀಚೆಗೆ ಹಿಂದೂ ವಿದ್ಯಾರ್ಥಿಯನ್ನು ಮದುವೆಗೆ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯಿಸಿ ಗುಂಡಿಕ್ಕಿ ಕೊಂದ ಪ್ರಕರಣದ ಬೆನ್ನಲ್ಲೇ ಅಲಹಾಬಾದ್ ಹೈಕೋರ್ಟ್ ನೀಡಿದ ಈ ಆದೇಶ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ.
ಲವ್ ಜಿಹಾದ್ ಮದುವೆಯಾದ್ರೆ ಇಲ್ಲ ಮಾನ್ಯತೆ! ಮದ್ರಸಾ, ಸಂಸ್ಕೃತ ಪಾಠಶಾಲೆಗಳು ಬಂದ್
ಅಂತಾರ್ಜಾತಿ ವಿವಾಹವಾದ ದಂಪತಿ ರಕ್ಷಣೆ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮಹತ್ವದ ಆದೇಶ ನೀಡಿದ್ದಾರೆ.
ನಿಖಿತಾ ಹತ್ಯೆ ಪ್ರಕರಣ: ಕುಟಂಬಕ್ಕೆ 1 ಕೋಟಿ ರೂ ಪರಿಹಾರಕ್ಕೆ ಒತ್ತಾಯಿಸಿದ VHP!
ದಂಪತಿ ತಮ್ಮ ಅರ್ಜಿಯಲ್ಲಿ ಮಹಿಳೆಯ ಹೆತ್ತವರು ತಮ್ಮ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಹಾಗೂ ಮಹಿಳೆಯ ಪೋಷಕರಿಗೆ ಕೋರ್ಟ್ ಸೂಚನೆ ನೀಡಬೇಕು ಎಂದು ಉಲ್ಲೇಖಿಸಿದ್ದರು.
ಲವ್ ಜಿಹಾದ್ ನಿಷೇಧಕ್ಕೆ ಸಿಎಂ ಯೋಗಿ ಸುಗ್ರೀವಾಜ್ಞೆ
ಅರ್ಜಿ ಸಲ್ಲಿಸಿದ ಮಹಿಳೆ ಮುಸ್ಲಿಂ ಆಗಿದ್ದು, ಹಿಂದೂ ಪುರುಷನೊಂದಿಗೆ ವಿವಾಹವಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಸೆಪ್ಟೆಂಬರ್ 23 ರಂದು ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರ ಏಕ ನ್ಯಾಯಾಧೀಶರ ಪೀಠವು ರಕ್ಷಣೆ ಕೋರಿ ಸಲ್ಲಿಸಿದ್ದ ದಂಪತಿಗಳ ರಿಟ್ ಅರ್ಜಿಯನ್ನು ವಜಾಗೊಳಿಸಿದ್ದರು.
ಮಹಿಳೆ ಮದುವೆಗೂ ಮೊದಲು 1 ತಿಂಗಳು 2 ದಿನ ಹಿಂದೆ ಮತಾಂತರಗೊಂಡಿದ್ದಾಳೆ. ಇದು ಮದುವೆ ಕಾರಣಕ್ಕಾಗಿ ನಡೆದ ಮತಾಂತರವಾಗಿದೆ. ಇದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಆದೇಶ ನೀಡಿದೆ. ಮಹಿಳೆ 29.6.2020 ರಂದು ಮತಾಂತರಗೊಂಡಿದ್ದು, 31.7.2020 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಹೀಗಾಗಿ ಇದು ಮದುವೆಗಾಗಿ ನಡೆದ ಮತಾಂತರವಾಗಿದೆ. ಹೀಗಾಗಿ ದಂಪತಿಗಳ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ