ಪುಲ್ವಾಮಾದಲ್ಲಿ ರಾಜಕೀಯ ಹುಡುಕಿದರು, ಮೌನವಾಗಿ ಸಹಿಸಿಕೊಂಡೆ: ಭಾವುಕರಾದ ಮೋದಿ

By Suvarna NewsFirst Published Oct 31, 2020, 3:29 PM IST
Highlights

ಪುಲ್ವಾಮಾ ದಾಳಿ ಕುರಿತು ಸತ್ಯ ಹೊರಬಿದ್ದಿದೆ. ಪಾಕಿಸ್ತಾನವೇ ದಾಳಿ ಮಾಡಿಸಿದೆ ಅನ್ನೋದನ್ನು ಪಾಕ್ ಸಂಸತ್ತಿನಲ್ಲಿ ಸಚಿವರೇ ಪುಲ್ವಾಮಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ.  ಪಾಕಿಸ್ತಾನ ಸತ್ಯ ಹೊರಹಾಕುತ್ತಿದ್ದಂತೆ, ಇತ್ತ ಪ್ರಧಾನಿ ಮೋದಿ ಹಲವು ವರ್ಷಗಳ ಟೀಕೆಗೆ ಉತ್ತರ ನೀಡಿದ್ದಾರೆ. ಪುಲ್ವಾಮಾ ದಾಳಿ ಕುರಿತು ಮೋದಿ ಹೇಳಿದ ಮಾತುಗಳು ಇಲ್ಲಿವೆ.

ಸಬರಮತಿ(ಅ.31): ಪುಲ್ವಾಮಾದಲ್ಲಿ CRPF ಜವಾನರ ಮೇಲೆ ನಡೆದ ದಾಳಿ ದೇಶ ಕಂಡ ಅತ್ಯಂತ ಘೋರ ಭಯೋತ್ಪಾದಕ ದಾಳಿ. 40 ಯೋಧರು ಈ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದಾಳಿ ಬಳಿಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ದಾಳಿ ಕುರಿತು ಹಲವು ಪ್ರಶ್ನೆ ಎತ್ತಿದ್ದರು. ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಜೆಪಿಯೇ ಈ ದಾಳಿ ನಡೆಸಲಾಗಿದೆ. ಈ ಮೂಲಕ ಮತ ಗಿಟ್ಟಿಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿತ್ತು. ಇದೀಗ ಪಾಕಿಸ್ತಾನವೇ ಪುಲ್ವಾಮಾ ದಾಳಿಯನ್ನು ಒಪ್ಪಿಕೊಂಡಿದೆ. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ರಾಜಕೀಯ ಹುಡುಕಿದವರಿಗೆ ಉತ್ತರ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪುಲ್ವಾಮಾ;  'ಆರೋಪ ಮಾಡಿದ್ದವರು ಮೋದಿ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ

ಗುಜರಾತ್ ಪ್ರವಾಸದಲ್ಲಿರುವ ಮೋದಿ, ದೇಶಕಂಡ ಸಮರ್ಥ ನಾಯಕ, ಗೃಹ ಸಚಿವ, ದಿವಗಂತ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 145ನೇ ಹುಟ್ಟು ಹಬ್ಬ ಪ್ರಯುಕ್ತ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಮೋದಿ, ಪುಲ್ವಾಮಾ ದಾಳಿಯಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದರು. ಆದರೆ ಕೆಲವರಿಗೆ ನೋವಾಗಲೇ ಇಲ್ಲ. ಬದಲಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಿದರು. ಎಲ್ಲಾ ಆರೋಪ, ಟೀಕೆಗಳಿಂದ ದೂರವಿದ್ದೆ, ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ. ಇದೀಗ ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿದೆ ಎಂದು ಮೋದಿ ಹೇಳಿದರು.

ಗುಜರಾತಿನಲ್ಲಿ ಪ್ರಧಾನಿ ಮೋದಿ ಉದ್ಘಾಟನಾ ಪರ್ವ

ನೆರೆ ಪಾಕಿಸ್ತಾನ ಸಂಸಸತ್ತಿನಲ್ಲಿ ಪುಲ್ವಾಮಾ ದಾಳಿ ಸತ್ಯವನ್ನು ಒಪ್ಪಿಕೊಂಡಿದೆ. ಆದರೆ ಇಲ್ಲಿನ ಕೆಲವರಿಗೆ ಇದೀಗ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಕಾರ್ಯಸಾಧನೆಗೆ ದೇಶವನ್ನೇ ಪಣಕ್ಕಿಡುವ ಮಂದಿ ಇದ್ದಾರೆ. ನಾನು ವಿರೋಧ ಪಕ್ಷದಲ್ಲಿ ವಿನಮ್ರವಾಗಿ ವಿನಂತಿಸುತ್ತೇನೆ, ಈ ರೀತಿಯ ಕೊಳಕು ರಾಜಕೀಯ ಮಾಡಬೇಡಿ ಎಂದು ಮೋದಿ ಹೇಳಿದ್ದಾರೆ.

ತಮ್ಮ ಗುರಿ ಸಾಧನೆಗೆ ದೇಶ ವಿರೋಧಿಗಳ ಜೊತೆ ಕೈಜೋಡಿಸುವ ಮಟ್ಟಕ್ಕೂ ಇಳಿಯುತ್ತಿರುವುದು ದುರಂತ. ಭಯೋತ್ವಾದನೆ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಮೋದಿ ಪುಲ್ವಾಮಾ ದಾಳಿಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್‌ಗೆ ತಕ್ಕ ತಿರುಗೇಟು ನೀಡಿದ್ದಾರೆ

click me!