ಮತಾಂತರಕ್ಕೆ ರಾಜಕೀಯ ಬಣ್ಣ ಬೇಡ: ಇದರ ತಡೆಗೆ ಕೇಂದ್ರ ವಕೀಲರ ಸಲಹೆ ಬಯಸಿದ ಸುಪ್ರೀಂ ಕೋರ್ಟ್‌

Published : Jan 10, 2023, 09:34 AM ISTUpdated : Jan 10, 2023, 09:35 AM IST
ಮತಾಂತರಕ್ಕೆ ರಾಜಕೀಯ ಬಣ್ಣ ಬೇಡ: ಇದರ ತಡೆಗೆ ಕೇಂದ್ರ ವಕೀಲರ ಸಲಹೆ ಬಯಸಿದ ಸುಪ್ರೀಂ ಕೋರ್ಟ್‌

ಸಾರಾಂಶ

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಮತಾಂತರದ ಹಕ್ಕಿನ ನಡುವೆ ವ್ಯತ್ಯಾಸವಿದೆ. ಈ ವಿಚಾರಣೆಯಲ್ಲಿ ನಮಗೆ ನಿಮ್ಮ ಸಹಾಯವೂ (ಎಜಿ ವೆಂಕಟರಮಣಿ) ಬೇಕು. ಮತಾಂತರ ಆಮಿಷದಿಂದ ಏನಾದರೂ ಸಂಭವಿಸುತ್ತಿದ್ದರೆ ಏನು ಮಾಡಬೇಕು? ಹೇಗೆ ಸರಿಪಡಿಸಬಹುದು?’ ಎಂದು ಪೀಠ ಕೇಳಿದೆ.

ನವದೆಹಲಿ: ‘ಧಾರ್ಮಿಕ ಮತಾಂತರವು ಗಂಭೀರ ವಿಷಯವಾಗಿದ್ದು, ರಾಜಕೀಯ ಬಣ್ಣ ಬಳಿಯಬಾರದು’ ಎಂದು ಸುಪ್ರೀಂ ಕೋರ್ಟ್ ಆಭಿಪ್ರಾಯಪಟ್ಟಿದೆ. ಇದೇ ವೇಳೆ, ಬಲವಂಂತದ ಮತಾಂತರಕ್ಕೆ ನಿರ್ಬಂಧ ಹೇರಲು ಆದೇಶ ಹೊರಡಿಸಬೇಕು ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರಿಗೆ ಅಮಿಕಸ್‌ ಕ್ಯೂರಿ (ಕೋರ್ಟ್ ಸಲಹೆಗಾರ) ಆಗಿ ಕಾರ‍್ಯನಿರ್ವಹಿಸಲು ಪೀಠ ಸೂಚಿಸಿದ್ದು, ಅವರಿಂದ ಸಲಹೆಗಳನ್ನು ಬಯಸಿದೆ.

‘ಮೇಲ್ನೋಟಕ್ಕೆ ಧಾರ್ಮಿಕ ಮತಾಂತರಗಳು (Religious Conversion) ನಿಜವಾಗಿ ನಡೆಯುತ್ತಿವೆ ಎಂದು ಕಂಡುಬರುತ್ತದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (Right to Religious Freedom) ಮತ್ತು ಮತಾಂತರದ ಹಕ್ಕಿನ (Right to Conversion) ನಡುವೆ ವ್ಯತ್ಯಾಸವಿದೆ (Difference). ಈ ವಿಚಾರಣೆಯಲ್ಲಿ ನಮಗೆ ನಿಮ್ಮ ಸಹಾಯವೂ (ಎಜಿ ವೆಂಕಟರಮಣಿ) (AG Venkataramani) ಬೇಕು. ಮತಾಂತರ ಆಮಿಷದಿಂದ ಏನಾದರೂ ಸಂಭವಿಸುತ್ತಿದ್ದರೆ ಏನು ಮಾಡಬೇಕು? ಹೇಗೆ ಸರಿಪಡಿಸಬಹುದು?’ ಎಂದು ಪೀಠ (Bench) ಕೇಳಿದೆ.

ಇದನ್ನು ಓದಿ: ಉತ್ತರ ಪ್ರದೇಶದಲ್ಲಿ ಹಿಂದೂ ಧರ್ಮಕ್ಕೆ ಘರ್‌ ವಾಪಸಿಯಾದ 100 ಕ್ಕೂ ಹೆಚ್ಚು ಜನ..!

ಈ ವೇಳೆ ತಮಿಳುನಾಡು ಸರ್ಕಾರದ ವಕೀಲ ವಿಲ್ಸನ್‌ ವಾದಿಸಿ, ‘ಮತಾಂತರದ ವಿರುದ್ಧದ ಅರ್ಜಿದಾರರು ರಾಜಕೀಯ ಉದ್ದೇಶ ಹೊಂದಿದ್ದಾರೆ. ದೇಶದ್ರೋಹ ಕೇಸು ಅವರ ಮೇಲಿದೆ. ಮತಾಂತರ ತಡೆ ವಿಚಾರವನ್ನು ಶಾಸಕಾಂಗಕ್ಕೆ ಬಿಡಿ’ ಎಂದು ಕೋರಿದರು. ಇದಕ್ಕೆ ಕಿಡಿಕಾರಿದ ಕೋರ್ಟ್‌, ‘ನಾವು ಒಂದು ರಾಜ್ಯವಲ್ಲ. ಇಡೀ ದೇಶದ ಬಗ್ಗೆ ಚಿಂತಿತರಾಗಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ’ ಎಂದು ತಾಕೀತು ಮಾಡಿತು. ವಕೀಲರು ನ್ಯಾಯಾಲಯದಲ್ಲಿ ರಾಜಕೀಯವನ್ನು ಪರಿಚಯಿಸಲು ಬಯಸಿದರೆ, ಅದು ಸೂಕ್ತ ವೇದಿಕೆಯಲ್ಲ ಎಂದು ಪೀಠವು ಅವರಿಗೆ ದೃಢವಾಗಿ ಹೇಳಿದೆ. ಇದು ರಾಷ್ಟ್ರೀಯ ಮಹತ್ವದ ವಿಚಾರ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

“ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸಬೇಡಿ. ಇದು ಬಹಳ ಗಂಭೀರವಾದ ವಿಚಾರ. ರಾಜಕೀಯವನ್ನು ರಾಜಕೀಯ ಪಕ್ಷಗಳಿಗೆ ಬಿಡಬೇಕು. ಇಲ್ಲಿ ನಾವು ಶುದ್ಧ ಕಾನೂನು ಸಮಸ್ಯೆಗೆ ಸಂಬಂಧಿಸಿದ್ದೇವೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಪ್ರತಿಯೊಬ್ಬ ವಕೀಲರನ್ನು ವಿನಂತಿಸುತ್ತೇವೆ’’ ಎಂದೂ ಸುಪ್ರೀಂಕೋರ್ಟ್‌ ಪೀಠವು ಹೇಳಿದೆ.

ಇದನ್ನೂ ಓದಿ: ಮಹಿಳೆ, ಮಕ್ಕಳೇ ವಿದೇಶಿ ದೇಣಿಗೆ ಪಡೆದ ಸಂಸ್ಥೆಗಳ ಮತಾಂತರ ಟಾರ್ಗೆಟ್‌: ಸುಪ್ರೀಂಕೋರ್ಟ್‌ಗೆ ಹೇಳಿಕೆ

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇತರರನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪರಿವರ್ತಿಸುವ ಹಕ್ಕನ್ನು ನೀಡುವುದಿಲ್ಲ ಎಂದು ವಾದಿಸುವಾಗ ಬಲ, ಆಮಿಷ ಮತ್ತು ವಂಚನೆಯ ಮೂಲಕ ಮತಾಂತರದ ಬೆದರಿಕೆಯನ್ನು ತಡೆಯುವ ಕ್ರಮಗಳನ್ನು ಪರಿಗಣಿಸುವುದಾಗಿ ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದೆ.
ಸಂವಿಧಾನದ 25 ನೇ ವಿಧಿಯಲ್ಲಿನ 'ಪ್ರಾಪಗೇಟ್‌’ ಅಥವಾ ‘ಹರಡು' ಎಂಬ ಪದವನ್ನು ಸಂವಿಧಾನ ಸಭೆಯಲ್ಲಿ ಬಹಳ ವಿವರವಾಗಿ ಚರ್ಚಿಸಲಾಗಿದೆ ಮತ್ತು ಈ ಪದವನ್ನು ಸೇರಿಸುವ ಮೊದಲು ಆರ್ಟಿಕಲ್ 25 ರ ಅಡಿಯಲ್ಲಿನ ಮೂಲಭೂತ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದೂ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿದೆ.

ಅಲ್ಲದೆ, ಒಡಿಶಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರ್ಯಾಣ ಎಂಬ ದೇಶದ 9 ರಾಜ್ಯಗಳು ಈಗಾಗಲೇ ಮತಾಂತರವನ್ನು ಬಲವಂತವಾಗಿ ಅಥವಾ ಆಮಿಷದ ಮೂಲಕ ತಡೆಯಲು ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ ಎಂದೂ ಕೇಂದ್ರ ಸರ್ಕಾರ ತನ್ನ 8 ಪುಟಗಳ ಅಫಿಡವಿಟ್‌ನಲ್ಲಿ ಹೇಳಿದೆ.

ಇದನ್ನೂ ಓದಿ: ಮತಾಂತರಗೊಂಡರೆ ಜಾತಿ ಆಧಾರಿತ ಮೀಸಲಾತಿ, ಸೌಲಭ್ಯ ಕಟ್, ಹೈಕೋರ್ಟ್ ಮಹತ್ವದ ಆದೇಶ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು