ಪ್ರಸ್ತುತ ಕೇರಳದಲ್ಲಿರುವ ಭಾರತ್ ಜೋಡೋ ಯಾತ್ರೆಗೆ ಕೇಳಿದಷ್ಟು ಹಣವನ್ನು ನೀಡದ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ಅಂಗಡಿಗೆ ನುಗ್ಗಿ, ಇಡೀ ಅಂಗಡಿಯನ್ನು ಧ್ವಂಸ ಮಾಡಿದ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
ಕೊಲ್ಲಂ (ಸೆ. 16): ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ಗೆ ನಿಧಿ ಸಂಗ್ರಹ ಅಭಿಯಾನಕ್ಕೆ ಕೊಡುಗೆ ನೀಡಲು ನಿರಾಕರಿಸಿದ ತರಕಾರಿ ಅಂಗಡಿಯ ಮಾಲೀಕನ ಅಂಗಡಿಯನ್ನು ಕೈ ಕಾರ್ಯಕರ್ತರು ಧ್ವಂಸ ಮಾಡಿ ಆತನಿಗೆ ಥಳಿಸಿದ ಘಟನೆ ನಡೆದಿದೆ. ಈ ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಕ್ಷದ ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದು, ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಂಗಡಿಯಲ್ಲಿದ್ದ ತರಕಾರಿಗಳನ್ನು ಎಸೆದು ಅವಾಂತರ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ 2 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಆದರೆ, ತರಕಾರಿ ಅಂಗಡಿಯ ಮಾಲೀಕ ಕೇವಲ 500 ರೂಪಾಯಿ ನೀಡಿದ್ದ. ಇದರಿಂದಾಗಿ ಕಾರ್ಯಕರ್ತರು ಕೋಪಗೊಂಡಿದ್ದರು. ಕೇಳಿದಷ್ಟು ಹಣ ನೀಡದೇ ಇದ್ದಲ್ಲಿ ಇಲ್ಲಿಂದ ಯಾರೂ ಜೀವಂತವಾಗಿ ಹೋಗುವುದಿಲ್ಲ ಎಂದೂ ಅವರು ಬೆದರಿಕೆ ಹಾಕಿದ್ದಾರೆ. ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಂಗಡಿಯ ಮಾಲೀಕನನ್ನು ಥಳಿಸಿದ್ದಲ್ಲದೆ, ತರಕಾರಿಗಳನ್ನು ಎಸೆದು ಧಿಮಾಕು ತೋರಿದ್ದಾರೆ.
'ಕಾಂಗ್ರೆಸ್ ಕಾರ್ಯಕರ್ತರ ಗುಂಪು ನಮ್ಮ ಅಂಗಡಿಯ ಬಳಿ ಬಂದು, ಭಾರತ್ ಜೋಡೀ ಯಾತ್ರೆಯ ನಿಧಿಗೆ ಹಣ ನೀಡುವಂತೆ ಕೇಳಿತ್ತು. ನಾನು ಅವರಿಗೆ 500 ರೂಪಾಯಿಯನ್ನು ನೀಡಿದೆ. ಆದರೆ, ಅವರು 2 ಸಾವಿರ ರೂಪಾಯಿ ಕೊಡುವಂತೆ ಹೇಳಿದರು. ಅಂಗಡಿಯಲ್ಲಿದ್ದ ತೂಕದ ಯಂತ್ರ, ಹಾಗೂ ತರಕಾರಿಗಳನ್ನು ಎಸೆದು ಹೋಗಿದ್ದಾರೆ' ಎಂದು ಅಂಗಡಿಯ ಮಾಲೀಕ ಎಸ್ ಫವಾಜ್ ಹೇಳಿದ್ದಾರೆ.
A group of Congress workers reached the shop and asked for donations for 'Bharat Jodo Yatra'. I gave Rs 500 but they demanded Rs 2000. They damaged weighing machines, and threw away vegetables: S Fawaz, shop owner pic.twitter.com/Rmstle68DG
— ANI (@ANI)
Chamarajanagar: ಭಾರತ್ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಅನೀಶ್ ಖಾನ್ (Youth Congress state general secretary H Aneesh Khan) ಸೇರಿದಂತೆ ಐವರ ಸದಸ್ಯರ ತಂಡ ಈ ಘಟನೆಯಲ್ಲಿ ಭಾಗಿಯಾಗಿತ್ತು. ಪ್ರಕರಣದ ಕುರಿತು ಅಂಗಡಿ ಮಾಲೀಕ ಎಸ್ ಫವಾಜ್ (S Fawaz), ಕುನ್ನಿಕೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರ ದಿನದ ವಿರಾಮದ ನಂತರ, ಶುಕ್ರವಾರ ಬೆಳಗ್ಗೆ ಕೊಲ್ಲಂನಿಂದ ಪಕ್ಷವು 'ಭಾರತ್ ಜೋಡೋ ಯಾತ್ರೆ'ಯನ್ನು ಪುನರಾರಂಭಿಸಿತು. ಯಾತ್ರೆಯು ಪ್ರಸ್ತುತ ಕೇರಳದ ಹಂತದಲ್ಲಿದ್ದು ಮುಂದಿನ 17 ದಿನಗಳ ಕಾಲ ಕೇರಳದ ಮೂಲಕ ಸಂಚರಿಸಲಿದೆ.
Bharat Jodo Yatra Strict rules: 4 ಗಂಟೆಗೆ ಏಳ್ಬೇಕು, 5ನೇ ನಿಮಿಷದಲ್ಲಿ ಸ್ನಾನ ಆಗ್ಬೇಕು!
ಯಾತ್ರೆಯು ಈಗ ಅಲಪ್ಪುಳಕ್ಕೆ (Alappuzha ) ಪ್ರಯಾಣಿಸಲಿದೆ ಮತ್ತು ಇನ್ನೂ ಎರಡು ವಾರಗಳ ಕಾಲ ಕೇರಳದಲ್ಲಿ (Kerala) ಉಳಿಯುತ್ತದೆ, 19 ದಿನಗಳಲ್ಲಿ 43 ಅಸೆಂಬ್ಲಿ (Assembly ) ಮತ್ತು 12 ಲೋಕಸಭಾ ಕ್ಷೇತ್ರಗಳಲ್ಲಿ (Lok Sabha constituencies) 453 ಕಿ.ಮೀ ದೂರ ಪ್ರಯಾಣ ನಡೆಸಲಿದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ (Tamil Nadu) ಕನ್ಯಾಕುಮಾರಿಯಲ್ಲಿ (Kanya Kumari) ಆರಂಭವಾದ ಯಾತ್ರೆಗೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Senior Congress leader Rahul Gandhi ) ನೇತೃತ್ವ ವಹಿಸಿದ್ದಾರೆ. ಇದು 12 ರಾಜ್ಯಗಳ ಮೂಲಕ 3,750 ಕಿಲೋಮೀಟರ್‌ಗಳನ್ನು ಕ್ರಮಿಸುತ್ತದೆ. 150 ದಿನಗಳ ನಡೆಯಲಿರುವ ಈ ಯಾತ್ರೆ ಕಾಶ್ಮೀರದಲ್ಲಿ ಕೊನೆಯಾಗಲಿದೆ. ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೇಇಡೀ ಭಾರತೀಯರನ್ನು ಒಂದುಗೂಡಿಸುವ ಗುರಿಯನ್ನು ತಮ್ಮ ಭಾರತ್ ಜೋಡೀ ಯಾತ್ರೆ ಹೊಂದಿದೆ ಎಂದು ರಾಹುಲ್ ಗಾಂಧಿ ಯಾತ್ರೆಯ ಉದ್ದೇಶದ ಬಗ್ಗೆ ಹೇಳಿದ್ದರು. ಇದು ಒಂದೇ ದೇಶ ಹಾಗೂ ನಾವು ಒಗ್ಗಟ್ಟಾಗಿ ನಿಂತರೆ ಮಾತ್ರವೇ ಯಶಸ್ಸು ಸಾಧ್ಯ ಎನ್ನುವ ಗುರಿಯನ್ನು ಎಲ್ಲರಿಗೂ ನೆನಪಿಸುತ್ತದೆ ಎಂದು ಹೇಳಿದ್ದರು.