
ನವದೆಹಲಿ (ಜ.2): ದೇಶದ ಮೊಟ್ಟಮೊದಲ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ (Chief of Defence Staff, General Bipin Rawat) ಸೇರಿದಂತೆ 14 ಮಂದಿಯ ಸಾವಿಗೆ ಕಾರಣವಾಗಿದ್ದ ತಮಿಳುನಾಡಿನ (Tamil Nadu)ಕೂನೂರಿನಲ್ಲಿ (Coonoor) ಡಿಸೆಂಬರ್ ಆರಂಭದಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ (Army Chopper Crash) ತನಿಖಾ ವರದಿ ಮುಂದಿನ ಐದು ದಿನಗಳಲ್ಲಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಉದ್ದೇಶಪೂರ್ವಕವಲ್ಲದ ದೋಷವು ಬಹುತೇಕ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಂಪೂರ್ಣಗೊಂಡಿರುವ ತನಿಖಾ ವರದಿಯನ್ನು ಜನವರಿ ಮೊದಲ ವಾರದಲ್ಲಿ ವಾಯುಸೇನೆಯ ಮುಖ್ಯಸ್ಥ ವಿಆರ್ ಚೌಧರಿಗೆ (Air Chief Marshal V R Chaudhari) ಸಲ್ಲಿಕೆ ಮಾಡಲಾಗುತ್ತದೆ.
ವಾಯುಪಡೆಯಾಗಲಿ, ಕೇಂದ್ರ ಸರ್ಕಾರವಾಗಲಿ ತನಿಖೆಯ ಪ್ರಗತಿ ಹಾಗೂ ವರದಿ ಸಲ್ಲಿಕೆಯ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಮೂಲಗಳು ಹೇಳಿರುವ ಪ್ರಕಾರ ಕೆಟ್ಟ ಹವಾಮಾನದಿಂದಾಗ ಉಂಟಾದ ಕಡಿಮೆ ಗೋಚರತೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಈ ಅಪಘಾತದಲ್ಲಿ ಪೈಲಟ್ ದೋಷವಾಗಲಿ, ತಾಂತ್ರಿಕ ದೋಷವಾಗಲಿ ಯಾವೂದೂ ಇಲ್ಲ. ಪೈಲಟ್ ಯಾವುದೇ ಉದ್ದೇಶವಿಲ್ಲದೆ ಮೇಲ್ಮೈಗೆ ಹೆಲಿಕಾಪ್ಟರ್ ಅನ್ನು ತಾಗಿಸಿದಾಗ ಆಗುವ ಕಂಟ್ರೋಲ್ಡ್ ಫ್ಲೈಟ್ ಇನ್ ಟು ಟೆರೆನ್ (ಸಿಐಎಫ್ ಟಿ) ಸಂಭವಿಸಿದೆ ಎಂದು ತಿಳಿಸಿದೆ.
ಸಿಐಎಫ್ ಟಿ (CIFT) ಎಂದರೆ ಹೆಲಿಕಾಪ್ಟರ್ ಹಾರಾಟಕ್ಕೆ ಯೋಗ್ಯವಾಗಿತ್ತು ಮತ್ತು ಪೈಲಟ್ ಅವರ ಯಾವುದೇ ತಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ, ಅಪಘಾತ ಸಂಭವಿಸಿದ ಕೂನೂರು ಪ್ರದೇಶದಲ್ಲಿ ಕೆಟ್ಟ ಹವಾಮಾನದಿಂದಾಗಿ ಗೋಚರತೆ ಕಡಿಮೆಯಾಗಿದೆ, ಇದು ಒಂದು ಕಾರಣವಾಗಿರಬಹುದು ಎಂದು ಅವರು ಹೇಳಿದರು. ಜಾಗತಿಕವಾಗಿ ವಿಮಾನ ಅಪಘಾತಗಳಿಗೆ ಸಿಐಎಫ್ ಟಿ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಒಟ್ಟಾರೆ ತನಿಖಾ ವರದಿಯು ಅಪಘಾತದ ವಿವರಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲುವುದಂತೂ ನಿಶ್ಚಿತ ಎಂದು ವಾಯುಪಡೆಯ ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
CDS Gen Bipin Rawat Chopper Crash: ಮುಂದಿನ ವಾರ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆ
ಮೂವರು ಸೇನಾಪಡೆಗಳ ನೇತೃತ್ವದ ಕೋರ್ಟ್ ಆಫ್ ಇನ್ವ್ ಕೈರಿ (ಸಿಒಐ) ನೇತೃತ್ವವನ್ನು ದೇಶದ ಶಸಸ್ತ್ರ ಪಡೆಗಳ ಅಗ್ರ ಹೆಲಿಕಾಪ್ಟರ್ ಪೈಲಟ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ (Air Marshal Manvendra Singh)ವಹಿಸಿಕೊಂಡಿದ್ದರು. ಸಿಒಐ (Court Of Inquiry) ವಿಚಾರಣೆಯನ್ನು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಸೂಚಿಸಿದ್ದರು. ತನಿಖಾ ವರದಿ ಸಲ್ಲಿಸುವ ಮೊದಲು, ತನಿಖೆಯಲ್ಲಿ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಂಶೋಧನೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅಪಘಾತದ ನಂತರ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಅನ್ನು ಮರುಪಡೆಯಲಾಗಿದೆ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (ಎಫ್‌ಡಿಆರ್) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಮೂಲಕ ತನಿಖೆಯನ್ನೂ ನಡೆಸಲಾಗಿದೆ.
Vijay Parv: ಹುತಾತ್ಮ ಬಿಪಿನ್ ರಾವತ್ ಕೊನೇ ವಿಡಿಯೋ ವೈರಲ್, ಯೋಧರಿಗೆ ಕೊಟ್ಟಿದ್ರು ಸಂದೇಶ!
ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಒಳಗೊಂಡಂತೆ 12 ಸೇನಾ ಸಿಬ್ಬಂದಿಗಳಿದ್ದ ಸೇನಾ ಹೆಲಿಕಾಪ್ಟರ್ ವೆಲ್ಲಿಂಗ್ಟನ್ ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಹೋಗುವ ಮಾರ್ಗಮಧ್ಯದಲ್ಲಿ ಪತನಗೊಂಡಿತ್ತು. 13 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Varun Singh) ಜೀವನ್ಮರಣದ ಹೋರಾಟದ ಬಳಿಕ ಕೆಲ ದಿನಗಳಲ್ಲೇ ಸಾವನ್ನಪ್ಪಿದ್ದರು. ಡಿಸೆಂಬರ್ 9 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ಬೆಳಿಗ್ಗೆ 11.48 ಕ್ಕೆ ಟೇಕಾಫ್ ಆಗಿದ್ದು, ಮಧ್ಯಾಹ್ನ 12.15 ರ ವೇಳೆಗೆ ವೆಲ್ಲಿಂಗ್ಟನ್‌ಗೆ ಇಳಿಯುವ ನಿರೀಕ್ಷೆಯಲ್ಲಿತ್ತು ಎಂದು ಸಂಸತ್ತಿಗೆ ಮಾಹಿತಿ ನೀಡಿದ್ದರು. ಸೂಲೂರು ವಾಯುನೆಲೆಯಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್ 12.08 ರ ಸುಮಾರಿಗೆ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ