
ಭೋಪಾಲ್(ಜ.02): ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಗಳಲ್ಲಿ, ಐದು ಬೀದಿ ನಾಯಿಗಳು ನಾಲ್ಕು ವರ್ಷದ ಬಾಲಕಿಯನ್ನು ಬೆನ್ನಟ್ಟಿವೆ. ಬಳಿಕ ನೋಡ ನೋಡುತ್ತಿದ್ದಂತೆಯೇ ಬಾಲಕಿಯನ್ನು ಸುತ್ತುವರೆದ ನಾಯಿಗಳು ಆಕೆಯ ಕೈಯನ್ನು ಕಚ್ಚಿ ಕೆಳಗಗೆ ಬೀಳಿಸಿವೆ. ನಂತರ ಎಲ್ಲಾ ನಾಯಿಗಳು ಮಗುವನ್ನು ಕಚ್ಚಿ ಎಳೆದಾಡಿವೆ.
ಈ ಘಟನೆ ಭೋಪಾಲ್‌ನ ಬಾಗ್ ಸೆವಾನಿಯಾ ಪ್ರದೇಶದಲ್ಲಿ ನಡೆದಿದೆ.ಹೀಗಿರುವಾಗಲೇ ಅದೇ ರಸ್ತೆಯಲ್ಲಿ ನಡೆದುಕೊಮಡು ಬರುತ್ತಿದ್ದ ಯುವಕನೊಬ್ಬ ಈ ದೃಶ್ಯವನ್ನು ಕಂಡು ಕೂಡಲೇ ಕಲ್ಲೆಸೆದು ನಾಯಿಗಳನ್ನು ಓಡಿಸಿದ್ದಾನೆ. ಆದರೆ ನಾಯಿಗಳು ನಡೆಸಿದ್ದ ದಾಳಿಯಿಂದ ಬಾಲಕಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಕಂದನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೂಲಿ ಕಾರ್ಮಿಕನ ಮಗಳು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಯಿಗಳ ಗುಂಪು ದಾಳಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಾಳಿ ಮಾಡಲು ಬಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾಯಿಗಳು ಆಕೆಯನ್ನು ಸುತ್ತುವರಿದು ಕಚ್ಚಿವೆ. ಭೋಪಾಲ್‌ನ ಬಾಗ್ ಸೆವಾನಿಯಾ ಪ್ರದೇಶದಿಂದ ಹೊರಬಂದ ವೀಡಿಯೊದಲ್ಲಿ, ನಾಯಿಗಳು ದಾಳಿ ನಡೆಸಿದ ಭೀಕರ ದೃಶ್ಯಗಳು ದಾಖಲಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ