Delhi Bomb Blast​: ಮಹಿಳಾ ವೈದ್ಯರಿಂದ 'ಆಪರೇಷಮ್​ ಹಮ್​ದರ್ದ್​'! ಬೆಚ್ಚಿಬೀಳೋ ಸ್ಟೋರಿ ಇದು

Published : Nov 17, 2025, 01:09 PM IST
Bomb Blast - Operation Hamdard

ಸಾರಾಂಶ

ದೆಹಲಿ ಕೆಂಪು ಕೋಟೆ ಕಾರು ಸ್ಫೋಟದ ತನಿಖೆಯು 'ಆಪರೇಷನ್ ಹಮ್​ದರ್ದ್' ಎಂಬ ಭಯಾನಕ ಜಾಲವನ್ನು ಬಯಲುಮಾಡಿದೆ. ಈ ಜಾಲದಲ್ಲಿ ವೈದ್ಯರ ರೂಪದಲ್ಲಿರುವ ಮಹಿಳಾ ಉಗ್ರರು ದಾಳಿಗೆ ತರಬೇತಿ ಪಡೆಯುತ್ತಿದ್ದು, ಹಲವರನ್ನು ಬಂಧಿಸಲಾಗಿದೆ. ಈ ಸಂಚು ಅಲ್ ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿದೆ.

ದೆಹಲಿ ಕೆಂಪು ಕೋಟೆ ಕಾರು ಸ್ಫೋಟದ ತನಿಖೆಯು ಭಯೋತ್ಪಾದಕ ಸಂಪರ್ಕಗಳು, ಆರ್ಥಿಕ ಹಾದಿಗಳು ಮತ್ತು ವಿಶ್ವವಿದ್ಯಾಲಯದ ಸಂಪರ್ಕಗಳ ಸಂಕೀರ್ಣ ಜಾಲವನ್ನು ಒಂದೊಂದಾಗಿ ತೆರೆದಿಡುತ್ತಿದೆ. ದೆಹಲಿ, ಫರಿದಾಬಾದ್, ನುಹ್, ಲಖನೌ ಮತ್ತು ವಿದೇಶಗಳಲ್ಲಿ ಪತ್ತೆಯಾದ ಸಂಪರ್ಕಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ರಾಷ್ಟ್ರೀಯ ಭದ್ರತಾ ತನಿಖೆಯಾಗಿ ಇದು ಮಾರ್ಪಟ್ಟಿದೆ. ಸ್ಫೋಟಕ್ಕೆ ಒಂದು ವಾರದ ಮೊದಲು ವೈದ್ಯರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳುವುದು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಬಯಲಾಗಿದೆ.

ಡಾ. ಉಮರ್ ಅಲ್ ಫಲಾಹ್ ವಿಶ್ವವಿದ್ಯಾಲಯದ ಬಳಿಯ ತನ್ನ ಮನೆಯಲ್ಲಿ ಸ್ಫೋಟಕ ಪ್ರಯೋಗಾಲಯವನ್ನು ರಚಿಸಿದ್ದಾನೆ ಎಂದು ಏಜೆನ್ಸಿಗಳು ಕಂಡುಕೊಂಡಿವೆ. ಟೆಲಿಗ್ರಾಮ್ ಬಳಸಿ, ಆತ ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳಿಂದ ಬಾಂಬ್ ತಯಾರಿಸುವ ಕೈಪಿಡಿಗಳು ಮತ್ತು ವೀಡಿಯೊಗಳನ್ನು ಪಡೆಯುತ್ತಿದ್ದ. ಹೆಚ್ಚಾಗಿ ಒಬ್ಬಂಟಿಯಾಗಿ ಈ ಕೆಲಸ ಮಾಡುತ್ತಿದ್ದನು, ಸಾಧನಗಳನ್ನು ಪರೀಕ್ಷಿಸುತ್ತಿದ್ದನು ಮತ್ತು ಸ್ಫೋಟಕಗಳನ್ನು ಜೋಡಿಸುತ್ತಿದ್ದ ಎನ್ನುವುದೂ ತಿಳಿದಿದೆ.

ಆಪರೇಷನ್​ ಹಮ್​ದರ್ದ್​

ಅದೇ ಇನ್ನೊಂದೆಡೆ, ಇನ್ನೊಂದು ಬೆಚ್ಚಿಬೀಳೋ ಘಟನೆ ತನಿಖೆಯಿಂದ ಬಯಲಾಗಿದೆ. ಅದು ಆಪರೇಷನ್​ ಹಮ್​ದರ್ದ್​. ಸಾಮಾನ್ಯವಾಗಿ ಮಹಿಳೆಯರನ್ನು ಒಂದು ವರ್ಗ ಕಡೆಗಣಿಸುತ್ತದೆ, ಅವರೇನಿದ್ದರೂ ಮಕ್ಕಳನ್ನು ಹೇರುವ ಯಂತ್ರ ಅಷ್ಟೇ ಎನ್ನುವ ಆರೋಪವೂ ಇದೆ. ಆದರೆ ಈ ಉಗ್ರ ಸಂಘಟನೆ ಹೆಣ್ಮಕ್ಕಳೇ ಸ್ಟ್ರಾಂಗು ಎನ್ನುವುದನ್ನು ಸಾಬೀತು ಮಾಡಲು 'ಆಪರೇಷಮ್​ ಹಮ್​ದರ್ದ್​' ಹೆಸರಿನ ಕಾರ್ಯಾಚರಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ವೈದ್ಯರ ರೂಪದಲ್ಲಿ ಇರುವ ಮಹಿಳಾ ಉಗ್ರರು! ಈ ಮಹಿಳೆಯರಲ್ಲಿ ಹಲವು ಪಂಗಡಗಳಿದ್ದು, ಉಗ್ರ ಸಂಘಟನೆ, ಅಲ್ಲಿ ಅವರಿಗೆ ಇರುವ ಜವಾಬ್ದಾರಿ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳನ್ನು ಕೊಡಲಾಗುತ್ತಿದೆ. ಒಟ್ಟಾರೆಯಾಗಿ ಈ ಕಾರ್ಯಾರಚಣೆಯಲ್ಲಿ “ಡಾಕ್ಟರ್ ಮಾಡ್ಯೂಲ್” ಅಥವಾ ಆಪರೇಷನ್​ ಹಮ್​ದರ್ದ್​ ಎಂದು ಹೆಸರು ಇಡಲಾಗಿದೆ.

ಇದು ಭಯೋತ್ಪಾದಕಿಯರ ಕೆಲಸ ನೋಡಿ!

ಯಾವ ಜಾಗದಲ್ಲಿ ಬಾಂಬ್​ ಇಡಬೇಕು ಎನ್ನುವ ಒಂದು ಮಹಿಳೆಯರ ಗುಂಪು ಕೆಲಸ ಮಾಡಿದರೆ, ಆ ಜಾಗದಲ್ಲಿ ಯಾವ ಸಮಯದಲ್ಲಿ ಬಾಂಬ್​ ಇಡುವುದು ಸೂಕ್ತ ಎಂದು ನೋಡುವುದು ಇನ್ನೊಂದು ಮಹಿಳೆಯರ ಗುಂಪಿನ ಕೆಲಸ. ಆ ಬಳಿಕ ಆ ಕಾರ್ಯಕ್ಕೆ ಚಾಲನೆ ನೀಡುವುದು ಒಬ್ಬರ ಕೆಲಸವಾದರೆ, ಅದನ್ನು ಯಶಸ್ವಿ ಮಾಡುವುದು ಮತ್ತೊಂದು ಗುಂಪಿನ ಕೆಲಸ. ಹೀಗೆ ವಿವಿಧ ಮಹಿಳಾ ಉಗ್ರ ವೈದ್ಯೆಯರ ಗುಂಪು ಆಪರೇಷನ್​ ಹಮ್​ದರ್ದ್​ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ದೆಹಲಿಯ ಬಾಂಬ್ ಬ್ಲಾಸ್ಟ್​ ಪ್ರಕರಣದಲ್ಲಿ ಡಾ. ಶಾಹೀನ್ ನೇತೃತ್ವದ ವೈದ್ಯಕೀಯ ವೃತ್ತಿಪರರು ಸೇರಿರುವುದು ತಿಳಿಯುತ್ತಲೇ ಆಕೆಯನ್ನು ಅರೆಸ್ಟ್​ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆಕೆಯನ್ನು ತೀವ್ರಗಾಮಿಯಾಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ದಾಳಿಯ ರೂವಾರಿಗಳಲ್ಲಿ ಒಬ್ಬರಾದ ಡಾ. ಮುಜಮ್ಮಿಲ್ ಡೈರಿಯಲ್ಲಿ ಈ ಆಪರೇಷನ್​ ಬಗ್ಗೆ ಉಲ್ಲೇಖಿಸಲಾಗಿದೆ. ಇದು ಯುವ ಮುಸ್ಲಿಂ ಮಹಿಳೆಯರಿಗೆ ದಾಳಿಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಈ ಜಾಲದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಫರಿದಾಬಾದ್‌ನಾದ್ಯಂತ ಹರಡಿರುವ 25-30 ಸದಸ್ಯರು ಸೇರಿದ್ದಾರೆ ಎನ್ನುವುದು ತನಿಖೆಯಿಂದ ಬಯಲಾಗಿದೆ!

ಇವರ ಬಂಧನ

ಗಮನಾರ್ಹವಾಗಿ, ಅಲ್-ಫಲಾಹ್‌ನ ಡಾ. ಶಾಹೀನ್ ಮತ್ತು ಡಾ. ಮುಜಮ್ಮಿಲ್ ಅವರನ್ನು ಬಂಧಿಸಲಾಗಿದೆ, ವಿಶ್ವವಿದ್ಯಾನಿಲಯದ ಮತ್ತೊಬ್ಬ ವೈದ್ಯ ಡಾ. ಉಮರ್ ಉನ್ ನಬಿ ಸ್ಫೋಟಕಗಳಿಂದ ತುಂಬಿದ ಕಾರನ್ನು ಚಾಲನೆ ಮಾಡುತ್ತಿದ್ದಾಗ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ. ಡಾ. ಮೊಹಮ್ಮದ್ ಮತ್ತು ಡಾ. ಮುಸ್ತಕಿಮ್ ಎಂದು ಗುರುತಿಸಲಾದ ಅಲ್-ಫಲಾಹ್‌ನ ಇನ್ನೂ ಇಬ್ಬರು ವೈದ್ಯರನ್ನು ದೆಹಲಿ ಪೊಲೀಸ್ ವಿಶೇಷ ಘಟಕವು ಹರಿಯಾಣದ ನುಹ್‌ನಿಂದ ಬಂಧಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ