
ಮೇಘಾಲಯದ (Meghalaya) ಶಿಲ್ಲಾಂಗ್‌ನಲ್ಲಿ (Shillong) ಈಶಾನ್ಯ ಕೌನ್ಸಿಲ್‌ನ (Northeastern Council) ಸುವರ್ಣ ಮಹೋತ್ಸವದಲ್ಲಿ (Golden Jubilee Celebration) ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈಶಾನ್ಯ ಭಾರತದಲ್ಲಿ ಅಭಿವೃದ್ಧಿಯಾಗದಿರುವಿಕೆ, ಭ್ರಷ್ಟಾಚಾರ, ಅಶಾಂತಿ ಮತ್ತು ರಾಜಕೀಯ ಒಲವು ಮುಂತಾದ ಎಲ್ಲಾ ಅಡೆತಡೆಗಳಿಗೆ ತಮ್ಮ ಸರ್ಕಾರ 'ರೆಡ್ ಕಾರ್ಡ್' ನೀಡಿದೆ ಎಂದು ಹೇಳಿದ್ದಾರೆ. ಶಿಲ್ಲಾಂಗ್‌ನ ಫುಟ್ಬಾಲ್ ಮೈದಾನದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಸಂದೇಶವನ್ನು ಕ್ರೀಡಾ ಭಾಷೆಯಲ್ಲಿ ಹೇಳಿದ್ದಾರೆ.
‘‘ಫುಟ್‌ಬಾಲ್‌ನಲ್ಲಿ ಯಾರಾದರೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ಆಡಿದರೆ ಅವರಿಗೆ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಲಾಗುತ್ತದೆ. ಅದೇ ರೀತಿ ಕಳೆದ 8 ವರ್ಷಗಳಲ್ಲಿ ಈಶಾನ್ಯ ಭಾರತದಲ್ಲಿ ಅಭಿವೃದ್ಧಿಯಾಗದಿರುವುದು, ಭ್ರಷ್ಟಾಚಾರ, ರಾಜಕೀಯ ಒಲವು ಮತ್ತು ಅಶಾಂತಿಯಂತಹ ಎಲ್ಲ ಅಡೆತಡೆಗಳಿಗೆ ರೆಡ್ ಕಾರ್ಡ್ ನೀಡಿದ್ದೇವೆ’’ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯ ಮತ್ತು ಈ ಪ್ರದೇಶದಲ್ಲಿ 90 ಪ್ರಮುಖ ಕ್ರೀಡಾ ಯೋಜನೆಗಳ ಮೂಲಕ ಈಶಾನ್ಯ ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಯತ್ತ ತಮ್ಮ ಸರ್ಕಾರ ಗಮನಹರಿಸುತ್ತಿದೆ ಎಂದೂ ಪ್ರಧಾನಿ ಹೇಳಿದರು.
ಇದನ್ನು ಓದಿ: PM Narendra Modi: ನಾಳೆ ಪ್ರಧಾನಿ ಮೋದಿ ಮೇಘಾಲಯ, ತ್ರಿಪುರ ಭೇಟಿ
ಇಂದು ಕಾಕತಾಳೀಯವಾಗಿ ಫುಟ್ಬಾಲ್ ವಿಶ್ವಕಪ್ ಫೈನಲ್ ನಡೆಯಲಿದೆ, ನಾನು ಶಿಲ್ಲಾಂಗ್‌ನಲ್ಲಿ ಫುಟ್‌ಬಾಲ್ ಅಭಿಮಾನಿಗಳ ನಡುವೆ ಫುಟ್‌ಬಾಲ್ ಮೈದಾನದಲ್ಲಿ ರ್‍ಯಾಲಿ ನಡೆಸುತ್ತಿದ್ದೇನೆ. ಅಲ್ಲಿ (ಕತಾರ್‌ನಲ್ಲಿ), ಫುಟ್‌ಬಾಲ್ ಸ್ಪರ್ಧೆ ನಡೆಯುತ್ತಿದೆ ಮತ್ತು ಇಲ್ಲಿ ನಾವು ಅಭಿವೃದ್ಧಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಹಾಗೂ, ಇಂದು ಕತಾರ್‌ನಲ್ಲಿ ವಿಶ್ವಕಪ್ ನಡೆಯುತ್ತಿದೆ, ಮತ್ತು ನಾವು ವಿದೇಶಿ ತಂಡಗಳಿಗೆ ಹುರಿದುಂಬಿಸುತ್ತಿದ್ದೇವೆ. ಆದರೆ ನಾವು ಅಂತಹ ಜಾಗತಿಕ ಕ್ರೀಡಾಕೂಟಗಳನ್ನು ಆಯೋಜಿಸುವ ದಿನ ದೂರವಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಮತ್ತು ನಮ್ಮ ತ್ರಿವರ್ಣ ಧ್ವಜವು ಎತ್ತರಕ್ಕೆ ಹಾರುತ್ತದೆ ಮತ್ತು ನಾವು ನಮ್ಮದೇ ಆದ ತಂಡದವರಿಗೆ ಹುರಿದುಂಬಿಸುತ್ತೇವೆ ಎಂದೂ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸಿದ್ದು ಸಹ ನಮ್ಮ ಸರ್ಕಾರದ ಅವಧಿಯಲ್ಲಿ ಎಂದೂ ಪ್ರಧಾನ ಮಂತ್ರಿ ಹೇಳಿಕೊಂಡಿದ್ದಾರೆ. 2014 ರ ಮೊದಲು, ಈಶಾನ್ಯ ಭಾಗದಲ್ಲಿ ವಾರಕ್ಕೆ 900 ವಿಮಾನಗಳು ಮಾತ್ರ ಲಭ್ಯವಿದ್ದವು ಮತ್ತು ಈಗ ಅದು 1,900 ವಿಮಾನಗಳವರೆಗೆ ಇದೆ ಎಂದೂ ಅವರು ಹೇಳಿದರು. ಅಲ್ಲದೆ, ಕೃಷಿ ಉಡಾನ್ ಯೋಜನೆ ಮೂಲಕ ಈಶಾನ್ಯದ ರೈತರಿಗೆ ಉತ್ತಮ ವಾಯು ಸಂಪರ್ಕವು ಸಹಾಯ ಮಾಡುತ್ತಿದೆ ಎಂದೂ ಮೋದಿ ಹೇಳಿದರು. ಆಗಸ್ಟ್ 2020 ರಲ್ಲಿ ಪ್ರಾರಂಭಿಸಲಾದ ಕೃಷಿ ಉಡಾನ್ ಯೋಜನೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಗುಜರಾತ್‌ನ ಕಟುಕ ಎಂದ ಪಾಕ್ ಸಚಿವನಿಗೆ ಭಾರತ ಸೇರಿ ವಿಶ್ವನಾಯಕರ ಮಂಗಳಾರತಿ!
ಇನ್ನು, ಟೆಲಿಕಾಂ ಸಂಪರ್ಕದ ಕುರಿತು ಸಹ ಮಾತನಾಡಿದ ಮೋದಿ, ಈಶಾನ್ಯ ಭಾರತದಲ್ಲಿ 6 ಸಾವಿರ ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗುವುದು ಮತ್ತು ಇದಕ್ಕಾಗಿ ಕೇಂದ್ರವು ₹ 5,000 ಕೋಟಿ ವೆಚ್ಚ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಲ್ಲದೆ, ಮುಂಬರುವ 150 ಏಕಲವ್ಯ ಮಾದರಿ ಶಾಲೆಗಳು ಮತ್ತು ಈಶಾನ್ಯಕ್ಕೆ ಪರ್ಬತ್ ಮಾಲಾ ಯೋಜನೆ ಮತ್ತು PM-DevINE ಯೋಜನೆಯಂತಹ ಕೇಂದ್ರೀಕೃತ ಯೋಜನೆಯಂತಹ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಮಂತ್ರಿ ಮಾತನಾಡಿದ್ದಾರೆ. ಈ ವೇಳೆ ಕೇಂದ್ರದ ಹಿಂದಿನ ಸರ್ಕಾರಗಳ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ನಮಾಮಿ ಗಂಗೆ ಯೋಜನೆಗೆ ವಿಶ್ವಸಂಸ್ಥೆ ಮೆಚ್ಚುಗೆ
ಕೇಂದ್ರದಲ್ಲಿ ಹಿಂದಿನ ಸರ್ಕಾರಗಳು 'ವಿಭಜಿಸುವ' ಈಶಾನ್ಯ ವಿಧಾನವನ್ನು ಹೊಂದಿದ್ದವು ಮತ್ತು ನಾವು ಪ್ರದೇಶಕ್ಕೆ 'ದೈವಿಕ' ವಿಧಾನವನ್ನು ಹೊಂದಿದ್ದೇವೆ. ತಮ್ಮ ಸರ್ಕಾರವು ಈ ಪ್ರದೇಶದಲ್ಲಿ ಸಂಘರ್ಷಗಳನ್ನು ಪರಿಹರಿಸುವ ಮೂಲಕ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ