ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸೋಂಕಿತರಿಗಿಂತ ಚೇತರಿಕೆ ಪ್ರಮಾಣವೇ ಹೆಚ್ಚು!

By Suvarna NewsFirst Published May 4, 2021, 9:44 AM IST
Highlights

ದೆಹಲಿಯಲ್ಲಿ ಸೋಮವಾರ 18,043 ಕೊರೋನಾ ಕೇಸ್‌ಗಳು ಪತ್ತೆ| ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸೋಂಕಿತರಿಗಿಂತ ಚೇತರಿಕೆ ಪ್ರಮಾಣವೇ ಹೆಚ್ಚು!

ನವದೆಹಲಿ(ಮೇ.04): ದೆಹಲಿಯಲ್ಲಿ ಸೋಮವಾರ 18,043 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಇದೇ ವೇಳೆ ನಿನ್ನೆ 20293 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ತನ್ಮೂಲಕ ದೆಹಲಿಯಲ್ಲಿ ಹೊಸ ಸೋಂಕಿತರಿಗಿಂತ ಚೇತರಿಕೆ ಪ್ರಮಾಣವೇ ದುಪ್ಪಟ್ಟು ಆಗಿದೆ.

ಇನ್ನು ಸೋಮವಾರ ಒಂದೇ ದಿನ ಕೊರೋನಾಕ್ಕೆ 448 ಮಂದಿ ಬಲಿಯಾಗಿದ್ದು, ಸತತ 3ನೇ ದಿನವೂ ಈ ಡೆಡ್ಲಿ ವೈರಸ್‌ 400ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ದೆಹಲಿಯಲ್ಲಿ ಒಟ್ಟಾರೆ 12 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೋನಾ ವೈರಸ್‌ ವ್ಯಾಪಿಸಿದ್ದು, ಈ ಪೈಕಿ 11.05 ಲಕ್ಷದಷ್ಟುಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

ಉಳಿದಂತೆ 17 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ದಿಲ್ಲಿ ಸರ್ಕಾರ ಹೇಳಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!