ಕೊರೋನಾ ಮಹಾಮಾರಿ ತಡೆಗೆ ಲಸಿಕೆ ಸಂಶೋಧನೆಗಳು ನಡೆಯುತ್ತಿದೆ. ಹಲವು ವಿದೇಶಿ ಲಸಿಕೆಗಳ ಅಂತಿಮ ಹಂತದ ಪ್ರಯೋಗದಲ್ಲಿದೆ. ಇತ್ತ ಭಾರತ ಕೂಡ ಕೊರೋನಾ ಲಸಿಕೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಮೊಟ್ಟ ಮೊದಲ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ
ನವದೆಹಲಿ(ಜು.26): ಕೊರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ದೇಶಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದೆ. ಭಾರತದಲ್ಲೂ ಈ ಪ್ರಯತ್ನಗಳು ಭರದಿಂದ ಸಾಗಿದೆ. ಭಾರತದ ಮೊಟ್ಟ ಮೊದಲ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಇದೀಗ ಮೊದಲ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಇದೀಗ 2ನೇ ಹಂತದ ಪ್ರಯೋಗ ಆರಂಭಿಸಿದೆ.
ಬೆಂಗ್ಳೂರಲ್ಲಿ 3 ಸಾವಿರಕ್ಕೂ ಹೆಚ್ಚು ಸೋಂಕಿತರ ಮೂಲವೇ ಗೊತ್ತಿಲ್ಲ..!.
undefined
ಕೊವ್ಯಾಕ್ಸಿನ್ ಲಸಿಕೆ ಪ್ರಯೋಗದ ಕುರಿತು ಲಸಿಕೆ ಪ್ರಾಯೋಗಿಕ ತಂಡದ ಪ್ರಿನ್ಸಿಪಲ್ ಡಾಕ್ಟರ್ ಸವಿತಾ ವರ್ಮಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗದಲ್ಲಿ ಭಾರದ ಒಟ್ಟು 50 ಮಂದಿಗೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಲಸಿಕೆ ಪ್ರಯೋಗದ ಫಲಿತಾಂಶ ಫಲಪ್ರದವಾಗಿದೆ. ಹೀಗಾಗಿ ಇದೀಗ 2ನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ಸವಿತಾ ವರ್ಮಾ ಹೇಳಿದ್ದಾರೆ.
ಎರಡನೇ ಹಂತದ ಪ್ರಯೋಗದಲ್ಲಿ 6 ಮಂದಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ. ಶನಿವಾರ(ಜು.25) ರಂದು 2ನೇ ಹಂತದ ಪ್ರಯೋಗ ಮಾಡಲಾಗಿದೆ. ಎಲ್ಲಾ ಪ್ರಯೋಗ ಯಶಸ್ವಿಯಾಗಿ ಭಾರತದ ಮೊದಲ ಕೊರೋನಾ ಔಷದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಸವಿತಾ ವರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.