Election Campaign: ಅಗತ್ಯಬಿದ್ದರೆ ಆನ್‌ಲೈನ್‌ ಚುನಾವಣಾ ರ‍್ಯಾಲಿಗೆ ಸಿದ್ಧ ಎಂದ ಬಿಜೆಪಿ

By Kannadaprabha NewsFirst Published Dec 30, 2021, 5:00 AM IST
Highlights
  • ಅಗತ್ಯದ್ದರೆ ಆನ್‌ಲೈನ್‌ ಚುನಾವಣಾ ರ‍್ಯಾಲಿಗೆ ಸಿದ್ಧ ಎಂದ ಬಿಜೆಪಿ
  • ಕೋವಿಡ್‌ 3ನೇ ಅಲೆ ಭೀತಿ ಹಿನ್ನೆಲೆ
  • ಐದೂ ರಾಜ್ಯಗಳಲ್ಲಿ ವರ್ಚುವಲ್‌ ರಾರ‍ಯಲಿ ಸುಳಿವು

ನವದೆಹಲಿ(ಡಿ.30): ರೂಪಾಂತರಿ ಒಮಿಕ್ರೋನ್‌ ಪ್ರಭೇದದ ನಿಯಂತ್ರಣಕ್ಕಾಗಿ ಹಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಕಠಿಣ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ, ಅಗತ್ಯ ಬಿದ್ದರೆ ಬಿಜೆಪಿಯು(BJP) ಆನ್‌ಲೈನ್‌ ಮುಖಾಂತರ ಪಂಚರಾಜ್ಯಗಳಲ್ಲಿ ಚುನಾವಣಾ ಪ್ರಚಾರ ರಾರ‍ಯಲಿಗಳನ್ನು ನಡೆಸಲಿದೆ ಎಂದು ಪಕ್ಷದ ಪಂಜಾಬ್‌ ಚುನಾವಣಾ ಉಸ್ತುವಾರಿ ಗಜೇಂದ್ರ ಶೇಖಾವತ್‌ ಅವರು ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಮಾತನಾಡಿದ ಅವರು, ‘ವ್ಯಾಪಕವಾಗಿ ಹರಡುವ ಒಮಿಕ್ರೋನ್‌(Omicron) ನಡುವೆ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ತಜ್ಞರ ಜತೆ ಚರ್ಚೆ ನಡೆಸುತ್ತಿದೆ. ಚುನಾವಣೆ ಹೇಗೆ ನಡೆಸಬೇಕು ಎಂಬುದು ಆಯೋಗದ ಕೆಲಸ. ಆಯೋಗ ತರುವ ನಿಯಮಾವಳಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ಪಾಲಿಸಲೇಬೇಕು’ ಎಂದರು.

Latest Videos

ಚುನಾವಣೆಯಲ್ಲಿ ಬಿಜೆಪಿಗೆ 1 ಕೋಟಿ ಮತ ಕೊಟ್ಟರೆ, 50 ರೂ.ಗೆ ಮದ್ಯ ಕೊಡ್ತೇವೆ: ರಾಜ್ಯಾಧ್ಯಕ್ಷರ ಘೋಷಣೆ

‘ಉತ್ತರ ಪ್ರದೇಶದಂಥ ಬೃಹತ್‌ ರಾಜ್ಯಗಳ ಪ್ರಚಾರ ಸಭೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೋವಿಡ್‌ ನಿಯಮಗಳ ಪಾಲನೆ ಅಸಾಧ್ಯ. ಅಲ್ಲದೆ ಈ ಹಿಂದೆ ಪಶ್ಚಿಮ ಬಂಗಾಳ ಚುನಾವಣೆ ವೇಳೆ ವಚ್ರ್ಯುವಲ್‌ ರಾರ‍ಯಲಿಗಳನ್ನು ನಡೆಸಿದ್ದೇವೆ. ಅದೇ ರೀತಿ ಈಗಲೂ ಆನ್‌ಲೈನ್‌ ರಾರ‍ಯಲಿಗೆ ಸಿದ್ಧವಿದ್ದೇವೆ’ ಎಂದು ನುಡಿದರು.

ಆಂಧ್ರಪ್ರದೇಶದಲ್ಲಿ 2024ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ರಾಜ್ಯದ ಜನತೆಗೆ 70 ರೂ.ಗೆ ಮದ್ಯ ನೀಡುವುದಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರವಸೆ ನೀಡಿದೆ. ಹೌದು ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸೋಮು ವೀರರಾಜು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಅಪಾರ ಸಂಪನ್ಮೂಲಗಳು ಮತ್ತು ಸುದೀರ್ಘ ಕರಾವಳಿಯ ಹೊರತಾಗಿಯೂ ರಾಜಕೀಯ ಶಕ್ತಿಗಳು ರಾಜ್ಯದ ಅಭಿವೃದ್ಧಿಯಲ್ಲಿ ವಿಫಲವಾಗಿವೆ ಎಂದು ಹೇಳಿದರು.

ರಾಜ್ಯದಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟವಾಗುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ ವೀರರಾಜು, ''ರಾಜ್ಯದಲ್ಲಿ ಒಂದು ಕೋಟಿ ಜನರು ಸೇವಿಸುತ್ತಾರೆ. ಹೀಗಿರುವಾಗ ನೀವು ಬಿಜೆಪಿಗೆ ಒಂದು ಕೋಟಿ ಮತ ನೀಡಿದರೆ, ನಾವು ನಿಮಗೆ ಕೇವಲ 75 ರೂಪಾಯಿಗೆ ಮದ್ಯ ಕೊಡುತ್ತೇವೆ. ಒಳ್ಳೆಯ ಆದಾಯ ಬಂದರೆ ಕೇವಲ 50 ರೂ.ಗೆ ಕೊಡುತ್ತೇವೆ (ಕೆಟ್ಟ ಮದ್ಯವಲ್ಲ) ಖಂಡಿತಾ ಒಳ್ಳೆಯದು. ಎಂದು ಟಾಂಗ್ ನೀಡಿದ್ದಾರೆ.

click me!