Covid Curbs In Bengal: ಪ.ಬಂಗಾಳದಲ್ಲಿ ಶಾಲಾ ಕಾಲೇಜು ಬಂದ್‌ ? ಸೂಚನೆ ಕೊಟ್ಟ ಸಿಎಂ

By Kannadaprabha News  |  First Published Dec 30, 2021, 4:00 AM IST
  • ಪ.ಬಂಗಾಳದಲ್ಲಿ ಶಾಲಾ ಕಾಲೇಜುಗಳನ್ನು ಬಂದ್‌ ?
  • ಹೆಚ್ಚಾಗುತ್ತಿರುವ ಒಮಿಕ್ರೋನ್‌ ಮತ್ತು ಕೋವಿಡ್‌ ಪ್ರಕರಣ
  • ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟುಹಾಜರಾತಿಯೊಂದಿಗೆ ಕೆಲಸ

ಕೋಲ್ಕತಾ(ಡಿ.30): ಕೋವಿಡ್‌ 3ನೇ ಅಲೆ, ಒಮಿಕ್ರೋನ್‌ ಭೀತಿ ಹಿನ್ನೆಲೆಯಲ್ಲಿ ಅವಶ್ಯಕತೆ ಬಿದ್ದರೆ ಪ.ಬಂಗಾಳದಲ್ಲಿ(West Bengal) ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸಾಗರ್‌ ದ್ವೀಪದಲ್ಲಿ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗುತ್ತಿರುವ ಒಮಿಕ್ರೋನ್‌(Omicron) ಮತ್ತು ಕೋವಿಡ್‌ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಒಮಿಕ್ರೋನ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಗತ್ಯ ಬಿದ್ದರೆ ಶಾಲಾ ಕಾಲೇಜುಗಳನ್ನು ಬಂದ್‌ ಮಾಡುವಂತೆ ಮತ್ತು ಸರ್ಕಾರಿ ಕಚೇರಿಗಳು ಶೇ.50ರಷ್ಟುಹಾಜರಾತಿಯೊಂದಿಗೆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

ಪಶ್ಚಿಮ ಬಂಗಾಳದಲ್ಲಿ 752 ಸೋಂಕುಗಳು ದಾಖಲಾಗಿದ್ದು, ಏಕದಿನ ಕೋವಿಡ್ -19 ಪ್ರಕರಣಗಳಲ್ಲಿ ಬಂಗಾಳವು ಮಂಗಳವಾರ ಭಾರಿ ಏರಿಕೆ ಕಂಡಿದೆ. ಹಿಂದಿನ ದಿನದಲ್ಲಿ 439 ಕೇಸ್ ವರದಿಯಾಗಿದೆ. 752 ಹೊಸ ಪ್ರಕರಣಗಳಲ್ಲಿ, ಕೋಲ್ಕತ್ತಾದಲ್ಲಿ 382 ಸೋಂಕುಗಳು, ನಂತರ ಉತ್ತರ 24 ಪರಗಣಗಳಲ್ಲಿ 102 ಇದೆ. ಸೋಮವಾರ ಕೋಲ್ಕತ್ತಾದಲ್ಲಿ 204 ಕೇಸ್ ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ಡೇಟಾ ತೋರಿಸಿದೆ. ಕೋವಿಡ್ -19 ರ ಓಮಿಕ್ರಾನ್ ರೂಪಾಂತರದಿಂದ ಭಾರತದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಟಾಪ್ 10 ರಾಜ್ಯಗಳಲ್ಲಿ ಬಂಗಾಳವೂ ಒಂದಾಗಿದೆ. ಪೂರ್ವ ರಾಜ್ಯವು ಇದುವರೆಗೆ 11 ಪ್ರಕರಣಗಳನ್ನು ವರದಿ ಮಾಡಿದೆ. ಅದರಲ್ಲಿ ಒಬ್ಬ ರೋಗಿ ಮಾತ್ರ ಇದುವರೆಗೆ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.

Tap to resize

Latest Videos

ದೇಶದಲ್ಲಿ ಕೊರೋನಾ ಲೇಟೆಸ್ಟ್ ಅಪ್ಡೇಟ್ಸ್:

ದೇಶದಲ್ಲಿ ಕೋವಿಡ್‌ 3ನೇ ಅಲೆ ಏಳುವ ಮುನ್ಸೂಚನೆ ಎಂಬಂತೆ ದೈನಂದಿನ ಕೋವಿಡ್‌ ಪ್ರಕರಣಗಳು ದಿಢೀರನೇ ಏರಿಕೆ ಕಂಡಿವೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 9,195 ಪ್ರಕರಣಗಳು ದಾಖಲಾಗಿದ್ದು, ಇದು 20 ದಿನಗಳ ಗರಿಷ್ಠವಾಗಿದೆ.

Yellow Alert In Delhi: ದಿಲ್ಲಿಯಲ್ಲಿ ಕರ್ನಾಟಕಕ್ಕಿಂತ ಕಠಿಣ ನಿರ್ಬಂಧ; ಶಾಲೆ, ಸಿನಿಮಾ ಬಂದ್‌

ಡಿ.9ರಂದು 9416 ಪ್ರಕರಣ ದಾಖಲಾಗಿದ್ದವು. ಆ ಬಳಿಕ ಸೋಂಕು 9 ಸಾವಿರ ದಾಟದೇ ಅದಕ್ಕಿಂತ ಕಡಿಮೆ ಅಂಕಿಯಲ್ಲಿ ಹೊಯ್ದಾಡುತ್ತಿತ್ತು. ಈಗ ಮತ್ತೆ 9 ಸಾವಿರದ ಗಡಿ ದಾಟಿರುವುದು ಆತಂಕದ ವಿಚಾರ. ಅಲ್ಲದೆ ಮಂಗಳವಾರದ ಪ್ರಕರಣಗಳಿಗೆ (6358 ಕೇಸು) ಹೋಲಿಸಿದರೆ ಬುಧವಾರ ಪ್ರಕರಣ ಸಂಖ್ಯೆ ಶೇ.44ರಷ್ಟುಹೆಚ್ಚಾದಂತಾಗಿದೆ. ಇದೇ ಅವಧಿಯಲ್ಲಿ 302 ಸೋಂಕಿತರು ಸಾವಿಗೀಡಾಗಿದ್ದಾರೆ.

ಕಳೆದ 24 ತಾಸುಗಳಲ್ಲಿ 1,546 ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ 77,002ಕ್ಕೆ ಏರಿಕೆಯಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 3.48 ಕೋಟಿಗೆ, ಒಟ್ಟು ಸಾವು 4.8 ಲಕ್ಷಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ಕೇಸ್:

ಡಿಸೆಂಬರ್ 29) ಹೊಸದಾಗಿ 566 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 6 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.  ಈ ಮೂಲಕ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30,05,798 ಕ್ಕೆ ಏರಿಕೆಯಾಗಿದ್ರೆ, ರಾಜ್ಯದಲ್ಲಿ ಈವರೆಗೆ ಕೊರೋನಾದಿಂದ 38,324 ಜನ ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 29,59,674 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸದ್ಯ 7,771 ಕೊರೋನಾ ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.52 ರಷ್ಟು ಇದೆ  ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 400 ಜನರಿಗೆ ಕೊವಿಡ್-19 ಕೇಸ್ ಪತ್ತೆಯಾಗಿವೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,62,397 ಕ್ಕೆ ಏರಿಕೆಯಾಗಿದೆ. 12,62,397 ಸೋಂಕಿತರ ಪೈಕಿ 12,39,616 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ 16,392 ಜನರು ಮೃತಪಟ್ಟಿದ್ದು,  6,388 ಕೊರೋನಾ ಸಕ್ರಿಯ ಪ್ರಕರಣಗಳಿವೆ

click me!