ರೈಲೊಂದರ ಅಡುಗೆ ರೂಮ್‌ನಲ್ಲಿ ಇಲಿಗಳು ಬಿಂದಾಸ್ ಆಗಿ ಆಹಾರದ ಮೇಲೆ ಓಡಾಡುತ್ತಾ ಆಹಾರವನ್ನು ತಿನ್ನುತ್ತಿರುವ ಆಘಾತಕಾರಿ ಘಟನೆ ನಡೆದಿದೆ.
ಮುಂಬೈ: ರೈಲೊಂದರ ಅಡುಗೆ ರೂಮ್‌ನಲ್ಲಿ ಇಲಿಗಳು ಬಿಂದಾಸ್ ಆಗಿ ಆಹಾರದ ಮೇಲೆ ಓಡಾಡುತ್ತಾ ಆಹಾರವನ್ನು ತಿನ್ನುತ್ತಿರುವ ಆಘಾತಕಾರಿ ಘಟನೆ ನಡೆದಿದೆ. ಈ ದೃಶ್ಯವೊಂದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ ರೈಲಿನಲ್ಲಿ ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕರೊಬ್ಬರು ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ರೈಲ್ವೆ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ @mangirish_tendulkar ಎಂಬುವವರು ಈ ವಿಚಾರವನ್ನು ಬರೆದುಕೊಂಡಿದ್ದಾರೆ. ಇವರು ಆಕ್ಟೋಬರ್ 15 ರಂದು 11099 LTT MAO Express ರೈಲಿನಲ್ಲಿ ತಮ್ಮ ಕುಟುಂಬದ ಜೊತೆ ಪ್ರಯಾಣ ಮಾಡುತ್ತಿದ್ದರು. ಪ್ರಯಾಣದ ವೇಳೆ ಇಲಿಯೊಂದು ರೈಲಿನ ಕಿಚನ್‌ನಲ್ಲಿ ಬಿಂದಾಸ್ ಆಗಿ ಓಡಾಡುತ್ತಾ ಆಹಾರದ ಮೇಲೆಯೇ ಕುಳಿತುಕೊಂಡು ಆಹಾರ ಸೇವಿಸುತ್ತಿರುವ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ. ರೈಲಿನಲ್ಲಿ ಪ್ರಯಾಣಿಸುವವರನ್ನು ಬೆಚ್ಚಿ ಬೀಳಿಸುವಂತಹ ಈ ದೃಶ್ಯವನ್ನು ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ಹೊರ ಹಾಕಿದ್ದಾರೆ.
ವಿದ್ಯಾರ್ಥಿನಿಯರಿಗೆ ಸ್ಕೂಟರ್, SCSTಗೆ 12 ಲಕ್ಷ: ಮತ್ತಷ್ಟು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ರೈಲಿನಲ್ಲಿ ಸದಾಕಾಲ ಪ್ರಯಾಣಿಸುವ ಹಾಗೂ ರೈಲಿನ ಬಗ್ಗೆ ವಿಶೇಷ ಆಸಕ್ತನಾಗಿರುವ ನನಗೆ ಈ ಘಟನೆ ಭಾರಿ ಅಸಮಾಧಾನ ಉಂಟು ಮಾಡಿದೆ. ಅಕ್ಟೋಬರ್ 15 ರಂದು, ನಾನು 11099 ಮಡಗಾಂವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಮಧ್ಯಾಹ್ನ 1:45 ಕ್ಕೆ ಹೊರಡಬೇಕಾದ ಆ ರೈಲು ಒಂದೂವರೆ ಗಂಟೆಗೂ ಅಧಿಕ ವಿಳಂಬದ ನಂತರ 3.20ಕ್ಕೆ ಹೊರಟಿತು. ರೈಲ್ವೆಯ ಮೇಲಿನ ನನ್ನ ವಿಶೇಷ ಆಸಕ್ತಿಯಿಂದ ನಾನು ರೈಲಿನ ಎಂಜಿನ್ ಜೋಡಣೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಹೋಗಿದ್ದರಿಂದ ಈ ದೃಶ್ಯ ಕಾಣಲು ಸಿಕ್ಕಿತ್ತು. ಈ ವೇಳೆ ರೈಲಿನ ಕಿಚನ್ ಕಾರ್‌ನಲ್ಲಿ 6 ರಿಂದ 7 ಇಲಿಗಳನ್ನು ಕಂಡೆ ಎಂದು ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಐವರು ದೋಷಿ: ದೆಹಲಿ ಹೈಕೋರ್ಟ್
ಈ ವಿಚಾರವನ್ನು ಅವರು ರೈಲ್ವೆ ಗಮನಕ್ಕೆ ತರಲು ಮುಂದಾಗಿದ್ದಾರೆ. ರೈಲ್ವೆ ರಕ್ಷಣಾ ಪಡೆಗೆ ಈ ವಿಚಾರ ತಿಳಿಸಿದಾಗ ಅವರು ರೈಲು ಟ್ರ್ಯಾಕ್‌ನ ಕೆಳಗೆ ಬೇಕಾದಷ್ಟು ಇಲಿಗಳು ಇವೆ ಎಂಬ ಉತ್ತರ ನೀಡಿದ್ದಾರೆ. ನಂತರ ಅವರು ಸಹಾಯಕ ಸ್ಟೇಷನ್ ಮಾಸ್ಟರ್ ಮೀನಾ ಅವರನ್ನು ಸಂಪರ್ಕಿಸಿದ್ದು, ಅವರು ಪ್ಯಾಂಟ್ರಿ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ ನಿಜವಾಗಿಯೂ ಪ್ಯಾಂಟ್ರಿಯಲ್ಲಿ ಹಲವಾರು ಇಲಿಗಳಿವೆ ಎಂಬುದನ್ನು ಒಪ್ಪಿದ ಅವರು, ಅದರ ಬಗ್ಗೆ ನಾವು ಏನು ಮಾಡಲಾಗುತ್ತದೆ, ರೈಲ್ವೇಗಳು ನಮಗೆ ಗುಣಮಟ್ಟವಿಲ್ಲದ ಕೋಚ್‌ಗಳನ್ನು ಮಾತ್ರ ಒದಗಿಸುತ್ತವೆ. ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಶೇ.4 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟ ನಿರ್ಧಾರ
ನಂತರ ಪ್ರಯಾಣಿಕ ಗಿರೀಶ್ ತೆಂಡೂಲ್ಕರ್ ಅವರು ರೈಲ್ ಮದದ್ ಅಪ್‌ನಲ್ಲಿ ಹೋಗಿ ದೂರು ನೀಡಿದ್ದು ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋ ನಂತರ ಮುಂಬೈ ಮ್ಯಾಟರ್‌ನಲ್ಲಿಯೂ ಪೋಸ್ಟ್ ಆಗಿದ್ದು, ಇದಕ್ಕೆ IRCTC ಪ್ರತಿಕ್ರಿಯಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪ್ಯಾಂಟ್ರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆ ಪ್ರದೇಶವನ್ನು ಸ್ವಚ್ಚವಾಗಿ ಇರಿಸಬೇಕು. ಪ್ಯಾಂಟ್ರಿ ಕಾರಿನಲ್ಲಿ ಕೀಟ ಮತ್ತು ದಂಶಕಗಳ ನಿಯಂತ್ರಣಕ್ಕೆ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತವಾಗಿ ಸಲಹೆ ನೀಡಲಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ.