* ವೈನ್ ಶಾಪ್ ಮೇಲೆ ದಾಳಿ ಮಾಡಿದ ಇಲಿಗಳು
* 12 ವೈನ್ ಬಾಟಲಿಗಳನ್ನು ಖಾಲಿ ಖಾಲಿ
* ತನಿಖೆಗೆ ಆದೇಶ ಕೊಟ್ಟ ಅಧಿಕಾರಿಗಳು
* ಲಾಕ್ ಡೌನ್ ಕಾರಣಕ್ಕೆ ಮದ್ಯದಂಗಡಿ ಬಂದ್ ಮಾಡಲಾಗಿತ್ತು
ಉದಗಮಂಡಲ( ಜು. 06) ಗುಂಡಿನ ಮತ್ತೇ..ಗಮ್ಮತ್ತು.. ಅಳತೆ ಮೀರಿದರೆ ಆಪತ್ತು.. ಮದ್ಯಪ್ರಿಯರಿಗೆ ಆಗಾಗ ಈ ಮಾತು ಹೇಳುತ್ತಿರಬೇಕಾಗುತ್ತದೆ. ಆದರೆ ಇಲಿಗಳಿಗೆ! ಇಲ್ಲಿ ಇಲಿಗಳು ಚಾಲಾಕಿ ಕೆಲಸ ಮಾಡಿವೆ, ವೈನ್ ಬಾಟಲ್ ಗಳ ಮೇಲೆ ಲಗ್ಗೆ ಇಟ್ಟಿದ್ದು 12 ವೈನ್ ಬಾಟಲಿಗಳನ್ನು ಖಾಲಿ ಮಾಡಿವೆ .
ಗುಡಲುರ್ ಬಳಿ ನೀಲಗಿರಿ ಜಿಲ್ಲೆಯಲ್ಲಿ ಸರ್ಕಾರ ನಡೆಸುತ್ತಿರುವ ಲಿಕ್ಕರ್ ಮಳಿಗೆಗೆ ಲಗ್ಗೆ ಇಟ್ಟ ಇಲಿಗಳು ಅಮಲೇರಿಸಿಕೊಂಡಿವೆ.
ಎಣ್ಣೆ ಅಂಗಡಿ ಓಪನ್; ಆರತಿ ಎತ್ತಿ ಸ್ವಾಗತಿಸಿದ ವಿಡಿಯೋ ವೈರಲ್
ಕೊರೋನಾ ಕಾರಣಕ್ಕೆ ಲಿಕ್ಕರ್ ಶಾಪ್ ಬಂದ್ ಮಾಡಲಾಗಿತ್ತು. ಲಾಕ್ ಡೌನ್ ತೆರವಾದ ನಂತರ ಅಂಗಡಿ ಓಪನ್ ಮಾಡಿದಾಗ ಇಲಿಗಳ ಚಮತ್ಕಾರ ಗೊತ್ತಾಗಿದೆ. ವೈನ್ ಬಾಟಲ್ ಗಳ ಮುಚ್ಚಳಗಳು ತೆರೆದುಕೊಂಡಿದ್ದು ಇಲಿಗಳು ಮಾರ್ಕ್ ಮಾಡಿದ್ದು ಗೊತ್ತಾಗಿದೆ. 1500 ರೂ. ಮೌಲ್ಯದ ಮದ್ಯ ಇಲಿಗಳ ಪಾಲಾಗಿದೆ.
ಇಲಿಗಳು ಧವಸ-ಧಾನ್ಯ ತುಂಬಿದ ಗೋದಾಮುಗಳ ಮೇಲೆ ದಾಳಿ ಮಾಡುವುದು ಸರ್ವೆ ಸಾಮಾನ್ಯ. ಆದರೆ ಮದ್ಯದ ಆಸೆಗೆ ಬಿದ್ದು ವೈನ್ ಕುಡಿದಿರುವುದು ಮಾತ್ರ ವಿಚಿತ್ರ .