ಟಾಟಾ ನಿಧನಕ್ಕೆ ದೇಶವೇ ಭಾವುಕ: ರತನ್ ಟಾಟಾ ಲಾಸ್ಟ್‌ ಪೋಸ್ಟ್ ವೈರಲ್

By Anusha Kb  |  First Published Oct 10, 2024, 9:49 AM IST

ಉದ್ಯಮ ರತ್ನ ರತನ್ ಟಾಟಾ ಅವರ ಅಗಲಿಕೆಗೆ ಇಡೀ ಭಾರತ ಶೋಕ ವ್ಯಕ್ತಪಡಿಸುತ್ತಿದೆ. ಅವರ ಕೊನೆಯ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವುಕರಾಗಿದ್ದಾರೆ. 


ಭಾರತದ ಹೆಮ್ಮೆಯ ಪುತ್ರ, ಉದ್ಯಮ ರತ್ನ ರತನ್ ಟಾಟಾ ಅವರ ಅಗಲಿಕೆ ಇಡೀ ಭಾರತೀಯರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸಾಯುವ ಕೊನೆಕ್ಷಣದವರೆಗೂ ಸದಾ ಚಟುವಟಿಕೆಯಿಂದಲೇ ಇದ್ದ ರತನ್ ಟಾಟಾ ಅವರ ಬದುಕು ಅನೇಕರಿಗೆ ಸ್ಪೂರ್ತಿಯಾಗಿದೆ. ಅವರು ಮಾಡಿದ ಕೊನೆಯ ಟ್ವಿಟೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇತ್ತೀಚೆಗೆ ಅವರು ಅಸೌಖ್ಯರಾಗಿದ್ದಾರೆ ಎಂಬ ವಿಚಾರವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ವೇಳೆ ಸ್ವತಃ ರತನ್ ಟಾಟಾ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. 
ಸಾಮಾಜಿಕ ಜಾಲತಾಣದಲ್ಲಿ ಕೊನೆಯವರೆಗೂ ಚಟುವಟಿಕೆಯಿಂದ ಇದ್ದ ರತನ್ ಟಾಟಾ ತಮ್ಮ ಆರೋಗ್ಯದ ಬಗ್ಗೆ ಹಬ್ಬಿದ್ದ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದರು. ನನ್ನ ಬಗ್ಗೆ ಯೋಚಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. 

Tap to resize

Latest Videos

undefined

ದುಕಿಗೊಂದು ಸ್ಪೂರ್ತಿ ಬೇಕಾ, ರತನ್‌ ಟಾಟಾ ಹೇಳಿರುವ ಟಾಪ್‌-10 ಮಾತುಗಳಿವು!

ಇತ್ತೀಚೆಗೆ ನನ್ನ ಆರೋಗ್ಯದ ಬಗ್ಗೆ ಹಬ್ಬಿರುವ ಉಹಾಪೋಹಾದ ಬಗ್ಗೆ ನನಗೆ ಗೊತ್ತಾಗಿದೆ. ಈ ವಿಚಾರಗಳೆಲ್ಲವೂ ಆಧಾರರಹಿತವೆಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನನ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಚಿಂತಿಸುವಂತಹ ಯಾವುದೇ ವಿಚಾರವಿಲ್ಲ. ನಾನು ಉತ್ತಮ ಮನಸ್ಥಿತಿಯಲ್ಲಿದ್ದೇನೆ ಮತ್ತು ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯಬೇಕೆಂದು ವಿನಂತಿಸುತ್ತೇನೆ ಎಂದು ರತನ್ ಟಾಟಾ ಟ್ವಿಟ್ ಮಾಡಿದ್ದರು.

ಉಪ್ಪುವಿನಿಂದ ಹಿಡಿದು ವಿಮಾನದವರೆಗೂ ಹಬ್ಬಿರುವ ಟಾಟಾ ಸಾಮ್ರಾಜ್ಯ; ರತನ್ ಟಾಟಾ ಜೀವನ ಸಾಧನೆ

ಆಕ್ಟೋಬರ್ 7 ರಂದು ರತನ್ ಟಾಟಾ ಈ ಟ್ವಿಟ್ ಮಾಡಿದ್ದು, ಇದೇ ಅವರ ಜೀವನದ ಕೊನೆ ಟ್ವಿಟ್ಟ ಆಗಿದೆ. ಈ ಟ್ವಿಟ್‌ ಈಗ ಮತ್ತೆ ವೈರಲ್ ಆಗಿದೆ. ಟಾಟಾ ಅವರ ನಿಧನಕ್ಕೆ ಇಡೀ ದೇಶವೇ ಮರುಗುತ್ತಿದೆ. ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ಪ್ರಾಣಿ ಕಲ್ಯಾಣ ಮುಂತಾದ ವಿಷಯಗಳ ಬಗ್ಗೆ ಅವರ ಚಿಂತನೆಗಳು ಅವರ ಕಾರ್ಯಗಳು ಅನೇಕರಿಗೆ ಸ್ಪೂರ್ತಿಯಾಗಿವೆ.

Thank you for thinking of me 🤍 pic.twitter.com/MICi6zVH99

— Ratan N. Tata (@RNTata2000)


 

click me!