ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ

Published : Dec 05, 2025, 05:21 PM IST
Simone Tata

ಸಾರಾಂಶ

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ , ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್ ಚೇರ್ಮೆನ್ ಆಗಿರುವ ನೋಯೆಲ್ ಟಾಟಾ ತಾಯಿ ಸೈಮನ್ ಟಾಟಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಂಬೈ (ಡಿ.05) ರತನ್ ಟಾಟಾ ಮಲ ತಾಯಿ, ಲ್ಯಾಕ್‌ಮೆ, ವೆಸ್ಟ್‌ಸೈಡ್, ಟ್ರೆಂಟ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನರಾಗಿದ್ದಾರೆ. 95 ವಯಸ್ಸಿನ ಸೈಮನ್ ಟಾಟಾ ಕಳೆದ ಹಲವು ದಿನಗಳಿಂದ ಪಾರ್ಕಿಸನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಸೈಮನ್ ಟಾಟಾ ಆರೋಗ್ಯ ಸಂಪೂರ್ಣವಾಗಿ ಕ್ಷೀಣಿಸಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಮನ್ ಟಾಟಾ ಇಂದು ನಿಧನರಾಗಿದ್ದಾರೆ.

ದುಬೈನಿಂದ ಏರ್‌ಲಿಫ್ಟ್

ಆಗಸ್ಟ್ ತಿಂಗಳಲ್ಲಿ ಸೈಮನ್ ಟಾಟಾ ಪಾರ್ಕಿಸನ್ ಆರೋಗ್ಯ ಸಮಸ್ಯೆಯಿಂದ ತೀವ್ರ ಆಸ್ವಸ್ಥಗೊಂಡಿದ್ದರು. ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಮನ್ ಟಾಟಾ ಅವರನ್ನು ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಮಹಿಳಾ ಉದ್ಯಮಿ ಸೈಮನ್ ಟಾಟಾ. ಸ್ವಿಟ್ಜರ್ಲೆಂಡ್‌ನಲ್ಲಿ ಜನಿಸಿದ ಸೈಮನ್ ಟಾಟಾ ಭಾರತಕ್ಕೆ ಪ್ರವಾಸಕ್ಕೆ ಬಂದು ಬಳಿಕ ಇಲ್ಲಿಯವರಾಗಿ ಉಳಿದರು.

ರತನ್ ಟಾಟಾ ಅಂತ್ಯಸಂಸ್ಕಾರದಲ್ಲಿ ಕಾಣಿಸಿಕೊಂಡಿದ್ದ ಸೈಮನ್

ಸೈಮನ್ ಟಾಟಾ ಕೆಲ ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. 2006ರ ಬಳಿಕ ಸೈಮನ್ ಟಾಟಾ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಅದರಲ್ಲೂ 2020ರ ಬಳಿಕ ಸೈಮನ್ ಟಾಟಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. 2024ರಲ್ಲಿ ಅಕ್ಟೋಬರ್ ತಿಂಗಳಲ್ಲಿ ರತನ್ ಟಾಟಾ ನಿಧನರಾದಾಗ ಅಂತ್ಯಸಂಸ್ಕಾರದಲ್ಲಿ ಸೈಮನ್ ಟಾಟಾ ಕಾಣಿಸಿಕೊಂಡಿದ್ದರು. ಇದು ಕೊನೆಯದಾಗಿ ಸೈಮನ್ ಟಾಟಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ರತನ್ ಟಾಟಾ ಮಲತಾಯಿಯಾಗಿದ್ದ ಸೈಮನ್ ಟಾಟಾ ಮೇಲೆ ವಿಶೇಷ ಪ್ರೀತಿ ಇತ್ತು. ರತನ್ ಟಾಟಾ ನಿಧನದ ಬಳಿಕ ಸೈಮನ್ ಟಾಟಾ ಪುತ್ರ ನೋಯೆಲ್ ಟಾಟಾ ಸದ್ಯ ಟಾಟಾ ಟ್ರಸ್ಟ್ ಸಂಸ್ಥೆಯ ಚೇರ್ಮನ್ ಆಗಿದ್ದಾರೆ.

ನವಲ್ ಟಾಟಾ ವರಿಸಿದ್ದ ಸೈಮನ್

ಭಾರತಕ್ಕೆ ಪ್ರವಾಸ ಬಂದ ಸೈಮನ್, ಭಾರತದ ಪ್ರಸಿದ್ಧ ಉದ್ಯಮಿಯಾಗಿದ್ದ ನವಲ್ ಟಾಟಾ ಪರಿಚಯವಾಗಿತ್ತು. ಈ ವೇಳೆ ನವಲ್ ಟಾಟಾ ವಿಚ್ಚೇದನ ಪಡೆದುಕೊಂಡಿದ್ದು. ತನಗಿಂತ 26 ವರ್ಷ ಹಿರಿಯರಾಗಿದ್ದ ನವಲ್ ಟಾಟಾ ವರಿಸಿದ ಸೈಮನ್ ಟಾಟಾ ಮುಂಬೈನಲ್ಲೇ ಉಳಿದುಕೊಂಡರು.

ಲ್ಯಾಕ್‌ಮೇ ಸೇರಿ ಫ್ಯಾಶನ್ ಬ್ರ್ಯಾಂಡ್ ಹುಟ್ಟು ಹಾಕಿದ ಸಾಧಕಿ

ಇಂದು ಫ್ಯಾಶನ್ ಜಗತ್ತಿನಲ್ಲಿ ಲ್ಯಾಕ್‌ಮೆ ಅತೀ ದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಆದರೆ ಇದನ್ನು ಆರಂಭಿಸಿದ್ದು ಇದೇ ಸೈಮನ್ ಟಾಟಾ. ವೆಸ್ಟ್‌ಸೈಡ್, ಟ್ರೆಂಟ್ ಸೇರಿದಂತೆ ಹಲವು ಉತ್ಪನ್ನಗಳನ್ನು ಆರಂಭಿಸಿದ್ದು ಮಾತ್ರವಲ್ಲ, ಜಗತ್ತಿನ ಟಾಪ್ ಬ್ರ್ಯಾಂಡ್ ಆಗಿ ಮಾಡಿದ ಕೀರ್ತಿಯೂ ಇದೇ ಸೈಮನ್ ಟಾಟಾಗೆ ಸಲ್ಲಲಿದೆ. ಲ್ಯಾಕ್‌ಮೆ ಫ್ಯಾಶನ್ ಬ್ರ್ಯಾಂಡ್‌ನ್ನು ಟಾಟಾ ಗ್ರೂಪ್ 1996ರಲ್ಲಿ ಹಿಂದುಸ್ತಾನ್ ಲಿವರ್ ಸಂಸ್ಥೆಗೆ ಮಾರಾಟ ಮಾಡಿತ್ತು. ಅಲ್ಲೀವರೆಗೂ ಸೈಮನ್ ಟಾಟಾ ಚೇರ್ಮೆನ್ ಆಗಿ ಮುನ್ನಡಿಸಿದ್ದರು. 2006ರ ವರೆಗೆ ಟ್ರೆಂಟ್ ಲಿಮಿಟೆಡ್ ಸಂಸ್ಥೆಯ ಚೇರ್ಮೆನ್ ಆಗಿ ಸೇವೆ ಸಲ್ಲಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು