ನಿಮ್ಮ ನೆರವು ಬೇಕಿದೆ, ಕೂಡುಗೈ ದಾನಿ ರತನ್ ಟಾಟಾ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಮನವಿ!

By Chethan Kumar  |  First Published Jun 27, 2024, 11:25 AM IST

ರತನ್ ಟಾಟಾ ಇದೇ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಸಹಾಯ ಬೇಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚುವುದರಲ್ಲಿ ರತನ್ ಟಾಟಾ ಮುಂಚೂಣಿಯಲ್ಲಿದ್ದಾರೆ. ಆದರೆ ಇದೀಗ ತುರ್ತಾಗಿ ನೆರವಿನ ಅಗತ್ಯವಿದೆ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ. ರತನ್ ಟಾಟಾ ಈ ರೀತಿ ಮನವಿ ಮಾಡಿದ್ದು ಯಾಕೆ?


ಮುಂಬೈ(ಜೂ.27) ಉದ್ಯಮಿ ರತನ್ ಟಾಟಾ ಶ್ರೀಮಂತ ಉದ್ಯಮಿ. ಆದರೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ರತನ್ ಟಾಟಾ ಎಲ್ಲರ ಅಚ್ಚುಮೆಚ್ಚು. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೇಣಿಯಾಗಿ ನೀಡಿದ್ದಾರೆ. ಇದೊಂದೆ ಅಲ್ಲ ಪ್ರತಿ ಭಾರಿ ಭಾರತಕ್ಕೆ ಸಂಕಷ್ಟ ಎದುರಾದಾಗ ರತನ್ ಟಾಟಾ ನೆರವು ನೀಡಿದ್ದಾರೆ. ಇದೇ ಮೊದಲ ಬಾರಿಗೆ ರತನ್ ಟಾಟಾ ಸಾರ್ವಜನಿಕರಲ್ಲಿ ನರೆವು ಕೇಳಿದ್ದಾರೆ. ಹೌದು, ಒಂದು ನಾಯಿಯ ಪ್ರಾಣ ಉಳಿಸಲು ರತನ್ ಟಾಟಾ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ. 

ರತನ್ ಟಾಟಾ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಸಹಾಯ ಕೋರಿದ್ದಾರೆ. 7 ತಿಂಗಳ ನಾಯಿ ಮರಿಯೊಂದನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ನಾಯಿ ಪ್ರಾಣ ಉಳಿಸಲು ಯಾರಾದರೂ ನಾಯಿ ರಕ್ತ ದಾನ ಮಾಡಬೇಕಿದೆ. ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ.

Latest Videos

ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!

ನನಗೆ ನಿಮ್ಮ ನೆರವು ಬೇಕಿದೆ. 7 ತಿಂಗಳ ನಾಯಿ ಮರಿಯೊಂದು ನಮ್ಮ ಪ್ರಾಣಿಗಳ ಆಸ್ಪತ್ರೆಯಲ್ಲಿ ದಾಖಲಾಗಿದೆ. ಈ ನಾಯಿಗೆ ತುರ್ತಾಗಿ ರಕ್ತ ನೀಡಬೇಕು.  ಜ್ವರ ಹಾಗೂ ಇತರ ಕೆಲ ಆರೋಗ್ಯ ಸಮಸ್ಯೆಯಿಂದ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮಗೆ ಈಗ ಮುಂಬೈನಲ್ಲಿ  ತುರ್ತಾಗಿ ನಾಯಿಯ ರಕ್ತದಾನ ಮಾಡುವರು ಬೇಕಾಗಿದ್ದಾರೆ. ರಕ್ತದಾನ ಮಾಡುವ ನಾಯಿ ಆರೋಗ್ಯವಾಗಿರಬೇಕ. 1 ರಿಂದ 8 ವರ್ಷದೊಳಗಿರಬೇಕು. ಕನಿಷ್ಠ 25 ಕೆಜಿ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಸಂಪೂರ್ಣ ಲಸಿಕೆ ಪಡೆದಿರಬೇಕು. ಇತರ ಯಾವದೇ ಸಮಸ್ಯಗಳು ಇರಬಾರದು. ಕಳೆದ 6 ತಿಂಗಳಲ್ಲಿ ಜ್ವರ ಸೇರಿದಂತೆ ಇತರ ಸೋಂಕಿನಿಂದ ಬಳಲಿರಬಾರದು. ಈ ಮಾನದಂಡಗಳನ್ನು ಹೊಂದಿರುವ ಸಾಕು ನಾಯಿಗಳಿದ್ದರೆ ರಕ್ತ ದಾನ ಮಾಡಲು ತಕ್ಷಣವೇ ಸಂಪರ್ಕಿಸಿ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Ratan Tata (@ratantata)

 

 ರತನ್ ಟಾಟಾ ಈ ಪೋಸ್ಟ್ ಹಾಕಿದ ಬೆನ್ನಲ್ಲೇ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಹಲವರು ಕಮೆಂಟ್ ಮಾಡಿದ್ದಾರೆ. ನಾನು ತಯಾರಿದ್ದೇನೆ, ಸಂಪರ್ಕಿಸಿದ್ದೇನೆ ಎಂದು ಪ್ರತಿಕ್ರಿಯೆಸಿದ್ದಾರೆ. ಶ್ರೀಮಂತ ಉದ್ಯಮಿ ರತನ್ ಟಾಟಾ ಮನವಿ ಮಾಡಿದರೆ ಇಡೀ ಭಾರತವೇ ನಿಮ್ಮ ಹಿಂದೆ ನಿಲ್ಲಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ರತನ್ ಟಾಟಾ ಅವರ 165,00,00,000 ರೂ. ವೆಚ್ಚದ ಪ್ರಾಣಿಗಳ ಆಸ್ಪತ್ರೆ ಕಾರ್ಯಾಚರಣೆಗೆ ಸಿದ್ಧ!

ರತನ್ ಟಾಟಾ  ವಿಶೇಷ ಆಸಕ್ತಿಯಿಂದ ಮುಂಬೈನಲ್ಲಿ ಟಾಟಾ ಟ್ರಸ್ಟ್ ಪ್ರಾಣಿಗಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಬೀದಿ ನಾಯಿಗಳಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ನಾಯಿಗಳ ಕುರಿತು ವಿಶೇಷ ಪ್ರೀತಿ ಹೊಂದಿರು ರತನ್ ಟಾಟಾ, ಐಷಾರಾಮಿ ತಾಜ್ ಹೊಟೆಲ್ ಪಕ್ಕದಲ್ಲಿ, ಒಳಗೆ ಬೀದಿ ನಾಯಿಗಳು ಆಶ್ರಯ ಪಡೆದಿದ್ದರೆ, ಅವುಗಳನ್ನು ಓಡಿಸಬಾರದು ಎಂದು ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
 

click me!