ಅಯ್ಯೋ ದೇವರೇ, ಉತ್ತರ ಪ್ರದೇಶದ ಈ ಕಾಡಲ್ಲಿ ಹಾರುವ ಅಳಿಲು ಕಂಡು ಎಲ್ಲರೂ ಶಾಕ್!

Published : Mar 09, 2025, 12:46 PM ISTUpdated : Mar 09, 2025, 01:27 PM IST
ಅಯ್ಯೋ ದೇವರೇ, ಉತ್ತರ ಪ್ರದೇಶದ ಈ ಕಾಡಲ್ಲಿ ಹಾರುವ ಅಳಿಲು ಕಂಡು ಎಲ್ಲರೂ ಶಾಕ್!

ಸಾರಾಂಶ

Rare Flying Squirrel Sighting at Dudhwa National Park: ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಮೊದಲ ಬಾರಿಗೆ ಹಾರುವ ಅಳಿಲು ಕಾಣಿಸಿಕೊಂಡಿದೆ. ಅರಣ್ಯ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ, ಪ್ರವಾಸಿಗರಿಗೆ ಹೊಸ ಆಕರ್ಷಣೆ.

Rare Flying Squirrel Sighting in Dudhwa National Park Uttar Pradesh: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿರುವ ದುಧ್ವಾ ರಾಷ್ಟ್ರೀಯ ಉದ್ಯಾನವನವು ತನ್ನ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ದಟ್ಟ ಕಾಡುಗಳಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಕಾಣಬಹುದು. ಆದರೆ ಈ ಬಾರಿ ಕಂಡುಬಂದ ದೃಶ್ಯವು ಅರಣ್ಯ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ. ದುಧ್ವಾ ಕಾಡುಗಳಲ್ಲಿ ಮೊದಲ ಬಾರಿಗೆ ಹಾರುವ ಅಳಿಲು ಕಾಣಿಸಿಕೊಂಡಿದೆ, ಇದು ಅತ್ಯಂತ ಅಪರೂಪದ ಪ್ರಭೇದವೆಂದು ಪರಿಗಣಿಸಲ್ಪಟ್ಟಿದೆ. ಈ ರೋಮಾಂಚಕಾರಿ ಆವಿಷ್ಕಾರದ ನಂತರ ಅರಣ್ಯ ಇಲಾಖೆಯಲ್ಲಿ ಸಂತಸ ಮನೆ ಮಾಡಿದೆ.

ಹಾರುವ ಅಳಿಲಿನ ಅಪರೂಪದ ನೋಟ ಕ್ಯಾಮೆರಾದಲ್ಲಿ ಸೆರೆ

ದುಧ್ವಾ ರಾಷ್ಟ್ರೀಯ ಉದ್ಯಾನವನದ ದಕ್ಷಿಣ ಸೋನಾರಿಪುರ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ತಂಡಕ್ಕೆ ಬಿಳಿ ಹೊಟ್ಟೆಯ ಹಾರುವ ಅಳಿಲು ಇದ್ದಕ್ಕಿದ್ದಂತೆ ಮರಗಳ ನಡುವೆ ಹಾರುತ್ತಿರುವುದು ಕಂಡುಬಂದಿದೆ. ಈ ಅದ್ಭುತ ದೃಶ್ಯವನ್ನು ನೋಡಿದ ತಂಡದ ಸದಸ್ಯರು ಮೊದಲಿಗೆ ಪಕ್ಷಿ ಎಂದು ಭಾವಿಸಿದರು. ಆದರೆ ಅದು ಪಕ್ಷಿಯಂತೆ ಕಾಣದೆ ಅಳಿಲು ಎಂಬುದು ತಿಳಿದು ಬೆಚ್ಚಿಬಿದ್ದರು. ಯಾಕೆಂದರೆ ಅಳಿಲುಗಳು ಹಾರಾಟ ಮಾಡುವುದಿಲ್ಲ. ಅವುಗಳಿಗೆ ರಕ್ಕೆಗಳಿಲ್ಲ, ಪಕ್ಷಿಗಳಲ್ಲ. ಹೀಗಿರುವಾಗ ಪತ್ತೆಯಾದ ಅಳಿಲು ಹಾರುವುದು ಕಂಡು ಮೂಕವಿಸ್ಮಿತರಾಗಿ ನೋಡುತ್ತಾ ನಿಂತ ಸಿಬ್ಬಂದಿ, ಈ ವೇಳೆ ತಮ್ಮ ಬಳಿ ಇದ್ದ ಕ್ಯಾಮೆರಾ ತೆಗೆದು ತಕ್ಷಣ ಅದನ್ನು  ಸೆರೆಹಿಡಿದು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬೊಬ್ರವಾಡದಲ್ಲಿ ಎಲ್ಲರ ಗಮನ ಸೆಳೆದ ಹಾರುವ ರತ್ನ!

ಅರಣ್ಯ ಇಲಾಖೆಯ ಪ್ರಕಾರ, ಈ ಅಳಿಲು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿದೆ (Schedule I Species), ಆದರೆ ಈಗ ಮತ್ತೆ ಕಾಣಿಸಿಕೊಂಡಿರುವುದು ಈ ಪ್ರಭೇದದ ಸಂಖ್ಯೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು.

ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು

ದುಧ್ವಾ ರಾಷ್ಟ್ರೀಯ ಉದ್ಯಾನವನವು ಹುಲಿ, ಚಿರತೆ, ಘೇಂಡಾಮೃಗ, ಆನೆ ಮತ್ತು ಜಿಂಕೆಗಳಂತಹ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ, ಆದರೆ ಈಗ ಹಾರುವ ಅಳಿಲು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಬಹುದು. ಇಲ್ಲಿಗೆ ಪ್ರತಿ ವರ್ಷ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಜಂಗಲ್ ಸಫಾರಿಗಾಗಿ ಬರುತ್ತಾರೆ. ಜಿಪ್ಸಿಯಲ್ಲಿ ಕುಳಿತು ಕಾಡಿನಲ್ಲಿ ಸುತ್ತಾಡುವ ಪ್ರವಾಸಿಗರು ಈಗ ಹಾರುವ ಅಳಿಲಿನ ಅಪರೂಪದ ನೋಟವನ್ನು ನೋಡಬಹುದು.

ಇದನ್ನೂ ಓದಿ:  ಉಡುಪಿ: ಅಪರೂಪದ ಹಾರುವ ಹಾವು ಪತ್ತೆ..!

ಏನಿದು ಹಾರುವ ಅಳಿಲು ಮತ್ತು ಇದು ಹೇಗೆ ಹಾರುತ್ತದೆ?

ಹಾರುವ ಅಳಿಲು ನಿಜವಾಗಿಯೂ ಸಂಪೂರ್ಣವಾಗಿ ಹಾರಲು ಸಾಧ್ಯವಿಲ್ಲ, ಆದರೆ ಅದರ ಮುಂಭಾಗ ಮತ್ತು ಹಿಂಭಾಗದ ಕಾಲುಗಳ ನಡುವೆ ತೆಳುವಾದ ಪೊರೆಯಿದ್ದು, ಅದು ಗಾಳಿಯಲ್ಲಿ ಉದ್ದನೆಯ ಜಿಗಿತವನ್ನು ಮಾಡಲು ಸಹಾಯ ಮಾಡುತ್ತದೆ. ಈ ಪೊರೆಯು ಪ್ಯಾರಾಚೂಟ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಈ ಅಳಿಲು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುವಂತೆ ಭಾಸವಾಗುತ್ತದೆ. ಅದು ಗಾಳಿಯಲ್ಲಿ ತೇಲುತ್ತಿರುವಾಗ ನೋಡಲು ಅದ್ಭುತವಾಗಿರುತ್ತದೆ. ದುಧ್ವಾದಲ್ಲಿ ಹಾರುವ ಅಳಿಲು ಕಾಣಿಸಿಕೊಂಡಿರುವುದು ವನ್ಯಜೀವಿ ಪ್ರೇಮಿಗಳು ಮತ್ತು ಸಂಶೋಧಕರಲ್ಲಿ ಉತ್ಸಾಹವನ್ನು ಮೂಡಿಸಿದೆ. ಮುಂಬರುವ ದಿನಗಳಲ್ಲಿ ಈ ಪ್ರಭೇದದ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!