ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸ್‌: ವೈರಲ್ ವೀಡಿಯೋ

Published : Mar 09, 2025, 12:00 PM ISTUpdated : Mar 10, 2025, 11:01 AM IST
ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸ್‌: ವೈರಲ್ ವೀಡಿಯೋ

ಸಾರಾಂಶ

ಮಹಾರಾಷ್ಟ್ರದ ಬೊರಿವಾಲಿ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ಇಳಿಯಲು ಹೋಗಿ ಮಹಿಳೆಯೊಬ್ಬರು ಅಪಾಯಕ್ಕೆ ಸಿಲುಕಿದ್ದರು. ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಲಿಸುವ ರೈಲನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೆ ಇಲಾಖೆ ರೈಲು ನಿಲ್ದಾಣಗಳಲ್ಲಿ ಪ್ರತಿದಿನವೂ ಘೋಷಣೆ ಮಾಡುವ ಮೂಲಕ ಪ್ರಯಾಣಿಕರನ್ನು ಎಚ್ಚರಿಸುತ್ತಲೇ ಇರುತ್ತದೆ. ಆದರೆ ಜನರು ಮಾತ್ರ ಈ ಎಚ್ಚರಿಕೆಯನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ. ನಿರ್ಲಕ್ಷಿಸುವ ಜೊತೆಗೆ ತಮ್ಮ ಜೀವಕ್ಕೆ ತಾವೇ ಅಪಾಯ ತಂದುಕೊಳ್ಳುತ್ತಾರೆ. ಈ ರೀತಿ ಮಾಡಿ ಹಲವರು ಈಗಾಗಲೇ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಪ್ರಾಣವನ್ನೇ ಬಿಟ್ಟಿದ್ದರೆ. ಆದರೂ ಜನ ರೈಲು ಮಿಸ್ಸಾಗುತ್ತದೆ ಎಂಬ ಭಯದಲ್ಲಿ ಆತುರಾತುರವಾಗಿ ಓಡಿ ಬಂದು ಇನ್ನೇನು ಅನಾಹುತ ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಚಲಿಸುವ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದಿದ್ದು,. ರೈಲ್ವೆ ಪೊಲೀಸರೊಬ್ಬರ ಸಮಯಪ್ರಜ್ಞೆಯಿಂದ ಅಚಾನಕ್ ಆಗಿ ಏನು ತೊಂದರೆಯಾಗದೇ ಬದುಕುಳಿದಿದ್ದಾರೆ.  ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲ್ವೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

ವೈರಲ್ ವೀಡಿಯೋದಲ್ಲೇನಿದೆ?
ಮಹಾರಾಷ್ಟ್ರದ ಬೊರಿವಾಲಿ ರೈಲ್ವೆ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದ್ದು, ರೈಲ್ವೆಯ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದೆ. ಮಹಿಳೆಯೊಬ್ಬರು ಚಲಿಸುವ ರೈಲಿನಿಂದ ಇಳಿಯಲು ನೋಡಿದ್ದು, ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದಾರೆ. ಇದನ್ನು ನೋಡಿ ಕೂಡಲೇ ಓಡಿ ಹೋದ ರೈಲ್ವೆ ಪೊಲೀಸ್‌ ರೈಲಿನ ಹಳಿಗೆ ಬೀಳುತ್ತಿದ್ದ ಆಕೆಯನ್ನು ಹಿಡಿದು ಮೇಲೆಳೆದು ರಕ್ಷಣೆ ಮಾಡಿದ್ದಾರೆ. ಒಂದು ವೇಳೆ ಅಲ್ಲಿ ರೈಲ್ವೆ ಪೊಲೀಸ್ ಬಾರದೇ ಹೋಗಿದ್ದರೆ ಮಹಿಳೆ ರೈಲ್ವೆ ಫ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವೆ ಸಿಕ್ಕಿ ಅಪ್ಪಚಿಯಾಗುತ್ತಿದ್ದಿದ್ದಂತು ಪಕ್ಕ. 

ಚೈನ್‌ ಎಳೆಯುವ ವ್ಯವಸ್ಥೆ ಇಲ್ಲ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಂದೇ ಭಾರತ್‌ ಟ್ರೇನ್‌ಅನ್ನು ನಿಲ್ಲಿಸೋದು ಹೇಗೆ?

ವೀಡಿಯೋ ಪೋಸ್ಟ್‌ ಮಾಡಿ ಎಚ್ಚರಿಸಿದ ರೈಲ್ವೆ

ಈ ವೀಡಿಯೋವನ್ನು ನಂತರ ರೈಲ್ವೆ ಸಚಿವಾಲಯ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಚಲಿಸುವ ರೈಲಿನಿಂದ ಇಳಿಯುವ ಅಥವಾ ಹತ್ತುವ ಸಾಹಸ ಮಾಡದಂತೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಮಹಾರಾಷ್ಟ್ರದ ಬೊರಿವಿಲಿ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುವ ರೈಲಿನಿಂದ ಇಳಿಯಲು ಹೋಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಅಲ್ಲೇ ಇದ್ದ ರೈಲ್ವೆ ಭದ್ರತಾ ಸಿಬ್ಬಂದಿ ಕೂಡಲೇ ಆಕೆಯ ಸಹಾಯಕ್ಕೆ ಧಾವಿಸಿ ಹೋಗಿ ಆಕೆಯನ್ನು ರಕ್ಷಿಸಿದರು, ದಯವಿಟ್ಟು ಯಾರು ಕೂಡ ಚಲಿಸುವ ರೈಲಿನಿಂದ ಇಳಿಯುವ ಪ್ರಯತ್ನ ಮಾಡಬೇಡಿ ಎಂದು ರೈಲ್ವೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಿ ಮನವಿ ಮಾಡಿದೆ. 

ನೆಟ್ಟಿಗರಿಂದ ಶ್ಲಾಘನೆ

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕೆಲಸ ಈ ವ್ಯಕ್ತಿಗೆ ಪ್ರಶಸ್ತಿ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಮೆಚ್ಚಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಅಧಿಕಾರಿಗೆ ಗೌರವ ಸಿಗಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮಾಡಬಾರದ ಕೆಲಸ ಮಾಡಿದ ರೈಲ್ವೆ ಉದ್ಯೋಗಿ: ವೀಡಿಯೋ ವೈರಲ್

ವೀಡಿಯೋ ಇಲ್ಲಿದೆ ನೋಡಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು