
ಲಂಡನ್(ಡಿ.04): ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಿ, ಮಹಾರಾಷ್ಟ್ರದಲ್ಲಿ ಕ್ಯುಆರ್ ಕೋಡ್ ಆಧರಿತ ಪಠ್ಯ ಪರಿಚಯಿಸಿದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ರಣಜಿತ್‌ಸಿನ್ಹ್ ದಿಸಾಲೆ ಅವರಿಗೆ ಬರೋಬ್ಬರಿ 7.5 ಕೋಟಿ ರುಪಾಯಿ ನಗದು ಬಹುಮಾನ ಹೊಂದಿರುವ ಜಾಗತಿಕ ಶಿಕ್ಷಕ ಪ್ರಶಸ್ತಿ ಲಭಿಸಿದೆ.
2014ರಲ್ಲಿ ವಾರ್ಕಿ ಫೌಂಡೇಷನ್ ಸ್ಥಾಪಿಸಿದ್ದ ಜಾಗತಿಕ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿಗೆ ವಿಶ್ವದ ವಿವಿಧೆಡೆಯ 10 ಮಂದಿ ಪ್ರವೇಶಿಸಿದ್ದರು. ಆ ಪೈಕಿ ರಣಜಿತ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಹುಮಾನದ ಪೈಕಿ ಅರ್ಧದಷ್ಟುಮೊತ್ತವನ್ನು ಸಹಸ್ಪರ್ಧಿಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ 9 ಮಂದಿ ಸ್ಪರ್ಧಿಗಳಿಗೆ ತಲಾ 40 ಲಕ್ಷ ರು. ಲಭಿಸಲಿದೆ.
KAS ನೇಮಕ ಲೋಪ: ಸರಿಪಡಿಸದಿದ್ರೆ KPSC ವಿರುದ್ಧ ನ್ಯಾಯಾಂಗ ನಿಂದನೆ
ರಣಜಿತ್ ಅವರು ಶಾಲಾ ಪಠ್ಯವನ್ನು ಮಕ್ಕಳ ಮಾತೃಭಾಷೆಗೆ ಅನುವಾದಿಸಿದ್ದರು. ಆಡಿಯೋ ಗೀತೆ, ವಿಡಿಯೋ ಪಾಠ, ಕತೆಗಳನ್ನು ಮಕ್ಕಳು ಕೇಳುವಂತಾಗಲು ಕ್ಯುಆರ್ ಕೋಡ್ ಅಳವಡಿಸಿದ್ದರು. ಮಹಾರಾಷ್ಟ್ರ ಸರ್ಕಾರ ಈ ಪಠ್ಯವನ್ನು ಅಳವಡಿಸಿಕೊಂಡಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಾಥಮಿಕ ಶಾಲಾ ಶಿಕ್ಷಕ ರಣಜಿತ್‌ಸಿನ್ಹ್ ದಿಸಾಲೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ