ರಾಮಮಂದಿರ ನಿರ್ಮಾಣ ಪೂರ್ಣ : ಮೊದಲ ಮಹಡಿ ಚಿತ್ರ ಬಿಡುಗಡೆ

Kannadaprabha News   | Kannada Prabha
Published : Oct 16, 2025, 04:41 AM IST
Ayodhya

ಸಾರಾಂಶ

ಇಲ್ಲಿನ ಪ್ರಸಿದ್ಧ ರಾಮಮಂದಿರದ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ನ.25ಕ್ಕೆ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದೆ. ಈ ನಡುವೆ, ದೇಗುಲದ ಮೊದಲ ಅಂತಸ್ತಿನ ವಿಹಂಗಮ ಚಿತ್ರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಬಿಡುಗಡೆ ಮಾಡಿದೆ.

ಅಯೋಧ್ಯೆ: ಇಲ್ಲಿನ ಪ್ರಸಿದ್ಧ ರಾಮಮಂದಿರದ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ನ.25ಕ್ಕೆ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದೆ. ಈ ನಡುವೆ, ದೇಗುಲದ ಮೊದಲ ಅಂತಸ್ತಿನ ವಿಹಂಗಮ ಚಿತ್ರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಬಿಡುಗಡೆ ಮಾಡಿದೆ.

ಮೊದಲ ಮಹಡಿಯಲ್ಲಿ ನೃತ್ಯಮಂಟಪ, ರಂಗಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪ ಎಂಬ 5 ಸಭಾಂಗಣಗಳನ್ನು ರೂಪಿಸಲಾಗಿದೆ. ಇವುಗಳ ಹೃದಯಭಾಗದಲ್ಲಿ ಶ್ರೀರಾಮನ ಅದ್ಧೂರಿ ಆಸ್ಥಾನವನ್ನು ನಿರ್ಮಿಸಲಾಗಿದ್ದು, ರಾಮ, ಸೀತೆ, ಹನುಮಂತ, ಭರತ, ಲಕ್ಷ್ಮಣ, ಶತ್ರುಘ್ನರ ಅಮೃತಶಿಲೆಯ ವಿಗ್ರಹಗಳನ್ನು ಕೆತ್ತಲಾಗಿದೆ. ರಾಮ ಮತ್ತು ಸೀತೆ ಚಿನ್ನಲೇಪಿತ ಸಿಂಹಾಸನದ ಮೇಲೆ ಕುಳಿತಿದ್ದರೆ, ಹನುಮಂತ ಮತ್ತು ಭರತ ಪಾದದ ಬಳಿ ಕುಳಿತಿದ್ದಾರೆ. ಲಕ್ಷ್ಮಣ ಮತ್ತು ಶತ್ರುಘ್ನ ಹಿಂದೆ ವಿಧೇಯರಾಗಿ ನಿಂತಂತೆ ನಿರ್ಮಿಸಲಾಗಿದೆ.

ಇದೊಂದೇ ಮಹಡಿಯಲ್ಲಿ, ಅದ್ಭುತ ಕಲಾವಂತಿಕೆಯಿಂದ ಕೂಡಿದ ಸುಮಾರು 140 ಕಂಬಗಳನ್ನು ಕೆತ್ತಲಾಗಿದೆ. ಇಡೀ ದೇಗುಲದಲ್ಲಿ ಇಂಥ ಒಟ್ಟು 392 ಕಂಬಗಳಿವೆ. ಇವುಗಳ ಮೇಲೆ ರಾಮಾಯಣ ಹಾಗೂ ಹಿಂದೂ ಪುರಾಣಗಳ ಚಿತ್ರಗಳನ್ನು ಕೆತ್ತಲಾಗಿದೆ. ಇಡೀ ಅಂತಸ್ತಿನಲ್ಲಿ ಅಮೂಲ್ಯವಾದ ಶಿಲೆಗಳನ್ನು ಬಳಸಿ ಭಾರತೀಯ ಸಂಸ್ಕೃತಿ, ಕಲೆ, ಇತಿಹಾಸಗಳನ್ನು ಬಿಂಬಿಸುವ ಅಪರೂಪದ ವಿನ್ಯಾಸಗಳ ಕೆತ್ತನೆ ಮಾಡಲಾಗಿದೆ. ಆದರೆ ಇಲ್ಲಿನ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಈ ಅಂತಸ್ತಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್