ಅಬ್ದುಲ್ ಕಲಾಂ ಬಳಿಕ ರೈಲು ಹತ್ತಿದ ಭಾರತದ ಮೊದಲ ರಾಷ್ಟ್ರಪತಿ; ಹುಟ್ಟೂರಿನತ್ತ ಕೋವಿಂದ್ ಪ್ರಯಾಣ!

By Suvarna NewsFirst Published Jun 25, 2021, 3:51 PM IST
Highlights
  • ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪತ್ನಿ ಹುಟ್ಟೂರಿಗೆ ಪ್ರಯಾಣ
  • ದೆಹಲಿಯಿಂದ ಕಾನ್ಪುರಕ್ಕೆ ರೈಲಿನ ಮೂಲಕ ಪ್ರಯಾಣ
  • 15 ವರ್ಷಗಳ ಬಳಿಕ ರೈಲು ಪ್ರಯಾಣ ಮಾಡುತ್ತಿರುವ ಭಾರತದ ರಾಷ್ಟ್ರಪತಿ 

ನವದೆಹಲಿ(ಜೂ.25): ಈಗಿನ ಕಾಲದಲ್ಲಿ ರಾಷ್ಟ್ರಪತಿ, ಪ್ರಧಾನಿ, ಜನ ನಾಯಕರು, ಅಷ್ಟೇ ಯಾಕೆ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣಿಸುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ವಿಮಾನ, ಹೆಲಿಕಾಪ್ಟರ್, ಕಾರಿನ ಮೂಲಕ ಪ್ರಯಾಣ ಮಾಡುತ್ತಾರೆ. ನಾಯಕರಿಗೆ ಈ ಅವಕಾಶವೂ ಇದೆ, ಜೊತೆಗೆ ಸುರಕ್ಷತೆ ಸೇರಿದಂತೆ ಹಲವು ಕಾರಣಗಳೂ ಇದೆ.  ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಹುಟ್ಟೂರಿಗೆ ರಾಮನಾಥ್ ಕೋವಿಂದ್ ಹಾಗೂ ಪತ್ನಿ ರೈಲಿನ ಮೂಲಕ ಪ್ರಯಾಣಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ ರಾಷ್ಟ್ರಪತಿ!

ರಾಮನಾಥ್ ಕೋವಿಂದ್ ತಮ್ಮ ಹುಟ್ಟೂರಾದ ಕಾನ್ಪುರಕ್ಕೆ ಪತ್ನಿ ಸುನೀತಾ ದೇವಿ ಕೋವಿಂದ್ ಜೊತೆ ರೈಲು ಪ್ರಯಾಣ ಬೆಳೆಸಿದ್ದಾರೆ. ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಲ್ಲಿ ಕೋವಿಂದ್ ವಿಶೇಷ ರೈಲು ಹತ್ತಿದರು. ರಾಷ್ಟ್ರಪತಿಯನ್ನು ಬೀಳ್ಕೊಡಲು ರೈಲ್ವೇ ಸಚಿವ ಪಿಯೂಷ್ ಗೋಯಲ್ ರೈಲ್ವೇ ಬೋರ್ಡ್ ಚೇರ್ಮೆನ್ ಸುನೀತಾ ಶರ್ಮಾ ಕೂಡ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. 

 

President Kovind boards a special Presidential train from Safdarjung railway station to Kanpur. The train will make two stop-overs, at Jhinjhak and Rura of Kanpur Dehat, and will reach Kanpur Central in the evening. pic.twitter.com/ZuMpkGjqxP

— President of India (@rashtrapatibhvn)

15 ವರ್ಷಗಳ ಬಳಿಕ ಭಾರತದ ರಾಷ್ಟ್ರಪತಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೂ ಮೊದಲು 2006ರಲ್ಲಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರೈಲು ಪ್ರಯಾಣ ಮಾಡಿದ್ದರು.  ಭಾರತೀಯ ಸೇನೆಯ ಪಾಸಿಂಗ್ ಔಟ್ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅಬ್ದುಲ್ ಕಲಾಂ ದೆಹಲಿಯಿಂದ ಡೆಹ್ರಡೂನ್‌ಗೆ ರೈಲಿನ ಮೂಲಕ ಪ್ರಯಾಣ ಮಾಡಿದ್ದರು.

ಕ್ಷಿಪಣಿ ದಾಳಿ ತಡೆಯುವ ವಿಮಾನದಲ್ಲಿ ರಾಷ್ಟ್ರಪತಿ ಮೊದಲ ಪ್ರಯಾಣ!.

ಇದಾದ 15 ವರ್ಷದ ಬಳಿಕ ಇದೀಗ ರಾಮನಾಥ್ ಕೋವಿಂದ್ ರೈಲು ಪ್ರಯಾಣ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ರಾಮನಾಥ್ ಕೋವಿಂದ್ ಹುಟ್ಟೂರಿಗೆ ತೆರಳಿದ್ದಾರೆ. ಕೋವಿಂದ್ ಶಿಕ್ಷಣ ಪಡೆದ ಶಾಲೆ ಸೇರಿದಂತೆ ಹಲವೆಡೆ ಕೋವಿಂದ್ ಭೇಟಿಯಾಗಲಿದ್ದಾರೆ.

click me!