
ಅಯೋಧ್ಯೆ(ಆ.05): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಐತಿಹಾಸಿಕ ದಿನವಿದು. ಶತಮಾನದ ಕನಸಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನಡೆಸಲಿದ್ದು, ಇಡೀ ದೇಶವೇ ಈ ಅಪರೂಪದ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದೆ. ಹೀಗಿರುವಾಗ ಇಂದು ಅಯೋಧ್ಯೆಯಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ? ಪ್ರಧಾನಿ ಮೋದಿ ಯಾವೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ? ಇಲ್ಲಿದೆ ವೇಳಾಪಟ್ಟಿ
ಪಂಚ ಶತಮಾನದ ಶಂಕು:ರಂಗೇರಿದ ಅಯೋಧ್ಯೆ, ಬೆಳಗಲಿದೆ 1.5 ಲಕ್ಷ ದೀಪ!
* ಬೆಳಗ್ಗೆ 9 ಗಂಟೆಗೆ ಉ ಪ್ರ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಆಗಮನ, ಒಂದು ಗಂಟೆ ಪೂಜೆಯಲ್ಲಿ ಭಾಗಿ
* 10 ಗಂಟೆಗೆ ರಾಮ ಜನ್ಮ ಸ್ಥಳದ ಪರಿಸರ ವೀಕ್ಷಣೆ
* 10:20 ರ ತನಕ ಅಂತಿಮ ವ್ಯವಸ್ಥೆಗಳ ಪರಿಶೀಲನೆ
* 10:30 ಕ್ಕೆ ಕೆಎಸ್ ಸಾಕೇತ್ ಪಿಜಿ ಕಾಲೇಜ್ ಹೆಲಿಪ್ಯಾಡ್‌ಗೆ ಯೋಗಿ ಆಗಮನ
* ಅಯೋಧ್ಯೆ ಯಲ್ಲಿ ನಾಲ್ಕು ತಾಸು ಇರಲಿರುವ ಪ್ರಧಾನಿ
* 10:45ಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಲಿಪ್ಯಾಡ್ ಗೆ ಆಗಮನ
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ಹಸ್ತಾಂತರ!
* ಪ್ರಧಾನಿಯನ್ನು ಸ್ವಾಗತಿಸಲಿರುವ ಸಿಎಂ ಯೋಗಿ ಆದಿತ್ಯನಾಥ್ & ಗವರ್ನರ್ ಆನಂದಿಬೆನ್ ಪಟೇಲ್
45 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿ
* 11:30ಕ್ಕೆ ಪ್ರಧಾನಿ ಮೋದಿ ಹನುಮಾನ್ ಗಡಿಗೆ ಭೇಟಿ, * 10 ನಿಮಿಷಗಳ ಕಾಲ ವಿಶೇಷ ಪೂಜೆ ಜೊತೆಗೆ ಹನುಮಾನ್ ದರ್ಶನ
* ಬಳಿಕ ರಾಮಲಲ್ಲಾ ದೇವಸ್ಥಾನಕ್ಕೆ ಭೇಟಿ, 12:10ಕ್ಕೆ ಪೂಜೆ
* 25 ನಿಮಿಷಗಳ ಕಾಲ ನಡೆಯುವ ರಾಮ ಲಲ್ಲಾ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ
* 12:30 ರಿಂದ 12:45ರೊಳಗೆ ಅಭಿಜಿನ್ ಲಗ್ನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ
* 1 ಗಂಟೆ 15 ನಿಮಿಷಗಳ ಕಾಲ ವೇದಿಕೆ ಕಾರ್ಯಕ್ರಮ
* 2:10 ಕ್ಕೆ ಹೆಲಿಪ್ಯಾಡ್ ಗೆ ವಾಪಸ್ಸಾಗಲಿರುವ ನರೇಂದ್ರ ಮೋದಿ
ಬಳಿಕ ದೆಹಲಿಗೆ ತೆರಳಲಿರುವ ಮೋದಿ
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ