ಕುಂಭಮೇಳ ಗದ್ದಲದ ನಡುವೆ ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ವಾರ್ಷಿಕೋತ್ಸವ, ಜನಸಾಮಾನ್ಯರಿಗೂ ಆಹ್ವಾನ

By Kannadaprabha News  |  First Published Jan 10, 2025, 7:24 AM IST

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಂಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜ.11ರಿಂದ ಜ.13ರವರೆಗೆ ಪ್ರಾಣಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಈ ಸಲ ಗಣ್ಯ ವ್ಯಕ್ತಿಗಳ ಜತೆಗೆ ಜನಸಾಮಾನ್ಯರನ್ನೂ ಗುರುತಿಸಿ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ಪ್ರಾಣಪ್ರತಿಷ್ಠೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೂ ಈ ಬಾರಿ ಅವಕಾಶ ಕಲ್ಪಿಸಲಾಗಿದೆ.


ಪಿಟಿಐ ಅಯೋಧ್ಯೆ: ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗೊಂಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜ.11ರಿಂದ ಜ.13ರವರೆಗೆ ಪ್ರಾಣಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ವಿಶೇಷವೆಂದರೆ ಈ ಸಲ ಗಣ್ಯ ವ್ಯಕ್ತಿಗಳ ಜತೆಗೆ ಜನಸಾಮಾನ್ಯರನ್ನೂ ಗುರುತಿಸಿ ಆಹ್ವಾನ ನೀಡಲಾಗಿದೆ.

ಕಳೆದ ವರ್ಷ ಜ.22ರಂದು ನಡೆದ ಐತಿಹಾಸಿಕ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗದ ಆಹ್ವಾನಿತ 110 ಗಣ್ಯರಿಗೆ ಟ್ರಸ್ಟ್‌ ಆಹ್ವಾನವನ್ನು ನೀಡಿದೆ. ಅಂಗಲ್ ಟೀಲಾ ಜಾಗದಲ್ಲಿ ಜರ್ಮನ್ ಹ್ಯಾಂಗರ್‌ ಟೆಂಟ್‌ ಸ್ಥಾಪಿಸಲಾಗಿದೆ. ಇದರಲ್ಲಿ 5 ಸಾವಿರ ಜನರು ಕುಳಿತುಕೊಳ್ಳಲು ಆಸನ ಹಾಕಲಾಗಿದೆ. ವಿಐಪಿಗಳನ್ನು ಬಿಟ್ಟು ಉಳಿದವರೆಲ್ಲಿ ಬಹುತೇಕರು ಜನಸಾಮಾನ್ಯರಾಗಿರಲಿದ್ದಾರೆ.

Tap to resize

Latest Videos

ಇದನ್ನೂ ಓದಿ: ವರ್ಷದ ಮೊದಲ ದಿನ ಅಯೋಧ್ಯೆಗೆ 3 ಲಕ್ಷ ಭಕ್ತರು: ಕರ್ನಾಟಕದಲ್ಲೂ ಪ್ರವಾಸಿಗರ ದಂಡು!

‘ಕಳೆದ ವರ್ಷ ಪ್ರಾಣಪ್ರತಿಷ್ಠೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಾಮಾನ್ಯ ಜನರನ್ನು ಆಹ್ವಾನಿಸಲು ಟ್ರಸ್ಟ್‌ ನಿರ್ಧರಿಸಿದೆ. ಅಂಗದ ಟೀಲಾದಲ್ಲಿ ಎಲ್ಲ 3 ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಲಾಗುತ್ತದೆ. ಕಳೆದ ಭಾಗಿಯಾಗುವುದಕ್ಕೆ ಸಾಧ್ಯವಾಗದ 110 ವಿಐಪಿಗಳು ಸೇರಿದಂತೆ ಅತಿಥಿಗಳಿಗೆ ಆಮಂತ್ರಣ ನೀಡಲಾಗಿದೆ’ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

ದೇವಾಲಯದ ಟ್ರಸ್ಟ್‌ನ ಪ್ರಕಾರ ಯಜ್ಞ ಸ್ಥಳದಲ್ಲಿ ಅಲಂಕಾರಗಳು ಮತ್ತು ಉತ್ಸವದ ಸಿದ್ಧತೆಗಳು ಮುಕ್ತಾಯದ ಹಂತದಲ್ಲಿದೆ. ಜ.11ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ದೇವಸ್ಥಾನದಲ್ಲಿ ರಾಮಲಲ್ಲಾ ಅಭಿಷೇಕ ಮಾಡಲಿದ್ದಾರೆ.ಕಾರ್ಯಕ್ರಮದ ದಿನದಂದು ಮಂಟಪ ಮತ್ತು ಯಜ್ಞಶಾಲೆಯಲ್ಲಿ ನಡೆಯುವ ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳನ್ನು ಒಳಗೊಂಡಿರುವ ಅದ್ಧೂರಿ ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶವನ್ನು ಕಲ್ಪಿಸಲಾಗಿದೆ.

click me!